ಕೆಜಿಎಫ್ ಟೀಮ್​ ಜೊತೆ ಕ್ರಿಕೆಟ್ ಆಡಿದ ಯಶ್: ವೀಡಿಯೋ ವೈರಲ್

Public TV
1 Min Read

ಉಡುಪಿ: ಸ್ಯಾಂಡಲ್‍ವುಡ್ ನಟ ಯಶ್ ರಿಲ್ಯಾಕ್ಸ್ ಮೂಡ್‍ನಲ್ಲಿ ಉಡುಪಿಯಲ್ಲಿ ಕಾಲಕಳೆಯುತ್ತಿದ್ದಾರೆ. ಈ ವೇಳೆ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಬೌಲಿಂಗ್‍ಗೆ ಯಶ್ ಭರ್ಜರಿ ಬ್ಯಾಟ್ ಬೀಸುತ್ತಾ ಕ್ರಿಕೆಟ್ ಆಡಿ ಎಂಜಾಯ್ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ 2 ಚಿತ್ರದ ಡಬ್ಬಿಂಗ್ ನಡೆಯುತ್ತಿದೆ. ಈ ನಿಮಿತ್ತವಾಗಿ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಕುಂದಾಪುರದ ಸ್ಟುಡಿಯೋಗೆ ಯಶ್ ಬಂದಿದ್ದಾರೆ. ಕೆಜಿಎಫ್ 2ಗೆ ಮ್ಯೂಸಿಕ್ ಪ್ರೋಸೆಸ್ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ. ಯಶ್ ತಮ್ಮ ಬಿಡುವಿನ ವೇಳೆಯಲ್ಲಿ ಭರ್ಜರಿ ಕ್ರಿಕೆಟ್ ಆಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರವಿ ಬಸ್ರೂರ್ ಮನೆ ಬಳಿ ಇರುವ ಮೈದಾನದಲ್ಲಿ ಬಿಡುವಿನ ವೇಳೆಯಲ್ಲಿ ಸ್ಥಳೀಯ ಹುಡುಗರೊಂದಿಗೆ ಯಶ್ ಕ್ರಿಕೆಟ್ ಆಡಿದ್ದಾರೆ. ಜಾಲಿ ಮೂಡ್‍ನಲ್ಲಿರುವ ನಟ ಯಶ್, ಟೀಂ ಜೊತೆ ಕ್ರಿಕೆಟ್ ಆಡುತ್ತಾ ಸಮಯ ಕಳೆಯುತ್ತಿದ್ದಾರೆ.

ಅಷ್ಟೇ ಅಲ್ಲದೆ ಯಶ್ ಉಡುಪಿಯಲ್ಲಿ ದೇಗುಲಕ್ಕೆ ಭೇಟಿ ಕೊಡುತ್ತಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಕುಂಭಾಶಿ ಆನೆಗುಡ್ಡೆ ದೇವಸ್ಥಾನಕ್ಕೆ ನಟ ಯಶ್ ಭೇಟಿ ಕೊಟ್ಟು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು ಸಾಥ್ ನೀಡಿದ್ದಾರೆ. ಏಪ್ರಿಲ್ 14 ರಂದು ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ 2 ರಿಲೀಸ್ ಆಗಲಿದೆ. ಚಿತ್ರ ರಿಲೀಸ್‍ಗು ಮುನ್ನವೇ ಯಶ್ ದೇಗುಲಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡುತ್ತಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *