ಮಂಡ್ಯ: ನನಗೆ ಕೇಂದ್ರದ ಬಜೆಟ್ ಮೇಲೆ ನಂಬಿಕೆ ಇಲ್ಲ. ಕರ್ನಾಟಕ ರಾಜ್ಯದ ಮೇಲೆ ಕೇಂದ್ರ ಇಂದಿನಿಂದಲೂ ಮಲತಾಯಿ ಧೋರಣೆ ತೋರುತ್ತಿದೆ ಎಂದು ಮಾಜಿಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ನೀರಾವರಿ ಯೋಜನೆಗಳನ್ನು ನೆನೆಗುದಿಗೆ ಬಿದ್ದಿದೆ. ನೆನೆಗುದಿಗೆ ಬಿದ್ದ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಮಾಡಬೇಕಿದೆ. ಮೇಕೆದಾಟು, ಮಹದಾಯಿ, ಭದ್ರ ಮೇಲ್ದಂಡೆ ಯೋಜನೆ ಸೇರಿ ಅನೇಕ ಯೋಜನೆಗಳನ್ನು ಮಾಡಬೇಕಿದೆ. ಕೇಂದ್ರ ಬಜೆಟ್ ಬಗ್ಗೆ ರಾಜ್ಯದ ಜನತೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.
ರೈಲ್ವೆ ಯೋಜನೆ, ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚು ಹೊತ್ತು ಕೊಡಬೇಕಿದೆ. ಈ ಬಗ್ಗೆ ಹಲವು ವರ್ಷಗಳಿಂದ ನಮ್ಮ ಬೇಡಿಕೆ ಇದು. ಆದರೆ ಕೇಂದ್ರ ಸರ್ಕಾರ ನಡವಳಿಕೆ ಬಗ್ಗೆ ನನಗೆ ಈಗಲೂ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದಾರಿ ತಪ್ಪಿದ ಸಂಸದ ಡಿಕೆ ಸುರೇಶ್: ಸುರೇಶ್ ಕುಮಾರ್ ತಿರುಗೇಟು