ವಾಣಿಜ್ಯ ನಗರಿಯಲ್ಲಿ ಎಲೆಕ್ಟ್ರಿಕ್ ಐಕಾನಿಕ್ ಡಬಲ್ ಡೆಕ್ಕರ್ ಬಸ್‍ಗಳು ಸಂಚರಿಸಲಿವೆ: ಆದಿತ್ಯ ಠಾಕ್ರೆ

Public TV
1 Min Read

ಮುಂಬೈ: ವಾಣಿಜ್ಯ ನಗರಿಯಲ್ಲಿ ಐಕಾನಿಕ್ ಡಬಲ್ ಡೆಕ್ಕರ್ ಬಸ್‍ಗಳು ಸಂಚರಿಸಲಿವೆ. ದಹನಕಾರಿ ಎಂಜಿನ್‍ಗಳ ಬದಲಿಗೆ ಎಲೆಕ್ಟ್ರಿಕ್ ಮೊಟಾರುಗಳು ಈ ಬಸ್‍ಗಳಿಗೆ ಶಕ್ತಿ ನೀಡುತ್ತವೆ. ಬೃಹತ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಕಂಪನಿಯು ಮುಂಬೈಗೆ 900 ಎಸಿ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‍ಗಳನ್ನು ನೀಡಲಿದೆ ಎಂದು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ತಿಳಿಸಿದ್ದಾರೆ.

ನಗರದಲ್ಲಿ ಐಕಾನಿಕ್ ಡಬಲ್ ಡೆಕ್ಕರ್ ಬಸ್‍ಗಳ ಸಂಚಾರವನ್ನು ಪ್ರಾರಂಭಿಸಲು ನಾನು ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವೈಯಕ್ತಿಕವಾಗಿ ಉತ್ಸುಕರಾಗಿದ್ದೇವೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ನೀಡಲಾಗುವ ಕೋವ್ಯಾಕ್ಸಿನ್‌ನ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಒಪ್ಪಿಗೆ

ಬೆಸ್ಟ್ ಕಂಪನಿಯ 900 ಎಲೆಕ್ಟ್ರಿಕ್ ಬಸ್‍ಗಳನ್ನು ರೋಡಿಗೆ ಇಳಿಸುವ ಯೋಜನೆಯಲ್ಲಿದ್ದೇವೆ. ನಗರವನ್ನು ಹೊಗೆ ರಹಿತ ಮಾಡುವ ಉದ್ದೇಶ ನಮ್ಮದಾಗಿದೆ. 10,000 ಎಲೆಕ್ಟ್ರಿಕ್/ಕ್ಲೀನ್ ಪರ್ಯಾಯ ಇಂಧನ ಬಸ್‍ಗಳನ್ನು ಹೆಚ್ಚಿಸುವುದು ಮತ್ತು ಗರಿಷ್ಠ ಡಬಲ್ ಡೆಕ್ಕರ್ ಬಸ್‍ಗಳನ್ನು ಹೊಂದುವುದು ನಮ್ಮ ಗುರಿಯಾಗಿದೆ. ಇದು ನಮ್ಮ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ ಎಂದರು. ಇದನ್ನೂ ಓದಿ: ಟಾಟಾ ಸಂಸ್ಥೆಗೆ ಏರ್‌ ಇಂಡಿಯಾ ಅಧಿಕೃತ ಹಸ್ತಾಂತರ

ಬಿಡುವಿಲ್ಲದ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‍ಗಳು ಹೆಚ್ಚಾಗಿ ಸಂಚರಿಸಲು ಅನುವು ಮಾಡಿಕೊಡಬೇಕೆಂದು ಇತರ ನಗರಗಳ ಮುನ್ಸಿಪಲ್ ಕಮಿಷನರ್‍ಗಳಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *