ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ಬಿಟ್ಟು ಎಲ್ಲಿಗೂ ಹೋಗಲ್ಲ: ಸಿದ್ದರಾಮಯ್ಯ

Public TV
1 Min Read

ಬೆಂಗಳೂರು: ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ಬಿಟ್ಟು ಹೊಗಲ್ಲ. ಅವರು ಎಲ್ಲಿಗೂ ಹೋಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ಬಿಟ್ಟು ಹೊಗಲ್ಲ. ಅವರು ಎಲ್ಲಿಗೂ ಹೋಗಲ್ಲ. ಬಹಳ ಸಾರಿ ಪಕ್ಷ ಬಿಡುವ ಬಗ್ಗೆ ಮಾತನಾಡಿದ್ದಾರೆ. ಕೋಪದಲ್ಲಿ ಆ ತರಹ ಮಾತನಾಡಿದ್ದಾರೆ. ನಾನು ಅವರ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ.

ದೇವೇಗೌಡರು ರಾಜ್ಯಸಭಾ ಸ್ಥಾನ ಇಬ್ರಾಹಿಂಗೆ ತಪ್ಪಿಸಿದ್ದರು. ಈಗ ಜೆಡಿಎಸ್ ಹೋಗುವ ಬಗ್ಗೆ ಗೊತ್ತಿಲ್ಲ. ಅವನು ನನಗೆ ಒಳ್ಳೆಯ ಸ್ನೇಹಿತ ಏನೇ ಹೇಳಿದರೂ ಹಾರೈಸಿದ ಹಾಗೆ, ನಾವೆಲ್ಲ ಜನಾತಾ ದಳದಲ್ಲಿ ಇದ್ದೇವು. ಹಾಗಾಗಿ ಮುಲಾಯಂ ಸಿಂಗ್, ದೇವೇಗೌಡ ಜೊತೆ ಮಾತನಾಡಿರಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ

ಬಾದಾಮಿಗೆ ನಿಲ್ಲುವ ಬಗ್ಗೆ ಹಲವು ಜನರು ಹೇಳಿದ್ದಾರೆ. ಅದರಲ್ಲಿ ಇವರು ಒಬ್ಬರು ಅಷ್ಟೇ ಎಂದರು. ಇನ್ನೂ ಹಣಬಲ ತೊಲ್ಬಲ ಇದ್ದವರಿಗೆ ಮಾತ್ರ ಸ್ಥಾನಮಾನ ಎಂಬ ಸಿಎಂ ಇಬ್ರಾಹಿಂ ಆರೋಪಕ್ಕೆ ಹಾಗಾದರೆ ಇಬ್ರಾಹಿಂಗೆ ಎರಡು ಬಾರಿ ಪರಿಷತ್ತು ಸ್ಥಾನ ನೀಡಿದ್ದೇವೆ. ಪ್ಲಾನಿಂಗ್ ಕಮಿಷನ್ ಉಪಾಧ್ಯಕ್ಷ ಮಾಡಿದ್ದೆ ಎಂದು ತಿರುಗೇಟಿ ನೀಡಿದ್ದಾರೆ.

ಬೇರೆ ಸಂಬಂಧಗಳು ಮುಂದುವರೆಯುತ್ತದೆ ಪಕ್ಷದ ವಿಚಾರ ಇಲ್ಲಿಗೆ ಮುಗಿಯಿತು ಎಂದು ಸಿಎಂ ಇಬ್ರಾಹಿಂ ಕೋಪದಲ್ಲಿ ಮಾತನಾಡಿದ್ದಾನೆ. ನಾನು ಸಮಾಧಾನ ಮಾಡುತ್ತೇನೆ. ಪಕ್ಷ ಬಿಟ್ಟು ಹೋಗದ ಹಾಗೆ ನಾನು ಮಾತನಾಡುತ್ತೇನೆ. ಕೋಪ ತಣ್ಣಗಾದ ನಂತರ ಅವನೇ ನನಗಾಗಿ ಸ್ಪೆಷಲ್ ಬಿರಿಯಾನಿ ಮಾಡಿ ತಿನ್ನಲು ಕರೆದೇ ಕರೆಯುತ್ತಾನೆ ಎಂದಿದ್ದಾರೆ. ಇದನ್ನೂ ಓದಿ: ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ಕೇಂದ್ರ ಸರ್ಕಾರ ಮಾಡುತ್ತಿದೆ: ಎಚ್‍ಡಿಕೆ ವಾಗ್ದಾಳಿ

ಸುನೀಲ್ ಕುಮಾರ ಟ್ವೀಟ್ ವಿಚಾರ: ಆರ್‍ಎಸ್‍ಎಸ್‍ನಿಂದ ಬಂದವರು ಹಾಗೆ ಮಾತನಾಡುತ್ತಾರೆ. ಹಿಂದೂ ಹಿಂದೂತ್ವದ ಬಗ್ಗೆ ಮಾತನಾಡುತ್ತಾರೆ. ಆರ್‍ಎಸ್‍ಎಸ್‍ನಿಂದ ಏನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *