ಆಂಧ್ರಪ್ರದೇಶದಲ್ಲಿ 13 ಹೊಸ ಜಿಲ್ಲೆ ರಚನೆ – ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿಕೆ

Public TV
1 Min Read

ಅಮರಾವತಿ: ಆಂಧ್ರಪ್ರದೇಶದಲ್ಲಿ ಪ್ರಮುಖ ಆಡಳಿತ ಸುಧಾರಣೆ ತರಲು ಜಗನ್ ಮೋಹನ್ ರೆಡ್ಡಿ ಸರ್ಕಾರ ಇಂದು ಬೆಳಿಗ್ಗೆ 13 ಹೊಸ ಜಿಲ್ಲೆಗಳ ರಚನೆಗೆ ಅಧಿಸೂಚನೆಯನ್ನು ಹೊರಡಿಸಿದೆ.

ಆಡಳಿತವನ್ನು ಸರಾಗಗೊಳಿಸಲು ಮತ್ತು ಅಧಿಕಾರಿಗಳ ಪ್ರವೇಶವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಇರುವ 13 ಜಿಲ್ಲೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. 25 ಲೋಕಸಭಾ ಕ್ಷೇತ್ರಗಳನ್ನು ಪ್ರತಿಯೊಂದನ್ನು ಜಿಲ್ಲೆಯಾಗಿ ಪುನಾರಚಿಸಲಾಗಿದೆ. ಅರಕು ಕ್ಷೇತ್ರವನ್ನು ನಾಲ್ಕು ಕ್ಷೇತ್ರಗಳಾಗಿ ರಚಿಸಲಾಗಿದೆ.

ಆಂಧ್ರಪ್ರದೇಶ ಜಿಲ್ಲೆಗಳ ರಚನೆ ಕಾಯ್ದೆಯ ಸೆಕ್ಷನ್ 3(5) ಅಡಿ ಜಿಲ್ಲೆಗಳನ್ನು ರಚನೆ ಮಾಡಲಾಗಿದ್ದು, ಈ ಮೂಲಕ ಆಂಧ್ರಪ್ರದೇಶದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಆತ್ಮ ಗೌರವ ಇದ್ದವರು ಯಾರೂ ಕಾಂಗ್ರೆಸ್‍ಗೆ ವಾಪಸ್ ಹೋಗಲ್ಲ: ಬಿ.ಸಿ.ಪಾಟೀಲ್

ಶ್ರೀ ಬಾಲಾಜಿ, ಅನ್ನಮಯ್ಯ, ಶ್ರೀ ಸತ್ಯಸಾಯಿ, ನಂದ್ಯಾಲ, ಬಾಪಟ್ಲ, ಪಲ್ನಾಡು, ಏಲೂರು, ಎನ್‍ಟಿಆರ್, ಅನಕಾಪಲ್ಲಿ, ಕಾಕಿನಾಡ, ಕೋನಾ ಸೀಮಾ, ಮಾನ್ಯಂ, ಅಲ್ಲೂರಿ ಸೀತಾರಾಮ ರಾಜು ನೂತನ ಜಿಲ್ಲೆಗಳಾಗಿದೆ. ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ಜಿಲ್ಲೆ ಸ್ಥಾನ ಬದಲಾಗುವ ನೀರಿಕ್ಷೆ ಇರಲಿಲ್ಲ: ಸುಧಾಕರ್

ಮುಂದಿನ ಯುಗಾದಿ ಹಬ್ಬದ ವೇಳೆಗೆ ಹೊಸ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಬೇಕೆಂದು ಆಂಧ್ರಪ್ರದೇಶ ಸರ್ಕಾರ ಗುರಿ ಹೊಂದಿದೆ. ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ ಪರಿಸ್ಥಿತಿಗಳು, ಮತ್ತು ಸೌಲಭ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಹೊಸ ಜಿಲ್ಲೆಗಳನ್ನು ರಚನೆ ಮಾಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಇದನ್ನೂ ಓದಿ: ಸಿಎಂ ಅಭ್ಯರ್ಥಿ ಘೋಷಿಸಲಿ, ಯಾರು ಉಳಿಯುತ್ತಾರೆ, ಹೋಗುತ್ತಾರೆ ನೋಡೋಣ: ಸಿ.ಟಿ. ರವಿ

Share This Article
Leave a Comment

Leave a Reply

Your email address will not be published. Required fields are marked *