ಯಶ್, ಅಲ್ಲು ಅರ್ಜುನ್ ಬಾಲಿವುಡ್‍ನಿಂದ ಭ್ರಷ್ಟರಾಗಬೇಡಿ: ಕಂಗನಾ ರಣಾವತ್

Public TV
1 Min Read

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲಾ ಒಂದು ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಸ್ಯಾಂಡಲ್‍ವುಡ್ ನಟ ಯಶ್ ಹಾಗೂ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಒಂದು ಖಡಕ್ ಸಲಹೆಯನ್ನು ಕೊಟ್ಟಿದ್ದಾರೆ.

ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಂಗನಾ ದಕ್ಷಿಣದ ಚಿತ್ರಗಳು ಹಾಗೂ ನಾಯಕ ನಟರನ್ನು ಹಾಡಿ ಹೊಗಳಿದ್ದಾರೆ. ಇತ್ತೀಚೆಗಷ್ಟೇ ಪುಷ್ಪ ಸಿನಿಮಾ ಬಾಲಿವುಡ್‍ನಲ್ಲಿ ಪಡೆದ ಅಪಾರ ಜನಪ್ರಿಯತೆ ಹಾಗೂ ಯಶ್ ನಟನೆಯ ಕೆಜಿಎಫ್ ಗಳಿಸಿದ್ದ ಮೆಚ್ಚುಗೆ ಮೊದಲಾದವುಗಳ ಹಿನ್ನೆಲೆಯಲ್ಲಿ ಕಂಗನಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುತ್ತಾರೆ. ಪಾಶ್ಚಾತ್ಯರಿಂದ ಪ್ರಭಾವಿತರಾಗದೇ ತಮ್ಮ ಕುಟುಂಬವನ್ನು ಹಾಗೂ ಸಂಬಂಧವನ್ನು ಪ್ರೀತಿಸುತ್ತಾರೆ. ಅವರ ವೃತ್ತಿಪರತೆಗೆ ಸರಿಸಾಟಿ ಇಲ್ಲ ಎಂದು ದಕ್ಷಿಣದ ಚಿತ್ರಗಳು ಹಾಗೂ ಇಲ್ಲಿನ ನಾಯಕ ನಟರು ಏಕೆ ಖ್ಯಾತಿ ಗಳಿಸುತ್ತಿದ್ದಾರೆ ಎಂಬುದನ್ನು ವಿವರಿಸಿದ್ದಾರೆ. ಬಾಲಿವುಡ್‍ನಿಂದ ಈ ಪರಂಪರೆಯನ್ನು ಹಾಳಾಗಲು ಬಿಡಬೇಡಿ. ಬಾಲಿವುಡ್‍ನಿಂದ ಭ್ರಷ್ಟರಾಗಬೇಡಿ ಎಂದುಬರೆದುಕೊಂಡು ಸ್ಟಾರ್ ನಟರಿಗೆ ಸಲಹೆಯನ್ನು ಕೊಟ್ಟಿದ್ದಾರೆ. ಇದನ್ನೂ ಓದಿ:  ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ, ಮನವಿ ಮೊದಲಿನಂತೆಯೇ ಇರಲಿದೆ: ಅನುಷ್ಕಾ ಶರ್ಮಾ

ಹಲವು ಬಾರಿ ವಿವಾದಗಳನ್ನೂ ಸೃಷ್ಟಿಸಿದೆ. ಆದರೆ ಈ ಬಾರಿ ಕಂಗನಾ ಖ್ಯಾತ ತಾರೆಯರನ್ನು ಹೊಗಳಿ ಸುದ್ದಿಯಾಗಿದ್ದಾರೆ. ಹೌದು. ಇತ್ತೀಚೆಗೆ ಅವರು ದಕ್ಷಿಣದ ಜನಪ್ರಿಯ ನಟರಾದ ಯಶ್, ಅಲ್ಲು ಅರ್ಜುನ್ ಅವರನ್ನು ಹಾಡಿ ಹೊಗಳಿದ್ದಾರೆ. ಅಲ್ಲದೇ ದಕ್ಷಿಣದ ಸೂಪರ್ ಹಿಟ್ ಸಿನಿಮಾಗಳ ಯಶಸ್ಸಿಗೆ ಕಾರಣವೇನು ಎಂಬುದನ್ನು ತಮ್ಮ ದೃಷ್ಟಿಕೋನದಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರಲು ಸಿದ್ಧರಾದ ವಜ್ರಕಾಯ ಬೆಡಗಿ ಶುಭ್ರಾ ಅಯ್ಯಪ್ಪ

Share This Article
Leave a Comment

Leave a Reply

Your email address will not be published. Required fields are marked *