ಪಿಂಚಣಿ ಪಡೆಯಲು ಚಿಕ್ಕಪ್ಪನ ಶವವನ್ನ ಪೋಸ್ಟ್ ಆಫೀಸ್‍ಗೇ ತಂದ!

Public TV
2 Min Read

ಡಬ್ಲಿನ್: ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನ ಶವವನ್ನು ಅಂಚೆ ಕಛೇರಿಗೆ ತೆಗೆದುಕೊಂಡು ಬಂದು ಪಿಂಚಣಿಯನ್ನು ಕೇಳಿರುವ ಘಟನೆ ಐರ್ಲೆಂಡ್‍ನಲ್ಲಿ ನಡೆದಿದೆ.

ಪಿಂಚಣಿ ಹಣ ಪಡೆಯಬೇಕಾದರೆ ಅವರೇ ಕಛೇರಿಗೆ ಬರಬೇಕು ಎಂದು ಸಿಬ್ಬಂದಿ ತಿಳಿಸಿದ್ದರಿಂದ ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನನ್ನು ಕರೆದುಕೊಂಡು ಅಂಚೆ ಕಛೇರಿಗೆ ಬಂದಿದ್ದಾನೆ. ಆದರೆ ಸಿಬ್ಬಂದಿಗೆ ಆ ವ್ಯಕ್ತಿ ಬದುಕಿಲ್ಲ ಎಂದು ತಿಳಿದು, ಇವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಆಗ ಆ ವ್ಯಕ್ತಿ, ‘ಅವರು ಮೃತಪಟ್ಟಿದ್ದರೆಂದು ನನಗೆ ತಿಳಿದಿರಲಿಲ್ಲ’ ಎಂದು ಶಾಕ್ ಆಗಿದ್ದಾರೆ. ಇದನ್ನೂ ಓದಿ: ಜೂಹಿ ಚಾವ್ಲಾ ದಂಡವನ್ನು 20 ಲಕ್ಷ ರೂ.ದಿಂದ 2 ಲಕ್ಷಕ್ಕೆ ಇಳಿಸಿದ ಹೈಕೋರ್ಟ್!

Carlow body: Inquiry after 'dead man' taken into post office - BBC News

ಯಾರಿದು?
ಶುಕ್ರವಾರ ಬೆಳಗ್ಗೆ ಐರ್ಲೆಂಡ್‍ನ ಕೌಂಟಿ ಕಾರ್ಲೋದಲ್ಲಿನ ಅಂಚೆ ಕಚೇರಿಗೆ 40 ವರ್ಷ ವಯಸ್ಸಿ ಡೆಕ್ಲಾನ್ ಹಾಘ್ನಿ ಅವರು 66 ವರ್ಷದ ಪೀಡರ್ ಡಾಯ್ಲ್ ಅವರನ್ನು ಪಿಂಚಣಿ ಪಡೆಯಲು ಕರೆದುಕೊಂಡು ಹೋಗಿದ್ದರು. ಈ ವೇಳೆ ಪೀಡರ್ ಡಾಯ್ಲ್ ಮೃತಪಟ್ಟಿದ್ದಾರೆ ಎಂದು ಸಿಬ್ಬಂದಿ ಕಂಡುಹಿಡಿದಿದ್ದಾನೆ. ನಂತರ ಈ ವಿಚಾರವನ್ನು ಕಛೇರಿಗೆ ತಿಳಿಸಿದ್ದಾನೆ. ಆಗ ಡೆಕ್ಲಾನ್ ಹಾಘ್ನಿ ನನಗೆ ಈ ವಿಚಾರ ಗೊತ್ತೇ ಇಲ್ಲ ಎಂದು ಶಾಕ್ ಆಗಿದ್ದಾರೆ.

Irishman who brought his dead uncle into a post office to collect his  pension insists he was alive | Daily Mail Online

ಸಿಬ್ಬಂದಿ ಇವರು ಹಣಕ್ಕೆ ಬೇಕೆಂದು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆಗ ಹಾಘ್ನಿ ಅವರು, ನನಗೆ ನನ್ನ ಚಿಕ್ಕಪ್ಪ ಮೃತಪಟ್ಟಿರುವುದು ತಿಳಿದಿರಲಿಲ್ಲ. ಈ ರೀತಿ ಮಾಡಲು ನಾನು ಮೂರ್ಖ ಅಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ನನ್ನ ಚಿಕ್ಕಪ್ಪ ದಾರಿಯಲ್ಲಿ ನನ್ನ ತೋಳುಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದು, ಈ ವಿಷಯವನ್ನು ಹಾಘ್ನಿ ಅವರೇ ಪೊಲೀಸರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆ ಐರಿಶ್ ಪೊಲೀಸರಿಗೆ ಹಾಘ್ನಿ ಅವರನ್ನು ಬಂಧಿಸಿಲ್ಲ.

ಆದರೆ ಗ್ರಾಮದ ಜನರೆಲ್ಲ ಹಾಘ್ನಿಯೇ ತನ್ನ ಚಿಕ್ಕಪ್ಪನನ್ನು ಕೊಲೆ ಮಾಡಿದ್ದಾನೆ ಎಂದು ನಂಬಿದ್ದು, ಎಲ್ಲರೂ ಅವರ ಬಗ್ಗೆಯೇ ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಮೌನ ಮುರಿದ ಹಾಘ್ನಿ, ನನ್ನ ಚಿಕ್ಕಪ್ಪನ ಬಳಿಯೇ ನಾನು ಏಕೆ ಕಳ್ಳತನ ಮಾಡಲಿ? ಮೃತ ವ್ಯಕ್ತಿಯ ಪಿಂಚಣಿ ಕೇಳಲು ನಾನೇನು ಮೂರ್ಖನಲ್ಲ ಎಂದು ತನ್ನ ನೋವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಾಲ ವಸೂಲಿಯಲ್ಲೂ ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಎಎಪಿ ಆರೋಪ

Hunt for men who brought dead body into post office in bizarre bid to collect pension - World News - Mirror Online

ಸ್ಟೇಪಲ್‍ಸ್ಟೌನ್ ರಸ್ತೆಯಲ್ಲಿರುವ ಪೋಸ್ಟ್ ಆಫೀಸ್‍ಗೆ ಹೋಗುವ ದಾರಿಯಲ್ಲಿ ನನ್ನ ಚಿಕ್ಕಪ್ಪ ಡಾಯ್ಲ್ ಹೃದಯಾಘಾತದಿಂದ ಸಾವನ್ನಪ್ಪಿರಬಹುದು. ಅವರು ಮನೆಯಿಂದ ಹೊರಡುವಾಗ ಸರಿಯಾಗಿಯೇ ಇದ್ದರು. ಆದರೆ ಹೇಗೆ ಮೃತಪಟ್ಟಿದ್ದಾರೆ ಎಂದು ನನಗೆ ತಿಳಿದಿಲ್ಲ. ಅವರು ಈ ಹಿಂದೆ ಹೃದಯಾಘಾತದಿಂದ ಬಳಲುತ್ತಿದ್ದರು. ಆದರೆ ಕಛೇರಿಗೆ ನಾವು ಅವರನ್ನು ಕರೆದುಕೊಂಡು ಹೋಗುವವರೆಗೂ ಅವರು ಮೃತಪಟ್ಟಿದ್ದಾರೆ ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿ ಶಾಕ್ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *