ಶಿವಸೇನಾ ಹಿಂದುತ್ವದ ಹೆಸರಲ್ಲಿ ಚುನಾವಣೆ ಎದುರಿಸಿದ ಮೊದಲ ಪಕ್ಷ: ಸಂಜಯ್ ರಾವತ್

Public TV
1 Min Read

ಮುಂಬೈ: ಹಿಂದುತ್ವದ ಹೆಸರಲ್ಲಿ ಚುನಾವಣೆ ಎದುರಿಸಿದ ದೇಶದ ಮೊದಲ ರಾಜಕೀಯ ಪಕ್ಷ ಶಿವಸೇನಾ ಎಂದು ಹಿರಿಯ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಮುಂಬೈನ ವಿಲೇಪಾರ್ಲೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯನ್ನು ಉಲ್ಲೇಖಿಸಿ, ಶಿವಸೇನಾ ಅಭ್ಯರ್ಥಿ ರಮೇಶ್ ಪ್ರಭು ಹಿಂದುತ್ವದ ಅಜೆಂಡಾದಲ್ಲಿ ಸ್ಪರ್ಧಿಸಿದ್ದಾರೆ. ಶಿವಸೇನೆ ಹಿಂದುತ್ವದ ಉದ್ದೇಶಕ್ಕೆ ಕೇವಲ ಬಾಯಿಮಾತಿನ ಸೇವೆ ಸಲ್ಲಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಸಂಜಯ್ ರಾವತ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

1987- 88ರ ಸಮಯದಲ್ಲಿ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಮತ ಕೇಳಿತ್ತು. ಆ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಿತ್ತು. ನಂತರವೇ ಬಿಜೆಪಿ ಶಿವಸೇನೆ ಜೊತೆ ಮೈತ್ರಿಗೆ ಮುಂದಾಗಿತ್ತು. ಹಿಂದೂಗಳ ಮತ ಒಡೆದು ಹಂಚಿಹೋಗುವುದನ್ನು ತಡೆಗಟ್ಟಲು ಭಾಳಾ ಸಾಬ್ ಠಾಕ್ರೆ ಅಂದು ಮೈತ್ರಿಗೆ ಮನಸ್ಸು ಮಾಡಿದ್ದರು. ಈ ಇತಿಹಾಸ ಬಿಜೆಪಿಯವರಿಗೆ ಮರೆತುಹೋಗಿದೆ ಎಂದು ರಾವುತ್ ಅಣಕವಾಡಿದ್ದಾರೆ.

ಬಿಜೆಪಿಯು ಹಿಂದುತ್ವದ ಮೇಲೆ ಮೈತ್ರಿಗಾಗಿ ಶಿವಸೇನೆಯನ್ನು ಸಂಪರ್ಕಿಸಿತು, ಬಾಳಾಸಾಹೇಬ್ (ಠಾಕ್ರೆ) ಅವರು ಹಿಂದೂ ಮತಗಳ ವಿಭಜನೆಯನ್ನು ಬಯಸಲಿಲ್ಲ. ಸಮಕಾಲೀನ ಬಿಜೆಪಿ ನಾಯಕರಿಗೆ ಈ ಇತಿಹಾಸದ ಅರಿವಿಲ್ಲ ಎಂದು ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ವಿರುದ್ಧ ರಾವತ್ ಗುಡಿಗಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ತಮ್ಮ ಮಾಜಿ ಮಿತ್ರ ಪಕ್ಷವು ಅಧಿಕಾರಕ್ಕಾಗಿ “ಪೊಳ್ಳು” ಹಿಂದುತ್ವವನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ನಂತರ ಭುಗಿಲೆದ್ದಿರುವ ಶಿವಸೇನೆ ಮತ್ತು ಬಿಜೆಪಿ ನಡುವಿನ ಮಾತಿನ ಯುದ್ಧದ ನಡುವೆ ರಾವುತ್ ಅವರ ಹೇಳಿಕೆಗಳು ನೀಡಿದ್ದಾರೆ. ಇದನ್ನೂ ಓದಿ: ಆಟೋ ಚಾಲಕನಿಂದ ಮಹಿಳೆಗೆ ಕಿರುಕುಳ – ಆರೋಪಿ ಅರೆಸ್ಟ್

ಶಿವಸೇನೆಯ ವಿರುದ್ಧ ವಾಗ್ದಾಳಿ ನಡೆಸಿದ ಫಡ್ನವಿಸ್, ಶಿವಸೇನೆಯ ಹಿಂದುತ್ವ ಕೇವಲ ಕಾಗದದ ಮೇಲಿದೆ ಮತ್ತು ಕೇವಲ ಭಾಷಣಗಳಲ್ಲಿ ಉಲ್ಲೇಖವನ್ನು ಕಂಡುಕೊಳ್ಳುತ್ತದೆ. ಆದರೆ ರಾಮಜನ್ಮಭೂಮಿ ಚಳವಳಿಯ ಸಂದರ್ಭದಲ್ಲಿ ಗುಂಡುಗಳು ಮತ್ತು ಲಾಠಿಗಳನ್ನು ಎದುರಿಸಿದವರು ತಮ್ಮ ಪಕ್ಷದವರು ಎಂದು ಹೇಳಿದರು. ಇದನ್ನೂ ಓದಿ: ಪ್ರತಿಪಕ್ಷಗಳು ಮಾಫಿಯಾವನ್ನು ರಕ್ಷಿಸುತ್ತಿದೆ: ಮಾಯಾವತಿ

Share This Article
Leave a Comment

Leave a Reply

Your email address will not be published. Required fields are marked *