ಇಂದು ಹಿಜಬ್, ನಾಳೆ ಷರಿಯತ್ ಕಾನೂನು – ಉಡುಪಿ ಹಿಂದೂ ಜಾಗರಣಾ ವೇದಿಕೆ ಗರಂ

Public TV
2 Min Read

ಉಡುಪಿ: ಜಿಲ್ಲೆಯಲ್ಲಿ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಹಿಜಬ್ ಹಕ್ಕಿಗಾಗಿ 8 ಮುಸಲ್ಮಾನ ವಿದ್ಯಾರ್ಥಿನಿಯರು ಹೋರಾಟ ಮಾಡುತ್ತಿದ್ದಾರೆ. ಕಾಲೇಜಿಗೆ ಹಿಂದೂ ಜಾಗರಣಾ ವೇದಿಕೆ ಭೇಟಿ ನೀಡಿದೆ. ಶಾಲೆ ಕಾಲೇಜಿನಲ್ಲಿ ಸಮವಸ್ತ್ರ, ಸಮಾನತೆ ಇರಬೇಕು. ಬುರ್ಖಾ, ಟೋಪಿ ಕೇಳಿ ಮುಂದೆ ಷರಿಯತ್ ಕಾನೂನು ಕೇಳುತ್ತಾರೆ ಕೊಡುತ್ತೀರಾ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.

ಮತೀಯ ಸಂಘಟನೆಯೊಂದು ವಿದ್ಯಾರ್ಥಿಗಳಿಗೆ ವಿಷ ಬೀಜ ಬಿತ್ತಿದೆ. ದೇಶದ ಮಾನ ಹರಣಕ್ಕೆ ಅಂತರಾಷ್ಟ್ರೀಯ ಷಡ್ಯಂತ್ರ ನಡೆಯುತ್ತಿದೆ. ಉಡುಪಿಯ ಶೈಕ್ಷಣಿಕ ಖ್ಯಾತಿ ಕುಗ್ಗಿಸಲು ಷಡ್ಯಂತ್ರ ನಡೆಯುತ್ತಿದೆ. ಶೈಕ್ಷಣಿಕ ವಾತಾವರಣ ಕೆಡಿಸಲು ಹಿಂದೂ ಜಾಗರಣಾ ವೇದಿಕೆ ಬಿಡುವುದಿಲ್ಲ. ಕಾಲೇಜಲ್ಲಿ ಇಸ್ಲಾಂ ಕಾನೂನು ಜಾರಿಗೆ ತರುವ ಅವಕಾಶ ಕೊಡಬಾರದು. ಇವರಿಗೆ ಸರ್ಕಾರಿ ಶಿಕ್ಷಣ ಬೇಡದಿದ್ದರೆ ಮದರಾಸ ಶಿಕ್ಷಣ ಪಡೆಯಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಿಜಬ್‌ಗಾಗಿ ಮುಂದುವರಿದ ಹೋರಾಟ

ಹಿರಿಯ ಅಧಿಕಾರಿಗಳು ಪ್ರಾಂಶುಪಾಲರಿಗೆ ಒತ್ತಡ ಹಾಕುತ್ತಿರುವ ಬಗ್ಗೆ ಸಂಘಟನೆ ಗಮನಕ್ಕೆ ಬಂದಿದೆ. ಸರ್ಕಾರ, ಇಲಾಖೆ ಮೂಲಭೂತ ಮತೀಯ ಸಂಘಟನೆಗೆ ಬೆಂಬಲ ನೀಡಿದರೆ ನಾವು ಸಹಿಸಲ್ಲ. ಮುಸಲ್ಮಾನ ವಿದ್ಯಾರ್ಥಿಗಳು ಇಷ್ಟು ವರ್ಷ ಇಲ್ಲದ ವಿವಾದ ಶುರು ಮಾಡಿದ್ದಾರೆ. ನೂರು ಮುಸಲ್ಮಾನ ಹೆಣ್ಮಕ್ಕಳಲ್ಲಿ ಎಂಟು ಮಂದಿಯದ್ದು ಮಾತ್ರವಲ್ಲ ತಕರಾರು, ಶಿಕ್ಷಣಕ್ಕೆ ಧಾರ್ಮಿಕತೆ ಬೆರೆಸಿದರೆ ಇದು ಸರಿಯಲ್ಲ.

ಸರ್ಕಾರ ಜಾತಿ ಮತ ಧರ್ಮದ ಎಲ್ಲೆ ಮೀರಲು ಸಮವಸ್ತ್ರ ತಂದಿದೆ. ವೈಯಕ್ತಿಕ ಸ್ವಾತಂತ್ರ್ಯ ಹೇಳುತ್ತಾ ಟೋಪಿ ಬುರ್ಖಾ, ಶರಿಯಾ ಕಾನೂನಿಗೆ ಒತ್ತಾಯಿಸುವ ಹುನ್ನಾರ ನಡೆಯುತ್ತಿದೆ. ಹಿಂದು ಜಾಗರಣ ವೇದಿಕೆ ಈವರೆಗೆ ಎಲ್ಲವನ್ನು ಸೂಕ್ಷ್ಮವಾಗಿ ನೋಡಿದೆ ಇನ್ನೂ ಈ ರೀತಿಯ ಬೆಳವಣಿಗೆಗಳಿಗೆ ಅವಕಾಶ ನೀಡುವುದಿಲ್ಲ. ಇದನ್ನೂ ಓದಿ: ಉಡುಪಿ ಹಿಜಬ್ ವಿವಾದ – NSUI ಭೇಟಿ ನಿರಾಕರಿಸಿದ ಕಾಲೇಜು ಆಡಳಿತ ಮಂಡಳಿ

ಈ ನಡುವೆ ಪ್ರಾಂಶುಪಾಲರಿಗೆ ಹಿರಿಯ ಅಧಿಕಾರಿಗಳು ಒತ್ತಡ ಹಾಕುವ ಬಗ್ಗೆ ಮಾಹಿತಿಯಿದೆ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜಿಗೆ ಕೇಸರಿ ಶಾಲು ಹಾಕುತ್ತೇವೆ ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ಹೇಳಿದ್ದಾರೆ. ಪುರುಷ ಶಿಕ್ಷಕರು ಪಾಠ ಮಾಡಿದರೆ ಸಮಸ್ಯೆಯಾಗುತ್ತದೆ ಎಂದು ಹೇಳುವ ಸಾಧ್ಯತೆ ಇದೆ. ಸರ್ಕಾರ ಪದವಿಪೂರ್ವ ಶಿಕ್ಷಣ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಒತ್ತಾಯಿಸಿದೆ.

Share This Article
Leave a Comment

Leave a Reply

Your email address will not be published. Required fields are marked *