ಮೋದಿ, ಯೋಗಿ ಆದಿತ್ಯನಾಥ್ ಭಾವಚಿತ್ರದ ಸೀರೆ- ಫೋಟೋ ವೈರಲ್

Public TV
1 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರವಿರುವ ಸೀರೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಉತ್ತರಪ್ರದೇಶದ ಚುನಾವಣೆಗೆ ಕೆಲವೇ ವಾರಗಳು ಬಾಕಿಯಿದ್ದು, ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ. ಮಹಿಳಾ ಮತದಾರರನ್ನು ಓಲೈಸಲು ಬಿಜೆಪಿಯು ಸೀರೆಯನ್ನು ತಯಾರಿಸಿದೆ. ಈ ಸೀರೆಗಳನ್ನು ಗುಜರಾತ್‍ನ ಸೂರತ್‍ನಿಂದ ತರಿಸುತ್ತಿದ್ದಾರೆ. ಉತ್ತರ ಪ್ರದೇಶದ ಮಹಿಳೆಯರಿಗೆ ಈ ಸೀರೆಯನ್ನು ಹಂಚಲಾಗುವುದು ಎಂದು ಕೆಲವರು ಹೇಳುತ್ತಿದ್ದಾರೆ. ಸೀರೆಗಳು ಬಿಜೆಪಿಯ ಚುನಾವಣಾ ಚಿಹ್ನೆ ಕಮಲದಿಂದ ತುಂಬಿವೆ ಮತ್ತು ರಾಮನನ್ನು ನಾವು ಕರೆತಂದಿದ್ದೇವೆ ಎಂಬ ಘೋಷಣೆಯನ್ನು ಹೊಂದಿದೆ.

ಅಹಮದಾಬಾದ್ ಮೂಲದ ವ್ಯಕ್ತಿಯೊಬ್ಬರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಇದು ಮಹಿಳಾ ಮತದಾರರನ್ನು ಓಲೈಸುವ ಅಭಿಯಾನದ ಭಾಗವಾಗಿದೆ ಎಂದು ಹೇಳಿದ್ದಾರೆ. ಅಯೋಧ್ಯೆಯ ವಿಷಯದ ಮೇಲೆ ಸೀರೆಗಳನ್ನು ತಯಾರಿಸಲಾಗಿದೆ. ಪೂರ್ವ ಮತ್ತು ಪಶ್ಚಿಮ ಯುಪಿಯಲ್ಲಿ ಮಹಿಳೆಯರಿಗೆ 1,000 ಸೀರೆಗಳನ್ನು ವಿತರಿಸಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ಮಹಿಳೆ, ಮುಸ್ಲಿಂ ವ್ಯಕ್ತಿ ರೈಲಿನಲ್ಲಿ ಪ್ರಯಾಣ – ಲವ್ ಜಿಹಾದ್ ಅಂತ ಠಾಣೆಗೆ ಎಳೆದೊಯ್ದ ಭಜರಂಗದಳ ಸದಸ್ಯರು

ಆದರೆ ಪ್ರಧಾನಿ ಮೋದಿ ಅವರ ಚಿತ್ರವಿರುವ ಸೀರೆಗಳನ್ನು ತಯಾರಿಸುತ್ತಿರುವುದು ಇದೇ ಮೊದಲಲ್ಲ. 2019ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ, ಗುಜರಾತ್‍ನಲ್ಲಿ ಇದೇ ರೀತಿಯ ವಿನ್ಯಾಸದ ಸೀರೆಯನ್ನು ತಯಾರಿಸಲಾಗಿತ್ತು. ಇದನ್ನೂ ಓದಿ: BJP ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಪಕ್ಷದ ಮೊದಲ ಗುರಿ: ಓವೈಸಿ

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *