ಕೇಸ್ ತಾರತಮ್ಯಕ್ಕೆ ಕಾಂಗ್ರೆಸ್ ಚಾಟಿ ಬಳಿಕ ಎಚ್ಚೆತ್ತ ಸರ್ಕಾರ- ಹೈಕಮಾಂಡ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆ

Public TV
2 Min Read

ಬೆಂಗಳೂರು: ಪಾದಯಾತ್ರೆ ಪ್ರಕರಣದಲ್ಲಿ ತಾರತಮ್ಯ ಎಸಗಿದ್ದಕ್ಕೆ ಕಾಂಗ್ರೆಸ್ ಚಾಟಿ ಬೀಸಿದ ಬೆನ್ನಲ್ಲೇ ಬಿಜೆಪಿ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಚಾರ್ಜ್ ಶೀಟ್ ಒಂದು ಹೈಕಮಾಂಡ್‍ಗೆ ಹೋಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಹೌದು. ಕೊರೊನಾ ಸಮಯದಲ್ಲಿ ರೂಲ್ಸ್ ಬ್ರೇಕ್ ಬಗ್ಗೆ ಜಾರ್ಜ್‍ಶೀಟ್‍ನಲ್ಲಿ ತಿಳಿಸಲಾಗಿದೆ. ಇದೀಗ ರೂಲ್ಸ್ ಬ್ರೇಕ್ ಮಾಡಿದವರ ವಿರುದ್ಧ ಹೈಕಮಾಂಡ್ ವಾರ್ನಿಂಗ್ ಏನು ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಕೋವಿಡ್ ರೂಲ್ಸ್ ಜನರಿಗೆ ಮಾತ್ರಾನಾ, ಜನಪ್ರತಿನಿಧಿಗಳಿಗೆ ರೂಲ್ಸ್ ಅನ್ವಯಿಸಲ್ವಾ ಎಂಬುದು ವ್ಯಾಪಕವಾಗಿ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ. ಯಾಕೆಂದರೆ ಮೂರನೇ ಅಲೆಯಲ್ಲಿ ರಾಜಕಾರಣಿಗಳು ಕೂಡ ರೂಲ್ಸ್ ಫಾಲೋ ಮಾಡ್ತಿಲ್ಲ ಎಂಬುದಾಗಿ ಸಾರ್ವಜನಿಕರು ಕಿಡಿಕಾರಿದ್ದಾರೆ. ಕಾಂಗ್ರೆಸ್ ನವರಷ್ಟೇ ಅಲ್ಲ, ಆಡಳಿತ ಪಕ್ಷದವರಿಂದಲೂ ಎಗ್ಗಿಲ್ಲದೇ ರೂಲ್ಸ್ ಬ್ರೇಕ್ ಆಗಿದೆ.

ಬಿಜೆಪಿಯ 1ಒಕ್ಕೂ ಹೆಚ್ಚು ಮಂದಿ ಸಚಿವರು, ಶಾಸಕರು, ಸಂಸದರು ರೂಲ್ಸ್ ಬ್ರೇಕ್ ಮಾಡಿದ್ದಾರೆ. ವೀಕೆಂಡ್ ಕರ್ಫ್ಯೂ, ವೀಕ್ ಡೇ ಕೋವಿಡ್ ರೂಲ್ಸ್ ಲೆಕ್ಕಕ್ಕಿಲ್ಲ. ಕೋವಿಡ್ ಡೇಂಜರ್ ಕಾಲದಲ್ಲೂ ಜನ್ಮದಿನ, ಕ್ಷೇತ್ರದ ಕಾರ್ಯಕ್ರಮಗಳೇ ಹೆಚ್ಚಾಯ್ತು. ಈಗ ಈ ಬಿಜೆಪಿ ನಾಯಕರ ವಿರುದ್ಧವೇ ಚಾರ್ಜ್ ಶೀಟ್ ಫೈಲ್ ಮಾಡಲಾಗಿದ್ದು, ಇದು ಹೈಕಮಾಂಡ್‍ಗೆ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಪಾದಯಾತ್ರೆ ಕೇಸ್‍ಗೆ ಕೌಂಟರ್ ಕೊಡಲು ಕೈ ಪಾಳಯ ಸಿದ್ಧ

ಕೆಲವು ಸಚಿವರು, ಶಾಸಕರು, ಸಂಸದರಿಂದ ಕೋವಿಡ್ ನಿಯಮ ಉಲ್ಲಂಘನೆ ಬಗ್ಗೆ ಮಾಹಿತಿ ನೀಡಲಾಗಿದೆ. ಎಲ್ಲೆಲ್ಲಿ, ಯಾರ್ಯಾರಿಂದ, ಯಾವ ಸಂದರ್ಭದಲ್ಲಿ, ಹೇಗೆ ರೂಲ್ಸ್ ಬ್ರೇಕ್ ಅನ್ನೋ ಬಗ್ಗೆ ಕಂಪ್ಲೀಟ್ ಡೀಟೆಲ್ ಅನ್ನು ರಾಜ್ಯ ಬಿಜೆಪಿ ಘಟಕ ಕಳುಹಿಸಿದೆ. ಇವರಿಂದ ಪಕ್ಷಕ್ಕೂ ಮುಜುಗರ, ಸರ್ಕಾರಕ್ಕೂ ಮುಜುಗರ. ಇದನ್ನೇ ಕಾಂಗ್ರೆಸ್ ಸಹ ಬಂಡವಾಳ ಮಾಡಿಕೊಂಡು ಟೀಕೆ ಮಾಡುತ್ತಿದೆ. ಕೈ ಪಾದಯಾತ್ರೆ ವೇಳೆಯೇ ನಮ್ಮವರಿಂದಲೂ ರೂಲ್ಸ್ ಉಲ್ಲಂಘನೆ ಆಗಿದೆ. ಜನರಿಗೆ ರೂಲ್ಸ್ ಬಗ್ಗೆ ಜಾಗೃತಿ ಮೂಡಿಸಬೇಕಾದವರು ಇವರು, ಗುಂಪು ಗುಂಪು ಬೆಂಬಲಿಗರ ಜೊತೆ ತಮ್ಮ ಜನ್ಮದಿನ, ಕ್ಷೇತ್ರದ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಒಟ್ಟಾರೆ ಇದೀಗ ಚಾರ್ಜ್ ಶೀಟ್ ನೋಡಿ ಈ ಬಿಜೆಪಿ ನಾಯಕರ ವಿರುದ್ಧ ಹೈಕಮಾಂಡ್ ಏನು ಕ್ರಮ ಕೈಗೊಳ್ಳುತ್ತೆ. ಹೈಕಮಾಂಡ್ ಈ ರೂಲ್ಸ್ ಬ್ರೇಕರ್ಸ್ ಗೆ ಖಡಕ್ ವಾರ್ನಿಂಗ್ ಕಳಿಸುತ್ತಾ ಎಂಬ ಕುತೂಹಲ ಹುಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *