ಟೈರ್ ಕೆಳಗೆ ಸಿಕ್ಕ ನೋಟ್ ತೆಗೆದುಕೊಳ್ಳಲು ವ್ಯಕ್ತಿ ಸರ್ಕಸ್

Public TV
2 Min Read

ನವದೆಹಲಿ: ಟೈರ್ ಕೆಳಗೆ ನೋಟ್ ಸಿಕ್ಕಿ ಹಾಕಿಕೊಂಡಿದ್ದು, ಅದನ್ನು ತೆಗೆದುಕೊಳ್ಳಲು ವ್ಯಕ್ತಿಯೊಬ್ಬ ಸರ್ಕಸ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಕಾರಿನ ಟೈರ್ ಕೆಳಗೆ ಸಿಕ್ಕಿಕೊಂಡಿದ್ದ ನೋಟ್ ತೆಗೆದುಕೊಳ್ಳಲು ವ್ಯಕ್ತಿ ಸರ್ಕಸ್ ಮಾಡುತ್ತಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ವೀಡಿಯೋವನ್ನು ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಈ ವೀಡಿಯೋವನ್ನು ಸ್ಕ್ರಿಪ್ಟ್ ಮಾಡಿ ಚಿತ್ರೀಕರಿಸಲಾಗಿದ್ದು, ಇನ್‌ಸ್ಟಾಗ್ರಾಮ್ ನ ‘ಘಂಟಾ’ ಹೆಸರಿನ ಬಳಕೆದಾರರು ವೀಡಿಯೋವನ್ನು ಅಪ್‍ಲೋಡ್ ಮಾಡಿದ್ದಾರೆ. ಈ ಪೋಸ್ಟ್ ನೆಟ್ಟಿಗರಲ್ಲಿ ಕ್ರೇಜ್ ಮೂಡಿಸಿದೆ. ಇದನ್ನೂ ಓದಿ: ಎಲೆರಾಂಪುರಗೆ ಕೇಂದ್ರ ಸರ್ಕಾರದಿಂದ ಉತ್ತಮ ಪಂಚಾಯ್ತಿ ಪುರಸ್ಕಾರ

ಈ ವೀಡಿಯೋದಲ್ಲಿ, ಕೆಫೆ ಬಳಿ ನಿಲ್ಲಿಸಿದ್ದ ಕಾರಿನ ಟೈರ್ ಅಡಿಯಲ್ಲಿ ಹಣ ಸಿಕ್ಕಿಹಾಕಿಕೊಂಡಿರುತ್ತೆ. ಆಗ ವ್ಯಕ್ತಿಯೊಬ್ಬ ಇಂದು ನನ್ನ ಅದೃಷ್ಟದ ದಿನ ಎಂದು ಭಾವಿಸುತ್ತಾನೆ. ಅಲ್ಲದೆ ಸುತ್ತಮುತ್ತ ನೋಡಿ ಹಣವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾನೆ. ಅದಕ್ಕೆ ಟೈರ್ ಬಳಿ ಹೋಗಿ ತನ್ನ ಶೂಲೇಸ್ ಅನ್ನು ಕಟ್ಟಿಕೊಳ್ಳುವ ನೆಪದಲ್ಲಿ ಟೈರ್ ಬಳಿ ಬಗ್ಗುತ್ತಾನೆ. ಯಾರಿಗೂ ಅನುಮಾನ ಬಾರದಂತೆ ನೋಟ್ ತೆಗೆದುಕೊಳ್ಳಲು ಪ್ರಯತ್ನನಿಸುತ್ತಾನೆ. ಆದರೆ ನೋಟ್ ತೆಗೆಯುವಲ್ಲಿ ವಿಫಲವಾಗುತ್ತಾನೆ.

 

View this post on Instagram

 

A post shared by memes | news | comedy (@ghantaa)

ನಂತರ ಅವನು ಅಲ್ಲೇ ಇದ್ದ ಕೆಫೆಯಲ್ಲಿ ಕುಳಿತುಕೊಂಡು ಆ ಕಾರನ್ನೆ ಗಮನಿಸುತ್ತಿರುತ್ತಾನೆ. ಆಗ ಕಾರ್ ಮಾಲೀಕ ಬಂದು ಕಾರ್ ಅನ್ನು ತೆಗೆಯುತ್ತಾನೆ. ಇವನು ನೆಮ್ಮದಿಯಿಂದ ಎದ್ದು ಆ ನೋಟ್ ತೆಗೆದುಕೊಳ್ಳಬೇಕು ಎಂದು ಹೋಗುತ್ತಾನೆ. ಆದರೆ ಆ ಕೆಫೆಯಲ್ಲಿ ಕುಳಿತುಕೊಂಡಿದ್ದ ಎಲ್ಲ ಜನರು ಕಾರನ್ನು ತೆಗೆಯುವುದನ್ನೆ ಕಾಯುತ್ತಿದ್ದು, ನೋಟ್ ತೆಗೆದುಕೊಳ್ಳಲು ಧಾವಿಸುತ್ತಾರೆ. ಈ ವೀಡಿಯೋ ನೋಡಿದರೆ ನಗದೆ ಇರಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ: 735 ಕೋಟಿ ರೂ. ಗೆ ನ್ಯೂಯಾರ್ಕ್‍ನಲ್ಲಿ ಐಷಾರಾಮಿ ಹೋಟೆಲ್ ಖರೀದಿಸಿದ ರಿಲಯನ್ಸ್

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ವೀಡಿಯೋ ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕಾಮೆಂಟ್ ನಲ್ಲಿ, ಇದು ಕೆಫೆ ಮಾಲೀಕರ ಟ್ರಿಕ್ ಆಗಿರಬಹುದು ಎಂದು ತಮಾಷೆ ಮಾಡಿದ್ದಾರೆ. ಈ ವೇಳೆ ಪೋಸ್ಟ್ ನೋಡಿದ ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *