ಆದಿತ್ಯಾ ಠಾಕ್ರೆಗೆ ಬೆದರಿಕೆ – ಬೆಂಗಳೂರು ವ್ಯಕ್ತಿ ಬಂಧನ

Public TV
1 Min Read

ಮುಂಬೈ: ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಆದಿತ್ಯಾ ಠಾಕ್ರೆಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಜೈ ಸಿಂಗ್ ರಜಪೂತ್ ಬಂಧಿತ ಆರೋಪಿ. ಡಿಸೆಂಬರ್ 18 ರಂದು ಆ ಆರೋಪಿಯನ್ನು ಬಂಧಿಸಿ ಮುಂಬೈಗೆ ಕರೆ ತಂದಿದ್ದೇವೆ ಎಂದು ಮುಂಬೈ ಅಪರಾಧ ವಿಭಾಗದ ಸೈಬರ್ ತಂಡ ತಿಳಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಓಮಿಕ್ರಾನ್‌ ಸ್ಫೋಟ – ಇಂದು ಒಂದೇ ದಿನ 12 ಪ್ರಕರಣ ದೃಢ

ಮಹಾರಾಷ್ಟ್ರ ಕ್ಯಾಬಿನೆಟ್ ಮಂತ್ರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಮುಂಬೈ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಡಿಸೆಂಬರ್ 23 ರಂದು ತಿಳಿಸಿದ್ದಾರೆ.

ಆದಿತ್ಯಾ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರ ಮಗನಾಗಿದ್ದು, ಆರೋಪಿಯು ಡಿಸೆಂಬರ್ 8 ರಂದು ಆದಿತ್ಯ ಠಾಕ್ರೆಗೆ ಕರೆ ಮಾಡಿದ್ದಾನೆ. ಆದರೆ ಆ ಕರೆಯನ್ನು ಅವರು ತೆಗೆದಿಲ್ಲ. ನಂತರದಲ್ಲಿ ಆರೋಪಿಯು ಸಚಿವರಿಗೆ ಬೆದರಿಕೆಯ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟಮಟ್ಟದ ಸ್ಕೇಟಿಂಗ್ – ಏಕಾಂಶ್ ಕುಮಾರ್‌ಗೆ 1 ಬೆಳ್ಳಿ, 1 ಕಂಚಿನ ಪದಕ

ಸೈಬರ್ ಪೊಲೀಸ್ ತಂಡವು ತನಿಖೆ ನಡೆಸಿದಾಗ ಆರೋಪಿಯು ಬೆಂಗಳೂರಿನಿಂದ ಕರೆ ಮಾಡಿರುವುದು ಗೊತ್ತಾಗಿದೆ. ಈ ಆಧಾರದಲ್ಲಿ ಜಾಡು ಹಿಡಿದು ಬೆಂಗಳೂರಿನಲ್ಲಿ ಬಂಧಿಸಿದಾರೆ. ಆ ವ್ಯಕ್ತಿಯನ್ನು ಹುಡುಕಿಕೊಂಡು ಪೊಲೀಸರು ಬೆಂಗಳೂರಿಗೆ ಬಂದಿದ್ದಾರೆ ಎಂದರು.

ಆರೋಪಿಯನ್ನು ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದೆ. ವಿಚಾರಣೆಯ ಸಮಯದಲ್ಲಿ ಆರೋಪಿಯು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರವರ ಅಭಿಮಾನಿಯಾಗಿರುವ ವಿಚಾರ ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *