ಜನ ಸೇವೆಯೇ ನಿಜವಾದ ರಾಮ ರಾಜ್ಯ: ಯೋಗಿ ಆದಿತ್ಯನಾಥ್

By
2 Min Read

ಲಕ್ನೋ: ಸರ್ಕಾರ ರಚನೆಗೂ ಮೊದಲು 2017ರಲ್ಲಿ ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿಸಿದೆ. ಏಕೆಂದರೆ ನಾವು ಜನರ ಸೇವೆಯೇ ನಿಜವಾದ ರಾಮ ರಾಜ್ಯ ಅಂತ ಪರಿಗಣಿಸಿದ್ದೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಭಾನುವಾರ ಮಥುರಾದಿಂದ ಜನ್ ವಿಶ್ವಾಸ್ ಯಾತ್ರೆಗೆ ಚಾಲನೆ ನಿಡಿದ ಅವರು, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಮಾಜದ ಪ್ರತಿಯೊಂದು ವರ್ಗದ ಅಗಾಧ ಅಭಿವೃದ್ಧಿಗೆ ಬಿಜೆಪಿಯ ತುಷ್ಟೀಕರಣ ನೀತಿಯೇ ಕಾರಣ. ಬಡವರಿಗೆ 5 ಲಕ್ಷ ರೂ.ವರೆಗೆ ಉಚಿತ ವಸತಿ, ಶೌಚಾಲಯಗಳು ಮತ್ತು ವಿಮಾ ರಕ್ಷಣೆಯನ್ನು ಒದಗಿಸುವ ಕಾರ್ಯವೇ ನಿಜವಾದ ರಾಮರಾಜ್ಯವಾಗಿದೆ ಎಂದರು. ಇದನ್ನೂ ಓದಿ: ತಮ್ಮ ಕ್ಷೇತ್ರದ ರಸ್ತೆಯನ್ನು ಹೇಮಾಮಾಲಿನಿ ಕೆನ್ನೆಗೆ ಹೋಲಿಕೆ – ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ಸಚಿವ

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಗರಾಜ್‍ನಲ್ಲಿ ಕಾರ್ಮಿಕರ ಪಾದಗಳನ್ನು ತೊಳೆದರು, ಕಾಶಿಯಲ್ಲಿ ಕಾರ್ಮಿಕರ ಮೇಲೆ ಗುಲಾಬಿ ಹೂವನ್ನು ಸುರಿಸಿದರು ಮತ್ತು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ದೇವರಿಗೆ ನಮನ ಸಲ್ಲಿಸಿದ್ದು, ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಮಥುರಾ, ವೃಂದಾವನ, ಗೋವರ್ಧನ್, ನಂದಗಾಂವ್, ಬರ್ಸಾನಾ, ಗೋಕುಲ್ ಮತ್ತು ಬಲ್ದಿಯೊಗೆ ರಾಮಮಂದಿರ ನಿರ್ಮಾಣ ಸೇರಿದಂತೆ ವಿವಿಧ ತೀರ್ಥಕ್ಷೇತ್ರಗಳ ಅಭಿವೃದ್ಧಿಗೆ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಅಥವಾ ಕಾಂಗ್ರೆಸ್ ಪಕ್ಷ ವಿಶೇವಾದ ಸ್ಥಾನಮಾನ ನೀಡುತ್ತದೆಯೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

ಕೋವಿಡ್-19 ಸಮಯದಲ್ಲಿ ಕೂಡ ಅಯೋಧ್ಯೆ ಮತ್ತು ಕಾಶಿ ವಿಶ್ವನಾಥ ಕಾರಿಡಾರ್, ಬಡವರಿಗೆ ಉಚಿತ ಪಡಿತರವನ್ನು ವಿಸ್ತರಣೆ ಹೀಗೆ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿತು. ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ಒಂದು ದೇಶ, ಒಂದು ಧ್ವಜ ಮತ್ತು ಒಂದು ಸಂವಿಧಾನದ ಕನಸನ್ನು ನನಸುಗೊಳಿಸಿದ್ದಾರೆ ಎಂದರು.

ಕಳೆದ ಐದು ವರ್ಷಗಳಲ್ಲಿ ಹೊಸ ಉತ್ತರ ಪ್ರದೇಶ ಸೃಷ್ಟಿಯಾಗಿದೆ. ಹೊಸ ರಾಜ್ಯ ಒಂದು ಕಡೆ ಧಾರ್ಮಿಕ ಸ್ಥಳಗಳ ಅಭಿವೃದ್ಧಿಯಾಗುತ್ತಿದ್ದರೆ ಮತ್ತೊಂದೆಡೆ ಮಾಫಿಯಾವನ್ನು ತೊಡೆದುಹಾಕಲಾಗುತ್ತಿದೆ ಎಂದು ಯೋಗಿ ಪ್ರತಿಪಾದಿಸಿದರು.

Share This Article
Leave a Comment

Leave a Reply

Your email address will not be published. Required fields are marked *