ಪಾಕಿಸ್ತಾನಕ್ಕೆ 195 ಮಿಲಿಯನ್‌ ಡಾಲರ್‌ ಸಾಲ ನೀಡಲು ವಿಶ್ವ ಬ್ಯಾಂಕ್‌ ಒಪ್ಪಿಗೆ

By
1 Min Read

ವಾಷಿಂಗ್ಟನ್: ಪಾಕಿಸ್ತಾನಕ್ಕೆ 195 ಮಿಲಿಯನ್‌ ಡಾಲರ್‌ ಸಾಲ ನೀಡಲು ವಿಶ್ವ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರ ಮಂಡಳಿ ಒಪ್ಪಿಗೆ ಸೂಚಿಸಿದೆ.

ವಿದ್ಯುಚ್ಛಕ್ತಿ ವಿತರಣೆ ಸುಧಾರಿಸಲು, ಗ್ರಾಹಕರಿಗೆ ಸೇವೆ ಗುಣಮಟ್ಟ ಹೆಚ್ಚಿಸಲು ಮತ್ತು ಇಂಧನ ಕ್ಷೇತ್ರದಲ್ಲಿ ಸುಧಾರಣೆ ತರಲು ಪಾಕಿಸ್ತಾನಕ್ಕೆ ಈ ಸಾಲ ನೀಡಲಾಗುತ್ತಿದೆ ಎಂದು ವಿಶ್ವ ಬ್ಯಾಂಕ್‌ ತಿಳಿಸಿದೆ.  ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

ಎಲೆಕ್ಟ್ರಿಸಿಟಿ ಡಿಸ್ಟ್ರಿಬ್ಯೂಷನ್‌ ಎಫಿಸಿಯೆನ್ಸಿ ಇಂಪ್ರೂವ್‌ಮೆಂಟ್‌ ಪ್ರಾಜೆಕ್ಟ್‌ (ಇಡಿಇಐಪಿ), ವಿದ್ಯುತ್ ಪೂರೈಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ವಿದ್ಯುತ್ ಗ್ರಿಡ್‌ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು, ವಿತರಣಾ ಕಂಪನಿಗಳ ಕಾರ್ಯಾಚರಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಆದಾಯ ಸಂಗ್ರಹಣೆ ಹೆಚ್ಚಿಸಲು ಮತ್ತು ನಷ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ತಂತ್ರಜ್ಞಾನ ಮತ್ತು ಮಾಹಿತಿ ವ್ಯವಸ್ಥೆಯನ್ನು ಬಳಸಿಕೊಳ್ಳುವ ಮೂಲಕ ಕಾರ್ಯಾಚರಣೆಗಳನ್ನು ಆಧುನೀಕರಿಸುತ್ತದೆ. ನಿರ್ದಿಷ್ಟವಾಗಿ ಗ್ರಿಡ್ ಕೇಂದ್ರಗಳು, ಪ್ರಸರಣ ಮಾರ್ಗಗಳು, ವಿತರಣೆ ಮತ್ತು ಉಪಯುಕ್ತತೆ ಸೇವೆಗಳಿಗೆ ನಿರ್ಣಾಯಕವಾಗಿವೆ.

ವಿದ್ಯುತ್ ಕ್ಷೇತ್ರದ ದೀರ್ಘಾವಧಿಯ ಆರ್ಥಿಕ ಕಾರ್ಯಸಾಧ್ಯತೆಯು ಗ್ರಾಹಕರಿಗೆ ವಿದ್ಯುತ್‌ ಸೇವೆಯನ್ನು ಒದಗಿಸುವ ವಿದ್ಯುಚ್ಛಕ್ತಿ ವಿತರಣಾ ಕಂಪನಿಗಳ ದಕ್ಷತೆಯ ಮೇಲೆ ಅವಲಂಬಿತವಾಗಿದೆ ಎಂದು ವಿಶ್ವಬ್ಯಾಂಕ್‌ನಲ್ಲಿರುವ ಪಾಕಿಸ್ತಾನ ಪ್ರತಿನಿಧಿ ನಜಿ ಬೆನ್ಹಸ್ಸಿನ್ ಹೇಳಿದ್ದಾರೆ. ಇದನ್ನೂ ಓದಿ: 40 ಸಾವಿರ ವರ್ಷಗಳಿಂದ ಭಾರತೀಯರ ಡಿಎನ್‌ಎ ಒಂದೇ ಆಗಿದೆ: ಆರ್‌ಎಸ್‌ಎಸ್‌ ಮುಖ್ಯಸ್ಥ

ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್‌ ನೀಡಿರುವ ಸಾಲವು ವಿದ್ಯುಚ್ಛಕ್ತಿ ಕ್ಷೇತ್ರದ ಸುಧಾರಣೆ ಉದ್ದೇಶಕ್ಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *