ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶ – ಕೈ ವಿರುದ್ಧ ಬಿಜೆಪಿ ಟ್ವೀಟ್ ದಾಳಿ

Public TV
4 Min Read

ಬೆಂಗಳೂರು: ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡುವ ಮೂಲಕ ಬಿಜೆಪಿ ವಾಗ್ದಾಳಿ ನಡೆಸಿದೆ.

ಕುಂದಾನಗರಿ ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮುಖದ ಭಾಗ, ಮೂಗು ಮತ್ತು ಕತ್ತಿಯನ್ನು ಕಿಡಿಗೇಡಿಗಳು ಶನಿವಾರದ ಮುಂಜಾವಿನಲ್ಲಿ ವಿರೂಪಗೊಳಿಸಿದ್ದರು. ರಾಯಣ್ಣ ಹಿಡಿದಿದ್ದ ಕಠಾರಿಯನ್ನು ರಸ್ತೆಯ ಬದಿಗೆ ಎಸೆದಿದ್ದರು. ಜೊತೆಗೆ ಬಸ್ ಹಾಗೂ ಮನೆಗಳ ಮೇಲೆ ಕಲ್ಲುತೂರಾಟ ನಡೆಸಿ, ಹೋಟೆಲ್‍ವೊಂದರ ಮುಂದೆ ಇದ್ದ ಕನ್ನಡ ನಾಮಫಲಕವನ್ನು ಕೆಳಕ್ಕುರುಳಿಸಿದ್ದರು. ಇದರಿಂದ ಸ್ಥಳೀಯರು, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ಹಿಂಸಾಚಾರ ಕೃತ್ಯವೆಸಗಿದ ಎಂಇಎಸ್ ಪುಂಡರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಕ್ರೋಶಹೊರಹಾಕಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

ಇದೀಗ ಈ ಘಟನೆ ಸಂಬಂಧ ಬಿಜೆಪಿ ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಕೆಂಡಕಾರಿದೆ. ರಾಜ್ಯ ಸರ್ಕಾರದ ವಿರುದ್ಧ ವಿವಿಧ ಆಯಾಮಗಳಲ್ಲಿ ಕಾಂಗ್ರೆಸ್ ಅಪಪ್ರಚಾರದ ಸಂಚು ನಡೆಸುವುದಕ್ಕಾಗಿಯೇ ಕಾಂಗ್ರೆಸ್ ಬೆಳಗಾವಿ ಅಧಿವೇಶನದ ಸಮಯ ಬಳಸಿಕೊಳ್ಳುತ್ತಿಯೇ? ಹೌದು, ಮೊದಲ ದಿನದಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿ ಹಾಗೂ ಘಟನಾವಳಿಗಳು ಇದನ್ನೇ ಹೇಳುತ್ತಿವೆ ಎಂದು ಹರಿಹಾಯ್ದಿದೆ.

ಕೆಂಪುಕೋಟೆಗೆ ಖಲಿಸ್ತಾನಿಗಳು, ನಗರ ನಕ್ಸಲರು ದಾಳಿ ನಡೆಸಿದ ರೀತಿ ಬೆಳಗಾವಿ ಅಧಿವೇಶನಕ್ಕೆ ಟ್ರ್ಯಾಕ್ಟರ್ ಮೂಲಕ ಪ್ರವೇಶಿಸಲು ಕಾಂಗ್ರೆಸ್ಸಿಗರು ಯತ್ನಿಸಿದರು. ಒಂದೊಮ್ಮೆ ನಾಡದ್ರೋಹಿ ಕಾಂಗ್ರೆಸ್ ಪ್ರಯತ್ನ ಸಫಲವಾಗಿ, ಕಾಂಗ್ರೆಸ್ ಕಾರ್ಯಕರ್ತರ ಮುಖವಾಡ ಧರಿಸಿ ಸಮಾಜ ವಿಘಟಕರು ಗುಂಪಿನಲ್ಲಿ ಸೇರಿಸಿದ್ದರೆ ಅಧಿವೇಶನದ ಕತೆ ಏನಾಗುತ್ತಿತ್ತು? ಎಂದು ಪ್ರಶ್ನಿಸಿದೆ.

ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಬೆಳಗಾವಿಯಲ್ಲಿ ಅಧಿವೇಶನ ಆಯೋಜಿಸಲಾಗಿತ್ತು. ಆದರೆ ನಾಡದ್ರೋಹಿ ಕಾಂಗ್ರೆಸ್ ಒಂದು ದಿನವೂ ಕಲಾಪ ನಡೆಯುವುದಕ್ಕೂ ಅವಕಾಶ ನೀಡಲಿಲ್ಲ. ಪ್ರಶ್ನೋತ್ತರ ಕಲಾಪವನ್ನೂ ತಮ್ಮ ಪ್ರತಿಷ್ಠೆಗೆ ಬಲಿ ಪಡೆಯಲು ಮುಂದಾದರು. ಉತ್ತರ ಕರ್ನಾಟಕದ ಬಗ್ಗೆ ನಿಮಗಿರುವ ಬದ್ಧತೆಯೇ ಪ್ರಶ್ನಾರ್ಹವಾಗಿದೆ ಎಂದಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?

ಮಹಾರಾಷ್ಟ್ರದಲ್ಲಿ ಪುಂಡರೊಂದಿಗೆ ಸೇರಿಕೊಂಡು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ್ದು ಕಾಂಗ್ರೆಸ್ ಕಾರ್ಯಕರ್ತರು. ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದ್ದು, ಕಾಂಗ್ರೆಸ್ ಮಿತ್ರಪಕ್ಷ ಎಂಇಎಸ್. ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದೂ ಕಾಂಗ್ರೆಸ್ ಕಾರ್ಯಕರ್ತರು. ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶವಾಗಿದೆ ಎಂದು ಆಕ್ರೋಶ ಹೊರಹಾಕಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೇ, ನಿಮ್ಮ ಹೋರಾಟಕ್ಕೆ ಜನ ಬೆಂಬಲ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಚು ರೂಪಿಸುತ್ತಿದ್ದೀರಾ? ಭಾಷೆ ಹಾಗೂ ಸ್ವಾತಂತ್ರ್ಯ ವೀರರಿಗೆ ಅಪಮಾನ ಮಾಡುವ ಷಡ್ಯಂತ್ರ ರೂಪುಗೊಂಡಿದ್ದು ಕಾಂಗ್ರೆಸ್ ವಾರ್ ರೂಮಿನಲ್ಲೇ? ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

ಭಾಷೆ ಹಾಗೂ ಭಾವನೆಗಳ ಮಧ್ಯೆ ಬೆಂಕಿ ಹಚ್ಚಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಸಂಯಮ ಮೆರೆಯಬೇಕಿದೆ. ಇಲ್ಲವಾದರೆ ಇದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ಸಿದ್ದರಾಮಯ್ಯ ಅವರು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುವ ಅಪಾಯವಿದೆ ಎಚ್ಚರಿಕೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *