ನವದೆಹಲಿ: 63 ವಯಸ್ಸಿನ ರವಿಬಾಲಾ ಶರ್ಮಾ ಅವರು ಸಾರಾ ಅಲಿ ಖಾನ್ರವರ ಚಕಾ ಚಕ್ ಹಾಡಿಗೆ ಅದ್ಬುತವಾಗಿ ಹೆಜ್ಜೆ ಹಾಕಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ರವಿಬಾಲಾ ಶರ್ಮಾ ರವರು ಈಗಾಗಲೇ ಹಲವು ವೈರಲ್ ವೀಡಿಯೋಗಳ ಮೂಲಕ ಎಲ್ಲ ನೆಟ್ಟಿಗರಿಗೆ ಚಿರಪರಿಚಿತರಾಗಿದ್ದಾರೆ. ಆದರೆ ಈಗ ಮತ್ತೊಂದು ಹೊಸ ವೀಡಿಯೋದೊಂದಿಗೆ ಮತ್ತೆ ಮರಳಿದ್ದಾರೆ. ಈ ವೀಡಿಯೋದಲ್ಲಿ ಅವರು ಸಾರಾ ಅಲಿ ಖಾನ್ರವರ ಚಕಾ ಚಕ್ ಹಾಡಿಗೆ ನವಯುವತಿಯರು ನಾಚುವಂತೆ ನೃತ್ಯ ಮಾಡಿದ್ದಾರೆ. ಕ್ರೇಜಿ ವೈರಲ್ ಆದ ಈ ವೀಡಿಯೋ ಈಗಾಗಲೇ ಸುಮಾರು 3 ಲಕ್ಷ ವಿಕ್ಷಣೆಗಳನ್ನು ಪಡೆದಿದೆ. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ಇಡಿ ಮುಂದೆ ವಿಚಾರಣೆಗೆ ಹಾಜರಾದ ಜಾಕ್ವೆಲಿನ್
ವೈರಲ್ ಆದ ಈ ವೀಡಿಯೋದಲ್ಲಿ ಸಾರಾ ಅಲಿ ಖಾನ್, ಹಾಗೆಯೇ ಹಸಿರು ಬಣ್ಣದ ಸೀರೆ ಧರಿಸಿರುವದನ್ನು ನೀವು ಕಾಣಬಹುದಾಗಿದೆ. ರವಿಬಾಲಾರವರು ಡಾನ್ಸ್ ಮಾಡುವ ಸಂದರ್ಭದಲ್ಲಿ ಅವರ ಮುಖದ ಭಾವನೆಗಳಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
View this post on Instagram
ಚಕಾ ಚಕ್ ಹಾಡು ಅಕ್ಷಯ ಕುಮಾರ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಮುಂಬರುವ ಅತ್ರಾಂಗಿ ರೇ ಚಿತ್ರದ ಹಾಡಾಗಿದೆ. ಎ ಆರ್ ರೆಹಮಾನ್ ರವರು ಈ ಹಾಡಿಗೆ ಸಂಗೀತ ಸಂಯೋಜಿಸಿದ್ದು, ಶ್ರೇಯಾ ಘೋಷಾಲ್ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಕುರಿತ ರಮೇಶ್ ಕುಮಾರ್ ಹೇಳಿಕೆಗೆ ಕಾಂಗ್ರೆಸ್ ನಾಯಕರಿಂದಲೇ ಟೀಕೆ