ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ – ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Public TV
1 Min Read

-ಸೆಮಿಫೈನಲ್ ಹಾದಿ ಸುಗಮ

ಢಾಕಾ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯನ್ನು ಪಾಕಿಸ್ತಾನದ ವಿರುದ್ಧ ಭಾರತ 2-1 ಗೋಲುಗಳ ಭರ್ಜರಿ ಜಯವನ್ನು ಸಾಧಿಸಿದೆ. ಈ ಮೂಲಕ ಭಾರತದ ಸೆಮಿಫೈನಲ್ ಹಾದಿ ಸುಗಮಗೊಂಡಿದೆ.

ಹರ್ಮನ್ಪ್ರೀತ್ ಸಿಂಗ್ 2 ಮತ್ತು ಆಕಾಶ್‍ದೀಪ್ ಸಿಂಗ್ ಸಿಡಿಸಿದ ಒಂದು ಗೋಲ್ ನೆರವಿನಿಂದ ಬದ್ಧವೈರಿ ಪಾಕಿಸ್ತಾನ ವಿರುದ್ಧದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ರೌಂಡ್ ರಾಬಿನ್ ಮೂರನೇ ಪಂದ್ಯವನ್ನು ಭಾರತ ಗೆದ್ದುಕೊಂಡಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೋಹಿತ್, ಜಡೇಜಾ ಪ್ರಾಕ್ಟೀಸ್

ಪಂದ್ಯ ಆರಂಭವಾಗಿ ಮೊದಲ ಕ್ವಾರ್ಟರ್‌ನ 8ನೇ ನಿಮಿಷದಲ್ಲಿ ಭಾರತದ ಹರ್ಮನ್ಪ್ರೀತ್ ಸಿಂಗ್ ಗೋಲ್ ಸಿಡಿಸಿದರು. ಈ ಮೂಲಕ ಭಾರತ ತಂಡ 1-0 ಅಂತರದ ಮುನ್ನಡೆ ಪಡೆದುಕೊಂಡಿತು. ನಂತರ ಆಕಾಶ್‍ದೀಪ್ ಸಿಂಗ್ ಮೂರನೇ ಕ್ವಾರ್ಟರ್‌ನ 48ನೇ ನಿಮಿಷದಲ್ಲಿ ಸಿಡಿಸಿದ ಮತ್ತೊಂದು ಗೋಲ್‍ನಿಂದ 2-0 ಮುನ್ನಡೆ ಪಡೆದುಕೊಂಡಿತು.

ಮೂರನೇ ಕ್ವಾರ್ಟರ್ ಕಡೆಯ ಕ್ಷಣದಲ್ಲಿ ಪಾಕಿಸ್ತಾನದ ಜುನೈದ್ ಮಂಜೂರ್ ಸಿಡಿಸಿದ ಗೋಲ್‍ನಿಂದ ಪಾಕಿಸ್ತಾನ 2-1 ಅಂತರ ಕಾಯ್ದುಕೊಂಡಿತು. 4ನೇ ಕ್ವಾರ್ಟರ್‌ನಲ್ಲಿ ಭಾರತದ ಹರ್ಮನ್ಪ್ರೀತ್ ಸಿಂಗ್ ಸಿಡಿಸಿದ ಗೋಲ್‍ನಿಂದ ಭಾರತ ತಂಡ 3-1 ಅಂತರದಿಂದ ಪಾಕಿಸ್ತಾನವನ್ನು ಬಗ್ಗುಬಡಿಯಿತು. ಇದನ್ನೂ ಓದಿ: ಹೇಳದೇ ಕೇಳದೇ ನಾಯಕ ಪಟ್ಟದಿಂದ ತೆಗೆದ್ರು – ಮೌನ ಮುರಿದ ಕೊಹ್ಲಿ

ಈ ಮೊದಲು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಮೊದಲ ಪಂದ್ಯದಲ್ಲಿ ಕೊರಿಯಾ ವಿರುದ್ಧ 2-2ರಲ್ಲಿ ಡ್ರಾ ಮಾಡಿಕೊಂಡಿತ್ತು. ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 9-0 ಅಂತರದಿಂದ ಮಣಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 3-1 ಅಂತರದಲ್ಲಿ ಜಯ ಗಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *