ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ದುರ್ಮರಣ

Public TV
4 Min Read

– ಗಂಭೀರ ಸ್ಥಿತಿಯಲ್ಲಿದ್ದ ಬಿಪಿನ್ ರಾವತ್ ನಿಧನ

ಚೆನ್ನೈ: ಭಾರತದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಪಯಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, ಬಿಪಿನ್ ರಾವತ್ ಅವರು ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ.

ಈ ಸಂಬಂಧ ವಾಯುಸೇನೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿ ಮೃತಪಟ್ಟ ವಿಚಾರವನ್ನು ತಿಳಿಸಿದೆ. ಬಿಪಿನ್ ರಾವತ್ ಪಯಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಕೊಯಮತ್ತೂರು, ಕೂನೂರು ನಡುವಿನ ನೀಲಗಿರಿ ಅರಣ್ಯ ವ್ಯಾಪ್ತಿಯಲ್ಲಿ ದೊಡ್ಡ ಸ್ಫೋಟದ ಶಬ್ಧದೊಂದಿಗೆ ಹೆಲಿಕಾಪ್ಟರ್ ಪತನವಾಗಿದೆ. ದುರಂತಕ್ಕೀಡಾದ ಹೆಲಿಕಾಪ್ಟರ್‌ನಲ್ಲಿ ಬಿಪಿನ್ ರಾವತ್ ಸೇರಿ 14 ಮಂದಿ ಪಯಣಿಸುತ್ತಿದ್ದರು. ಈ ದುರಂತದಲ್ಲಿ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿ 11 ಮಂದಿ ಬಲಿ ಆಗಿದ್ದಾರೆ.

ಈ ಅವಘಡದ ನಂತರ ಗಾಯಾಳುಗಳಿಗೆ ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಅಫಘಾತವಾಗ ಹೆಲಿಕಾಪ್ಟರ್‌ನಲ್ಲಿ ಎಲ್ಲರೂ ಮೃತರಾಗಿದ್ದಾರೆ. ಬಿಪಿನ್ ರಾವತ್ ಚೇತರಿಕೆಗೆ ಇಡೀ ದೇಶವೇ ಪ್ರಾರ್ಥಿಸುತ್ತಿತ್ತು. ಆದರೆ ಬಿಪಿನ್ ರಾವತ್ ಅವರು ಬಾರದ ಲೋಕಕ್ಕೆ ಪ್ರಯಾಣ ಬೆಳಸಿದ್ದಾರೆ.

2015ರಲ್ಲಿ ಸಂಭವಿಸಿದ ನಾಗಾಲ್ಯಾಂಡ್‍ನ ದೀಮಾಪುರ್ ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸ್ವಲ್ಪದ್ರಲ್ಲೇ ಪ್ರಾಣಾಪಾಯದಿಂದ ಬಿಪಿನ್ ರಾವತ್ ಪಾರಾಗಿದ್ದರು. ಆಗ ಬಿಪಿನ್ ರಾವತ್ ಲೆಫ್ಟಿನೆಂಟ್ ಜನರಲ್ ಆಗಿದ್ದರು. ದಿಮಾಪುರದಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು. ಎಂಜಿನ್ ವೈಫಲ್ಯದಿಂದ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಪೈಲಟ್‍ಗಳು ಮತ್ತು ಕರ್ನಲ್ ಕೂಡ ಬದುಕುಳಿದಿದ್ದರು. ಆದರೆ ಇವತ್ತು ಸಂಭವಿಸಿದ ದುರಂತದಲ್ಲಿ ಬಿಪಿನ್ ರಾವತ್ ಸಾವನ್ನಪ್ಪಿದ್ದಾರೆ.

ಬಿಪಿನ್ ರಾವತ್ ಯಾರು?: ಬಿಪಿನ್ ರಾವತ್ ಉತ್ತರಾಖಂಡನ್‍ನ ಪೌರಿಯಲ್ಲಿ 1958ರಲ್ಲಿ ಜನಿಸಿದ್ದರು. ತಂದೆ ಲಕ್ಷ್ಮಣ್ ಸಿಂಗ್, ನಿವೃತ್ತ ಲೆಫ್ಟಿನೆಂಟ್ ಜನೆರಲ್ ಆಗಿ ಸೇವೆಸಲ್ಲಿಸಿದ್ದಾರೆ. ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (2020ರ ಜನವರಿ1 ) ಭಾರತೀಯ ಸೇನೆಯ ಟಾಪ್ ಮೋಸ್ಟ್, 4 ಸ್ಟಾರ್ ಸೈನ್ಯಾಧಿಕಾರಿ, ಲಡಾಖ್ ಬಿಕ್ಕಟ್ಟಿನ ವೇಳೆ ಚೀನಾ ವಿರುದ್ಧ ವ್ಯೂಹ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ರಕ್ಷಣಾ ರಂಗದಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದವರು. ತ್ರಿವಿಧ ದಳಗಳ 17 ಕಮಾಂಡ್‍ಗಳನ್ನು ಸೇರಿಸುವ ಗುರುತರ ಹೊಣೆ ಹೊತ್ತಿದ್ದರು. (ಇಂಟಿಗ್ರೇಟೆಡ್ ಥೇಟರ್ ಕಮಾಂಡ್). ತ್ರ್ರಿವಿಧ ದಳಗಳು ಮತ್ತು ಸರ್ಕಾರದ ನಡುವೆ ಕೊಂಡಿಯಂತೆ ಕೆಲಸ ಮಾಡಿದ್ದರು. ಇದನ್ನೂ ಓದಿ: ಬಿಪಿನ್ ರಾವತ್ ಸ್ಥಿತಿ ಗಂಭೀರ – Mi-17 V5 ಹೆಲಿಕಾಪ್ಟರ್ ವಿಶೇಷತೆ ಏನು?

1987ರಲ್ಲಿ ಸಮ್‍ದೊರಂಗ್ ಚು ಕಣಿವೆಯಲ್ಲಿ ಚೀನಾ ಎದುರಿಸಿದ್ದ ರಾವತ್ ನೇತೃತ್ವದ ಪಡೆ, 2015ರಲ್ಲಿ ಮಯನ್ಮಾರ್ ಗಡಿಗೆ ನುಗ್ಗಿ ರಾವತ್ ನೇತೃತ್ವದ 3 ಕಾಪ್ರ್ಸ್ ಕಾರ್ಯಾಚರಣೆ ನಡೆಸಿದ್ದರು. ಬಿಪಿನ್ ಪತ್ನಿ ಮಧುಲಿಕಾ ಸೈನಿಕರ ಮಕ್ಕಳ ಅಭಿವೃದ್ಧಿಗಾಗಿ, ಸೈನಿಕರ ಶ್ರೇಯೋಭಿವೃದ್ಧಿಗಾಗಿ ಎಡಬ್ಲ್ಯೂಡಬ್ಲ್ಯೂಎ ಎನ್ನುವ ಸರ್ಕಾರೇತರ ಸಂಸ್ಥೆ ನಡೆಸ್ತಿದ್ರು. ಈ ಮೂಲಕ ಯೋಧರ ಕುಟುಂಬಗಳಿಗೆ ಮಧುಲಿಕಾ ನೆರವಿನ ಹಸ್ತ ಚಾಚಿದ್ದರು. ಯೋಧರ ಪತ್ನಿಯರಿಗೆ ಸ್ವಯಂ ಉದ್ಯೋಗದ ತರಭೇತಿ ನೀಡುತ್ತಿದ್ದರು.

ದುರಂತ ಹೇಗಾಯ್ತು?: ದೆಹಲಿಯಿಂದ ಸೇನಾ ವಿಮಾನದಲ್ಲಿ ತಮಿಳುನಾಡಿಗೆ ಬಿಪಿನ್ ರಾವತ್ ವೆಲ್ಲಿಂಗ್ಟನ್‍ನ ಮಿಲಿಟರಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಹೊರಟಿದ್ದರು. ಸೂಳೂರಿನಿಂದ ಊಟಿಯ ವೆಲ್ಲಿಂಗ್ಟನ್‍ಗೆ ಸೇನಾ ಹೆಲಿಕಾಪ್ಟರ್‌ನಲ್ಲಿ 14 ಮಂದಿ ಪಯಣ ಆರಂಭಿಸಿದ್ದರು. ಮಧ್ಯಾಹ್ನ 12.22ಕ್ಕೆ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ಪತನವಾಗಿದೆ. ವೆಲ್ಲಿಂಗ್ಟನ್‍ಗೆ ಏಳು ಕಿ.ಮೀ ದೂರದ ಕಟ್ಟೇರಿ ಪರ್ವತ ಪ್ರದೇಶದ ಟೀ ಎಸ್ಟೇಟ್‍ನಲ್ಲಿ ದೊಡ್ಡ ಶಬ್ಧದೊಂದಿಗೆ ಸೇನಾ ಹೆಲಿಕಾಪ್ಟರ್ ಪತನವಾಗಿದೆ. ಇದನ್ನೂ ಓದಿ: ನಿಮಿಷಗಳ ಅಂತರದಲ್ಲಿ ಲ್ಯಾಂಡ್ ಆಗಬೇಕಿದ್ದ Mi-17V5 ಪತನ – 11 ಮಂದಿಯ ಮೃತದೇಹ ಪತ್ತೆ

ಸೇನೆ ಹೆಲಿಕಾಪ್ಟರ್‌ನಲ್ಲಿ ಇದ್ದವರು ಯಾರು?: ಬಿಪಿನ್ ರಾವತ್, ಸಿಡಿಎಸ್, ಮಧುಲಿಕಾ ರಾವತ್, ಬಿಪಿನ್ ರಾವತ್ ಪತ್ನಿ, ಬ್ರಿಗೇಡಿಯರ್ ಎಲ್‍ಎಸ್ ಲಿದ್ದರ್ * ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿತೇಜಾ, ಹವಾಲ್ದಾರ್ ಸತ್ಪಾಲ್ ಸಿಂಗ್, ಐವರು ಸೂಳೂರಿನವರು ಹುತಾತ್ಮರಾಗಿದ್ದಾರೆ. ಇದನ್ನೂ ಓದಿ:  2015ರಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಪಾರಾಗಿದ್ದರು ಬಿಪಿನ್ ರಾವತ್

ಹೆಲಿಕಾಪ್ಟರ್ ವಿಶೇಷತೆ ಏನು?: ಭಾರತೀಯ ವಾಯುಪಡೆ ಹೆಚ್ಚಾಗಿ ಬಳಸುವ ಎಂಐ-17ವಿ5 ಆಧುನಿಕ ಸಾರಿಗೆ ಹೆಲಿಕಾಪ್ಟರ್ ಆಗಿದೆ. ಪ್ರಯಾಣಿಕರು, ಸರಕು ಹಾಗೂ ವಸ್ತುಗಳನ್ನು ಸಾಗಿಸಲು ಪೂರಕವಾಗಿ ಈ ಹೆಲಿಕಾಪ್ಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಯುದ್ಧತಂತ್ರದ ವಾಯುಪಡೆ ಹಾಗೂ ಸೈನಿಕರ ತಂಡಗಳನ್ನು ಸಾಗಿಸಿ ಯಾವುದೇ ಸ್ಥಳದಲ್ಲೂ ಅವರನ್ನು ಇಳಿಸುವ ಸಾಮಥ್ರ್ಯವನ್ನು ಈ ಹೆಲಿಕಾಪ್ಟರ್ ಹೊಂದಿದೆ. ಆಧುನಿಕ ಏವಿಯಾನಿಕ್ಸ್ ನೊಂದಿಗೆ ಸಜ್ಜುಗೊಂಡಿರುವ ಎಂಐ-17ವಿ5 ಹೆಲಿಕಾಪ್ಟರ್ ಯಾವುದೇ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿ, ಹಗಲು-ರಾತ್ರಿ ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿದೆ. ಸೋವಿಯತ್ ರಾಷ್ಟ್ರ ರಷ್ಯಾ ವಿನ್ಯಾಸಗೊಳಿಸಿರುವ ಹೆಲಿಕಾಪ್ಟರ್ ಇದಾಗಿದೆ. ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ನಿಗದಿತವಲ್ಲದ ಪ್ರದೇಶಗಳಲ್ಲೂ ಲ್ಯಾಂಡಿಂಗ್ ಆಗುವ ಸಾಮರ್ಥ್ಯ ಹೊಂದಿದೆ. ಸುಮಾರು 1,300 ಕೆಜಿಯಷ್ಟು ತೂಕದ ವಸ್ತುಗಳನ್ನು ಹೊತ್ತು ಸಾಗಿಸಲು ಸಮರ್ಥವಾಗಿದೆ. ಅಲ್ಲದೇ ಗಂಟೆಗೆ ಸುಮಾರು 250 ಕಿ.ಮೀ.ನಷ್ಟು ವೇಗವಾಗಿ ಹಾರುವ ಸಾಮಥ್ರ್ಯವನ್ನು ಹೊಂದಿದೆ. ಇದನ್ನೂ ಓದಿ: CDS ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ- ಪತ್ನಿ ಸೇರಿ11 ಮಂದಿ ಸಾವು

Share This Article
Leave a Comment

Leave a Reply

Your email address will not be published. Required fields are marked *