ತನ್ನ ಮುಖ, ಮೈಯಲ್ಲೆಲ್ಲ ಮಣ್ಣಿದ್ದರೂ ನನ್ನ ಮುಖ ಒರೆಸಿದ್ದರು- ಅಪ್ಪು ನೆನಪಿಸಿಕೊಂಡು ಹರ್ಷಿಕಾ ಕಣ್ಣೀರು

Public TV
3 Min Read

ಬೆಂಗಳೂರು: ನಟಿ ಹರ್ಷಿಕಾ ಪೂನಚ್ಚ ಅವರು ಪುನೀತ್ ರಾಜ್ ಕುಮಾರ್ ಅವರನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ.

ಬೇಲೂರಿನಲ್ಲಿ ಇನ್ ಸ್ಟಾದಲ್ಲಿ ಲೈವ್ ಬಂದು ಮಾತನಾಡಿದ ಅವರು, ಈಗಲೂ ಅರಗಿಸಿಕೊಳ್ಳಲು ಕಷ್ಟ ಆಗುತ್ತಿದೆ. ಅಪ್ಪು ಸರ್ ಅವರು ನಮ್ಮ ಸುತ್ತ ಮುತ್ತ ಇಲ್ಲ ಅನ್ನೋ ಮಾತನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ಸರ್ ಅವರ ಮನೆಯಲ್ಲಿ ಇದ್ದಾರೆ. ಅವರನ್ನು ಆದಷ್ಟು ಬೇಗ ಭೇಟಿಯಾಗ್ತೀವಿ ಅಂತಾನೇ ನನಗೆ ಈಗಲೂ ಅನಿಸ್ತಿದೆ ಎಂದರು.

ಅಪ್ಪು ಸರ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕುಟುಂಬದವರ ಜೊತೆ ಇದ್ದಾರೆ. ಅವರು ಸಿಕ್ಕಾಗ ಮಾತಾಡಿಸಬೇಕು ಅಂತೆಲ್ಲ ಅನಿಸ್ತಿದೆ. ಸದ್ಯ ನಾನು ಬೇಲೂರಿನಲ್ಲಿ ಶೂಟಿಂಗ್ ನಲ್ಲಿ ಇದ್ದೇನೆ. ಕ್ಯಾರವಾನ್ ಅಥವಾ ವ್ಯಾನಿಟಿ ವ್ಯಾನ್ ಅನ್ನು ಮೊದಲು ಪರಿಚಯಿಸಿದ್ದು ಅಪ್ಪು ಸರ್. 15-16ನೇ ವಯಸ್ಸಿನಲ್ಲಿ ನನ್ನ ಎರಡನೇಯ ಸಿನಿಮಾ ಜಾಕಿ ಶೂಟಿಂಗ್ ಸಮಯದಲ್ಲಿ ಸೆಟ್ ನಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದಾಗ ಅಪ್ಪು ಸರ್ ಅವರು. ಯಾಕಮ್ಮಾ ಹರ್ಷಿಕಾ ನನ್ನ ಕ್ಯಾರವನ್ ನಲ್ಲಿ ಹೋಗಿ ಕುಳಿತುಕೊಳ್ಳಬಹುದಲ್ವಾ..? ಎಂದು ಹೇಳಿದ್ದರು. ಯಾಕಂದ್ರೆ ಆ ಸಮಯದಲ್ಲಿ ಸ್ಟಂಟ್, ಫೈಟ್ ನಡೀತಾ ಇತ್ತು. ಧೂಳು ತುಂಬಿತ್ತು. ಹೀಗಾಗಿ ಅಪ್ಪು ಸರ್ ನನ್ನ ಅಲ್ಲಿಂದ ಹೋಗುವಂತೆ ಹೇಳಿದ್ದರು.

actress-harshika-poonachcha
actress-harshika-poonachcha

ಆಗ ನಾನು ಇಲ್ಲ ಸರ್ ಪರವಾಗಿಲ್ಲ ನಾನು ಇಲ್ಲೇ ಕುಳಿತಿರುತ್ತೇನೆ ಅಂತ ಹೇಳಿದೆ. ಇಲ್ಲ ನೀನು ಹೋಗು ಅಲ್ಲಿ ಡ್ರೈಫ್ರೂಟ್ಸ್, ಹಣ್ಣುಗಳಿವೆ. ನಿಂಗೆ ಏನು ಬೇಕು ತಿನ್ನು, ರೆಸ್ಟ್ ಮಾಡು ಅಂತೆಲ್ಲ ಹೇಳಿದರು. ಇದೇ ಮಾತನ್ನು ನನ್ನ ತಾಯಿಗೂ ಹೇಳಿದರು. ಹೀಗಾಗಿ ನಂಗೆ ಹಾಗೂ ನನ್ನ ಅಮ್ಮನಿಗೆ ಅರಗಿಸಿಕೊಳ್ಳಲು ಆಗ್ತಿಲ್ಲ ಎಂದು ಗದ್ಗದಿತರಾದರು. ಇದನ್ನೂ ಓದಿ: ಮೈತ್ರಿ ಸರ್ಕಾರದಲ್ಲಿ ಕಡಿಮೆಯಾಗಿದ್ದ ಆತ್ಮಹತ್ಯೆ ಪ್ರಕರಣಗಳು ಈಗ ಹೆಚ್ಚಾಗ್ತಿವೆ: ಹೆಚ್‍ಡಿಕೆ

ಎಷ್ಟು ದೊಡ್ಡ ಮನುಷ್ಯ. ಎಷ್ಟು ಒಳ್ಳೆಯ ಫ್ಯಾಮಿಲಿಯಿಂದ ಬಂದಿದ್ದಾರೆ. ಆಗಿನ್ನು ನಾನು ಇಂಡಸ್ಟಿಗೆ ಹೊಸಬಳು. ಆದರೆ ನನಗೆ ಅವರ ಜೊತೆ ನಟಿಸಲು ಅವಕಾಶ ಮಾಡಿಕೊಟ್ಟರು. ದೇವರು ಯಾಕೆ ಇಷ್ಟೊಂದು ಕಟುಕ ಆದರು. ಯಾವ ಕಾರಣಕ್ಕೆ ಅವರನ್ನು ಕರೆದುಕೊಂಡ್ರು. ಅವರು ಮಾಡಿರುವ ಒಳ್ಳೆಯ ವಿಚಾರಗಳು ಈವಾಗ ಬಯಲಾಗುತ್ತಿವೆ ಎಂದು ಅಪ್ಪು ನೆನಪಿಸಿಕೊಂಡು ಹರ್ಷಿಕಾ ಬೇಸರ ವ್ಯಕ್ತಪಡಿಸಿದರು.

ಜಾಕಿ ಸಿನಿಮಾ ಶೂಟಿಂಗ್ ಸಮಯದಲ್ಲಿ ಕ್ಲೈಮ್ಯಾಕ್ಸ್ ಸೀನ್ ನಲ್ಲಿ ನನ್ನ ಹಾಗೂ ಅಪ್ಪು ಸರ್ ನ ಒಂದು ಗುಂಡಿ ತೋಡಿ ಒಳಗೆ ಹಾಕಿರುತ್ತಾರೆ. ಆ ಬಳಿಕ ನಮ್ಮ ಮೇಲೆ ಮಣ್ಣು ಹಾಕಿರುತ್ತಾರೆ. ಅದರ ಮೇಲೆ ಒಂದು ಕಲ್ಲು ಹಾಕಿ ಕ್ಲೋಸ್ ಮಾಡಿ ಬಿಡುತ್ತಾರೆ. ಆ ಸಂದರ್ಭದಲ್ಲಿ ಒಂದಷ್ಟು ಸೆಕೆಂಡ್ ನಲ್ಲಿ ಅದರೊಳಗಡೆಯೇ ಉಸಿರಾಡದೆ ನಾವು ಇರಬೇಕಿತ್ತು. ಇದಾದ ಬಳಿಕ ನಮ್ಮನ್ನ ಆ ಗುಂಡಿಯಿಂದ ನಮ್ಮನ್ನು ಹೊರಗೆ ತೆಗೆಯುತ್ತಾರೆ. ಈ ವೇಳೆ ಅಪ್ಪು ಸರ್ ಮೈ, ಮುಖದಲ್ಲೆಲ್ಲ ಪೂರ್ತಿ ಮಣ್ಣಿದೆ. ಆದರೆ ಮೊದಲು ನನ್ನ ಮುಖ ಒರೆಸಿ ನೀರು ಹಾಕಿ ಹರ್ಷಿಕಾ ಆರ್ ಯು ಓಕೆ ಅಂತೆಲ್ಲ ಕೇಳಿದ್ರು. ಆದರೆ ಇಂದು ಇಂತಹ ಒಂದು ಒಬ್ಬ ದೇವತಾ ಮನುಷ್ಯನನ್ನು ಕರೆದುಕೊಳ್ಳುವಷ್ಟು ದೇವರು ಕಟುಕ ಯಾಕೆ ಆದ ಅಂತ ಕಣ್ಣೀರಾಕಿದ್ರು.  ಇದನ್ನೂ ಓದಿ: ಮೆಟ್ರೋ ಕಾಸ್ಟ್ ಇಂಡಿಯಾದ ನೂತನ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ

ಅನೇಕ ಮಂದಿ ಕಟುಕರು ಈ ಭೂಮಿ ಮೇಲೆ ಇದ್ದಾರೆ. ಆದರೆ ಇಂತಹ ಒಳ್ಳೆಯ ಮನುಷ್ಯನನ್ನು ದೇವರು ಯಾಕೆ ಕರೆದುಕೊಂಡು ಹೋದ್ರು ಅಂತ ದೇವರ ಮೇಲೆ ಕೋಪ ಬರುತ್ತಿದೆ. ಅಪ್ಪು ಸರ್ ತುಂಬಾ ಜನರನ್ನು ತಮ್ಮದೇ ಕುಟುಂಬದವರಂತೆ ನೋಡಿಕೊಳ್ಳುತ್ತಾರೆ. ಸಿಕ್ಕಾಗಲ್ಲೆಲ್ಲಾ ಆರೋಗ್ಯದ ಬಗ್ಗೆಯೇ ಮಾತಾಡ್ತಾರೆ. ಹೇಗೆ ಸಣ್ಣ ಆಗಿದ್ದೀಯಾ.. ಏನು ಡಯೆಟ್ ಮಾಡ್ತೀಯಾ ಅಂತೆಲ್ಲ ಕೇಳುತ್ತಿದ್ದರು. ಹಾಗೆಯೇ ಅವರನ್ನು ಕೊನೆಯ ಬಾರಿ ಆಸ್ಪತ್ರೆಗೆ ನೋಡಲು ಹೋದಾಗಲೂ ಎದ್ದು ಮಾತನಾಡಿಸುತ್ತಾರೆ ಅಂತ ಅಂದುಕೊಂಡೆ ಆದರೆ ಅವರು ಎದ್ದು ಮಾತನಾಡಲೇ ಇಲ್ಲ ಎಂದು ಹರ್ಷಿಕಾ ಗಳ ಗಳನೇ ಅತ್ತರು.

Share This Article
Leave a Comment

Leave a Reply

Your email address will not be published. Required fields are marked *