ಈಗಿನ ಮುಖ್ಯಮಂತ್ರಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ಬಿ.ಎಸ್.ಯಡಿಯೂರಪ್ಪ

Public TV
2 Min Read

ಕಾರವಾರ: ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ. ಈಗಿನ ಮುಖ್ಯಮಂತ್ರಿಗಳ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಯಲ್ಲಾಪುರದಲ್ಲಿ ಗುರುವಾರ ಮಾತನಾಡಿದ ಅವರು, ನಾನು ಈಗ ಯಾವುದೇ ಸ್ಥಾನಮಾನದಲ್ಲಿ ಇಲ್ಲ. ಅಧಿಕಾರ ಇಲ್ಲದೇನೇ ರಾಜ್ಯದುದ್ದಕ್ಕೂ ಪ್ರವಾಸ ಮಾಡಿ ಪಕ್ಷದ ಬಲವರ್ಧನೆಗೆ ಪ್ರಯತ್ನಿಸುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲು ಏನು ಕೆಲಸ ಮಾಡಬೇಕು, ಅದನ್ನು ನಿರಂತರವಾಗಿ ಮಾಡುತ್ತೇನೆ. ಈಗಿರುವ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯುತ್ತದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ನಾನೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದೂ ಮತ್ತೆ ಚುನಾವಣೆಗೆ ನಿಲ್ಲಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಟ್ಟೆ ಬಿಚ್ಚಿ ತಿರುಗುವವರಿಗೇನ್‌ ಗೊತ್ತು ಗಾಂಧಿ ಮೌಲ್ಯ: ಕಂಗನಾ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

ಬಿಟ್ ಕಾಯಿನ್ ವಿಚಾರ ನಿಮಗೆಲ್ಲಾ ಗೊತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಬಿಟ್ ಕಾಯಿನ್‌ನಲ್ಲಿ ಪಾಲ್ಗೊಂಡಿದ್ದರೆ ಅದು ಅಕ್ಷಮ್ಯ ಅಪರಾಧ. ಬಿಟ್ ಕಾಯಿನ್ ಬಗ್ಗೆ ಯಾರಿಗಾದರೂ ಮಾಹಿತಿಯಿದ್ದರೆ ಮಾಹಿತಿ ಒದಗಿಸಿ. ಅದ್ಯಾವುದೇ ಪಕ್ಷದವರಾಗಿರಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

ವಿಜಯೇಂದ್ರ ಅವರು ಕೂಡಾ ಇವತ್ತಿನಿಂದ ಪ್ರವಾಸ ಕೈಗೊಂಡಿದ್ದಾರೆ. ಅವರಿಗೂ ಜಿಲ್ಲೆಗಳನ್ನು ನೀಡಿದ್ದು, ಆ ಜಿಲ್ಲೆಗಳಲ್ಲಿ ಸ್ನೇಹಿತರನ್ನು ಕರೆದುಕೊಂಡು ಪ್ರವಾಸ ಮಾಡುತ್ತಿದ್ದಾರೆ. ಅವರ ಪ್ರವಾಸಕ್ಕೇನು ತೊಂದರೆಯಿಲ್ಲ. ಒಳ್ಳೆ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ರಾಜ್ಯದ ಉಪಾಧ್ಯಕ್ಷನಾಗಿ ಏನೇನು ಮಾಡಬೇಕು, ಅವೆಲ್ಲವನ್ನೂ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಶಿವಮೊಗ್ಗದಿಂದ ಅವರನ್ನು ನಿಲ್ಲಿಸುವ ಯಾವುದೇ ಯೋಚನೆ ಮಾಡಿಲ್ಲ. ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದರಂತೆ ನಾವು ಕೆಲಸ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಕತ್ತೆಯನ್ನು ತೆಗೆಯಿರಿ – ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ

25 ವರ್ಷವಾದರೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದರಲ್ಲಿ ಕಾಲಿಡಲು ಯಾರೂ ಮುಂದೆ ಬರಲ್ಲ. ರಾಹುಲ್ ಗಾಂಧಿಗೆ ಎಲ್ಲಿಯೂ ಜನಮನ್ನಣೆ ಸಿಗುತ್ತಿಲ್ಲ. ಅವರು ಪದೇ ಪದೇ ವಿದೇಶಕ್ಕೆ ಯಾಕೆ ಹೋಗಿ ಬರ್ತಾರೋ ನಮಗೆ ಗೊತ್ತಿಲ್ಲ. ಕಾಂಗ್ರೆಸ್ ಇನ್ನು ಮುಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಕನಸ್ಸನ್ನು ಬಿಡಬೇಕು. ಈ ಹಿಂದೆ ಗೆಲ್ಲಲು ಸಾಧ್ಯವಾಗದ ಕ್ಷೇತ್ರದಿಂದಲೇ ಪ್ರವಾಸ ಪ್ರಾರಂಭವಾಗಿದೆ. ನಾವೇ ಅಭ್ಯರ್ಥಿ ಎನ್ನುವಂತೆ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಪಕ್ಷ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *