ಸಮಾಜವಾದಿ ಪಕ್ಷದ ಹೆಸರಿನಲ್ಲಿ ಸುಗಂಧ ದ್ರವ್ಯ ಮಾರುಕಟ್ಟೆಗೆ

Public TV
1 Min Read

ಲಕ್ನೋ: ಮುಂದಿನ ವರ್ಷದ ಉತ್ತರಪ್ರದೇಶ ವಿಧಾನ ಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಸಮಾಜವಾದಿ ಪಕ್ಷ, ಇದೀಗ ತನ್ನ ಪಕ್ಷದ ಹೆಸರಲ್ಲೇ ಸುಗಂಧ ದ್ರವ್ಯವೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಕೆಂಪು ಮತ್ತು ಹಸಿರು ಬಣ್ಣದ ಬಾಟಲಿಯಲ್ಲಿ ಬಿಡುಗಡೆಯಾಗಿರುವ ಈ ಸುಗಂಧದ್ರವ್ಯದ ಮೇಲೆ ಎಸ್‍ಪಿ ಚಿಹ್ನೆ ಮತ್ತು ಮುಖ್ಯಸ್ಥ ಅಖೀಲೇಶ್‍ಯಾದವ್ ಫೋಟೋವನ್ನು ಸಹ ಮುದ್ರಿಸಲಾಗಿದೆ. 403 ಸದಸ್ಯ ಬಲದ ಉತ್ತರಪ್ರದೇಶ ವಿಧಾನಸಭೆಗೆ 2022ರಲ್ಲಿ ಚುನಾವಣೆ ನಡೆಯಲಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷದ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿದ್ದು, ಅದಕ್ಕೆ ಸೆಂಟ್ ಆಫ್ ಸೋಶಿಯಲಿಸಂ (ಸಮಾಜವಾದಿ ಸುಗಂಧ ದ್ರವ್ಯ) ಎಂದು ಹೆಸರಿಟ್ಟಿದ್ದಾರೆ.

ಪಕ್ಷದ ಎಂಎಲ್‍ಸಿ ಪಮ್ಮಿ ಜೈನ್ ಎನ್ನುವವರು ತಯಾರಿಸಿದ್ದು,ಪರಿಮಳ ಬೀರುವ 22 ಗಿಡಮೂಲಿಕೆಗಳನ್ನು ಬಳಸಿ ಇದನ್ನು ತಯಾರಿಸಲಾಗಿದೆ. ಇದರ ಪರಿಮಳವು ಬೇರೆ ಉತ್ಪನ್ನಗಳಿಗಿಂತಲೂ ಹೆಚ್ಚುಕಾಲ ಉಳಿಯಲಿದೆ ಎಂದು ತಿಳಿಸಿದ್ದಾರೆ.

Akhilesh Yadav

ರಾಜಕೀಯ ಪಕ್ಷವೊಂದು ತನ್ನದೇ ಸುಗಂಧ ದ್ರವ್ಯವನ್ನು ಪರಿಚಯಿಸುತ್ತಿರುವುದು ಇದೇ ಮೊದಲು. ಬಗ್ಗೆ ಮಾತನಾಡಿರುವ ಅಖಿಲೇಶ್ ಯಾದವ್, ಜನರು ಇದನ್ನು ಉಪಯೋಗಿಸಿದಾಗ ಸಮಾಜವಾದದ ಸುವಾಸನೆಯನ್ನು ಪಡೆಯಲಿದ್ದಾರೆ. 2022ರಲ್ಲಿ ದ್ವೇಷವನ್ನು ಕೊನೆಗಾಣಿಸಲಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *