ಬೆಳಗಾವಿ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ – 8.58 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ

Public TV
1 Min Read

ಬೆಳಗಾವಿ: ಬೆಳಗಾವಿ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ 8.58 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಪ್ರಕರಣದಲ್ಲಿ ಅಂತರರಾಜ್ಯ ಕಳ್ಳರನ್ನು ಬಂಧಿಸಿದ ಪೊಲೀಸರಿಗೆ 2020-2021ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಳ್ಳತನವಾಗಿದ್ದ ವಸ್ತುಗಳು ದೊರಕಿದೆ. 206 ಪ್ರಕರಣ ಪತ್ತೆ ಹಚ್ಚಿ 8,58,23,999ರೂ. ಮೌಲ್ಯದ ವಸ್ತುಗಳು ಮರುಸಂದಾಯಗೊಂಡಿದೆ.ಇದನ್ನೂ ಓದಿ: ಕೋವಿಡ್-19 ಲಸಿಕೆ ಪಡೆದು 7.4 ಕೋಟಿ ರೂ. ಗೆದ್ದ ಯುವತಿ

3.38ಕೆಜಿ ಚಿನ್ನಾಭರಣ, 18.156ಕೆಜಿ ಬೆಳ್ಳಿ ಆಭರಣ, 1,21,02,450 ರೂ. ನಗದು, 168 ಬೈಕ್, 32 ವಾಹನ ಸೇರಿ ವಿವಿಧ ಉಪಕರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬೆಳಗಾವಿ ಎಸ್‍ಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಕಾಯಾಚರಣೆ ನಡೆದಿದ್ದು, ಕಳ್ಳತನವಾದ ವಸ್ತುಗಳು ಮರಳಿ ಸಿಕ್ಕಿದ್ದಕ್ಕೆ ಜನರು ಸಂತಸಪಟ್ಟು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

ಐವತ್ತು ಗ್ರಾಂ ಚಿನ್ನಾಭರಣ ಕಳೆದುಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಮೂರೇ ದಿನದಲ್ಲಿ ಚಿನ್ನಾಭರಣ ಮರಳಿ ಪಡೆದಿದ್ದಾರೆ. ನನ್ನ ಜೀವಮಾನದಲ್ಲಿ ದುಡಿದ ಹಣವನ್ನು ಕೂಡಿಟ್ಟು ಚಿನ್ನಾಭರಣ ಖರೀದಿಸಿದ್ದೆ. ದೀಪಾವಳಿ ಹಬ್ಬದ ಶಾಪಿಂಗ್‍ಗೆ ಹೋದಾಗ ಘಟಪ್ರಭಾದ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಇದರಿಂದ ದಿಕ್ಕೇ ತೋಚದಂತಾಗಿತ್ತು. ಕಳ್ಳರ ಪತ್ತೆ ಹಚ್ಚಿ ಚಿನ್ನಾಭರಣ ಮರಳಿಸಿದ ಪೊಲೀಸರಿಗೆ ಶಾಲಾ ಶಿಕ್ಷಕಿ ಧನ್ಯವಾದ ತಿಳಿಸಿದರು.ಇದನ್ನೂ ಓದಿ: ವನ್ಯಜೀವಿ ಸಾಕ್ಷ್ಯಚಿತ್ರಕ್ಕಾಗಿ ಅಂಜನಾದ್ರಿ ಸುತ್ತ ಓಡಾಡಿದ್ದ ಅಪ್ಪು

Share This Article
Leave a Comment

Leave a Reply

Your email address will not be published. Required fields are marked *