ಪುತ್ರನ ಕಣ್ಣಿಗೆ ಐ ಡ್ರಾಪ್‌ ಬದಲು ಅಂಟನ್ನು ಹಾಕಿದ ತಂದೆ!

Public TV
1 Min Read

ಲಂಡನ್: ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಮಗನಿಗೆ ಐ ಡ್ರಾಪ್‌ ಹಾಕುವ ಬದಲು ತಂದೆ ಅಂಟನ್ನು ಹಾಕಿ ಪ್ರಮಾದ ಎಸಗಿರುವ ಘಟನೆ ಇಂಗ್ಲೆಂಡ್‌ನ ಉತ್ತರ ಯಾರ್ಕ್‌ಶಿರ್‌ನಲ್ಲಿ ನಡೆದಿದೆ.

ಕೆವಿನ್‌ ಡೇ ಎಂಬಾತ ತನ್ನ 11 ವರ್ಷದ ಮಗ ರೂಪರ್ಟ್‌ಗೆ ಐ ಡ್ರಾಪ್‌ ಬದಲು ಅಂಟನ್ನು ಹಾಕಿ ಸಮಸ್ಯೆ ಉಂಟು ಮಾಡಿದ್ದಾರೆ. ಇದನ್ನೂ ಓದಿ: ಬುರ್ಜ್‌ ಖಲೀಫಾ ಮೇಲೆ ಶಾರೂಖ್‌ ಖಾನ್‌ಗೆ ವರ್ಣರಂಜಿತ ಬರ್ತ್‌ ಡೇ ವಿಶ್‌

ಕಣ್ಣಿನ ಸಮಸ್ಯೆಗೆ ಒಳಗಾಗಿದ್ದ ರೂಪರ್ಟ್‌ಗೆ ಅವರ ತಂದೆ ಕೆಲ ದಿನಗಳಿಂದ ಐ ಡ್ರಾಪ್‌ ಹಾಕುತ್ತಿದ್ದರು. ಒಮ್ಮೆ ತಿಳಿಯದೆಯೇ ಅಂಟನ್ನು ಹಾಕಿದ್ದಾರೆ. ಕಣ್ಣಿಗೆ ಮತ್ತೆ ಸಮಸ್ಯೆಯಾಗಿ ಪರದಾಡುತ್ತಿದ್ದ ಮಗನನ್ನು ನೋಡಿದಾಗ ಪ್ರಮಾದ ಬೆಳಕಿಗೆ ಬಂದಿದೆ. ತಾನು ಐ ಡ್ರಾಪ್‌ ಬದಲಿಗೆ ಅಂಟನ್ನು ಹಾಕಿದ್ದೇನೆಂದು ರೂಪರ್ಟ್‌ ತಂದೆಗೆ ನಂತರ ಅರಿವಾಗಿದೆ. ಇದನ್ನೂ ಓದಿ: ಅಫ್ಘಾನ್‌ನಲ್ಲಿ ವಿದೇಶಿ ಕರೆನ್ಸಿ ಬಳಕೆ ನಿಷೇಧಿಸಿದ ತಾಲಿಬಾನ್‌

ಇದರಿಂದ ಆತಂಕಗೊಂಡ ಕೆವಿನ್‌ ಡೇ ತಕ್ಷಣ ಆಸ್ಪತ್ರೆಗೆ (999) ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವೈದ್ಯರು ಆಸ್ಪತ್ರಗೆ ಕರೆತರುವಂತೆ ಸಲಹೆ ನೀಡಿದ್ದಾರೆ. ನಂತರ ಸುಮಾರು 4 ದಿನಗಳ ಕಾಲ ಬಾಲಕನಿಗೆ ಸೂಕ್ತ ಚಿಕಿತ್ಸೆ ನೀಡಿ ಮತ್ತೆ ಕಣ್ಣನ್ನು ತೆರೆಯುವಂತೆ ಮಾಡುವಲ್ಲಿ ಹ್ಯಾರೊಗೇಟ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕೆವಿನ್‌ ಅವರು, “ನನ್ನ ಪುತ್ರ ಮತ್ತೆ ಕಣ್ಣು ತೆರೆಯುತ್ತಾನೆಯೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ವೈದ್ಯರು ಸೂಕ್ತ ಚಿಕಿತ್ಸೆ ಮೂಲಕ ಪುತ್ರನ ಕಣ್ಣನ್ನು ಸರಿಪಡಿಸಿದ್ದಾರೆ” ಎಂದು ನಿಟ್ಟಿಸಿರು ಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *