ಪುನೀತ್ ನಿಧನ- ಶೀಘ್ರವೇ ಜಿಮ್, ಫಿಟ್‌ನೆಸ್‌ ಸೆಂಟರ್‌ಗಳಿಗೆ ಗೈಡ್ ಲೈನ್ಸ್

Public TV
2 Min Read

ಚಿಕ್ಕಬಳ್ಳಾಪುರ: ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಅಕಾಲಿಕ ಸಾವನ್ನಪ್ಪಿದ ಹಿನ್ನೆಲೆ ರಾಜ್ಯದಲ್ಲಿ ಜಿಮ್ ಹಾಗೂ ಫಿಟ್‌ನೆಸ್‌ ಸೆಂಟರ್‌ಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮಾರ್ಗಸೂಚಿಗಳ ರಚನೆ ಮಾಡುವ ಚಿಂತನೆ ನಡೆಸಿದ್ದೇವೆ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ನಟ ಪುನೀತ್ ಸಾವಿನ ನಂತರ ಜಿಮ್ ಮಾಡಬೇಕಾ ಮಾಡಬಾರದ ಎಂಬ ಗೊಂದಲದ ಪ್ರಶ್ನೆ ಉದ್ಭವವಾಗಿದೆ. ಬಹಳ ಜನ ಜಿಮ್ ಮಾಡಬೇಕಾ ಬೇಡ್ವಾ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಒಂದೆರೆಡು ಈ ರೀತಿಯ ಪ್ರಕರಣಗಳಿಂದ ಜಿಮ್ ಮಾಡುವುದೇ ತಪ್ಪು ಎಂಬ ನಿರ್ಧಾರ ಸರಿ ಅಲ್ಲ. ಹೀಗಾಗಿ ಈ ಬಗ್ಗೆ ಸಂಪೂರ್ಣ ಮಾಹಿತಿಯ ಹೆಸರಾಂತ ಹೃದಯ ತಜ್ಞರ ವರದಿ ತಯಾರಿ ಮಾಡಲಿದ್ದೇವೆ. ಜಿಮ್‌ ಹಾಗೂ ಫಿಟ್‌ನೆಸ್‌ ಸೆಂಟರ್‌ಗಳಿಗೆ ಮಾರ್ಗಸೂಚಿಗಳ ರಚನೆ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸಂಪತ್ತು ಭಾರೀ ಏರಿಕೆ – ಪಾಕಿಸ್ತಾನದ GDP ಮೀರಿಸಿದ ಎಲೋನ್ ಮಸ್ಕ್

PUNEET

ಜಿಮ್ ಫಿಟ್‍ನೆಸ್ ಸೆಂಟರ್‌ಗಳಲ್ಲಿ ಯಾವ ಸಾಮಾಗ್ರಿಗಳಿರಬೇಕು? ಸಮಸ್ಯೆ ಬಂದಾಗ ಯಾವ ರೀತಿ ನಿಭಾಯಿಸಬೇಕು ಎಂಬ ಪ್ರಥಮ ಚಿಕಿತ್ಸೆಯಿಂದ ಹಿಡಿದು ಆಸ್ಪತ್ರೆ ದಾಖಲಾಗುವವರೆಗೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಜಿಮ್ ಟ್ರೈನರ್ಸ್‍ಗೆ ಈ ಪರಿಣಿತಿ ಕೊಡುವ ತರಬೇತಿ ನೀಡಲಾಗುವುದು. ನಾನು ಸಹ ಹೆಸರಾಂತ ಹೃದಯ ತಜ್ಞರ ಜೊತೆ ವಿಚಾರ ಮಾಡಿದ್ದೇನೆ. ರಾಜ್ಯದ ಹಲವು ಪ್ರಖ್ಯಾತ ಹೃದಯ ತಜ್ಞರು ಹಾಗೂ ಅಮೇರಿಕಾದ ಖ್ಯಾತ ಹೃದಯ ತಜ್ಞರ ಜೊತೆ ಸಹ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿರಾ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ

ಇದೇ ವೇಳೆ, ಪುನೀತ್ ರಾಜ್‍ಕುಮಾರ್ ನನಗೆ ಬಹಳ ಆತ್ಮೀಯರು. ಇತ್ತೀಚೆಗೆ ಅವರ ಪತ್ನಿ ಅಶ್ವಿನಿ ಹಾಗೂ ಕುಟುಂಬಸ್ಥರು ನಮ್ಮ ಮನೆಗೆ ಬಂದು ಜೊತೆಯಲ್ಲಿ ಊಟ ಮಾಡಿದ್ದೀವಿ. ಆ ನೆನಪು ಹಾಗೆ ಇದೆ. ಅವರ ನೆನಪು ಮರೆಯಾಗಲ್ಲ. ಈ ಘಟನೆ ಇದು ದುರದೃಷ್ಟಕರ ವಿಧಿ ಬರಹ. 16 ವರ್ಷದ ಹಿಂದೆ ನಾನು ಅವರು ಒಂದೇ ಸಲ ಜಿಮ್ ಸ್ಟಾರ್ಟ್ ಮಾಡಿದ್ವಿ. ನಾನು ಅವರು ರಾಘವೇಂದ್ರ ರಾಜ್ ಕುಮಾರ್ ಜಿಮ್ ಮಾಡುತ್ತಿದ್ರು. ಪುನೀತ್ ದೇಹ ದಂಡನೆ ನೋಡಲು ಬಹಳ ಸಂತೋಷ ಆಗುತ್ತಿತ್ತು. ಅವರು ಆರೋಗ್ಯಕ್ಕೆ ಹೆಚ್ಚು ಲಕ್ಷ್ಯ ಕೊಡುತ್ತಿದ್ದರು. ಅವರ ಬಳಿ ಯಾವುದೇ ದುರ್ಗುಣಗಳಿರಲಿಲ್ಲ. ಆದರೂ ಕೂಡ ವಿಧಿ ಬರಹ, ದೇವ್ರು ಒಳ್ಳೆಯವರನ್ನು ಇಷ್ಟಪಡುತ್ತಾರೆ ಎನ್ನುವಂತೆ ಈ ಪ್ರಕರಣ ಪೂರಕವಾಗಿದೆ. ಬಹಳ ಬೇಗ ತಂದೆ ತಾಯಿ ದೇವರ ಬಳಿ ಹೋಗಿದ್ದಾರೆ ಅಂತ ನಾನು ತಿಳಿಕೊಂಡಿದ್ದೀನಿ. ಇಡೀ ರಾಜ್ಯ 2 ದಿನದಿಂದ ಶೋಕಾಚರಣೆಯಲ್ಲಿ ಮುಳುಗಿದೆ. ನನಗೆ ಬಹಳ ನೋವಾಗಿದೆ. ಭಗವಂತ ಅವರ ಕುಟುಂಬಕ್ಕೆ ಆಸರೆಯಾಗಿ ಶಕ್ತಿ ತುಂಬಲಿ. ಮೂವರು ಹೆಣ್ಣು ಮಕ್ಕಳಿಗೆ ಎಲ್ಲಾ ಧೈರ್ಯ ಕೊಟ್ಟು ಒಳ್ಳೆಯದನ್ನು ಮಾಡಲಿ ಅಂತ ಹಾರೈಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಸಕ್ಕರೆ ನಾಡಿಗೆ ನೂತನ ಎಸ್‍ಪಿ ಆಗಮನ

Share This Article
Leave a Comment

Leave a Reply

Your email address will not be published. Required fields are marked *