ದೇವರಾಜ್‌, ಬೋಪಣ್ಣ ಸೇರಿದಂತೆ 66 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

Public TV
4 Min Read

ಬೆಂಗಳೂರು: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ಸಿನಿಮಾ ನಟ ದೇವರಾಜ್‌, ಟೆನ್ನಿಸ್‌ ಆಟಗಾರ ರೋಹನ್‌ ಬೋಪಣ್ಣ ಸೇರಿದಂತೆ 66 ಗಣ್ಯರಿಗೆ ಪ್ರಶಸ್ತಿ ಸಿಗಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಅಕಾಲಿಕ ಅಗಲಿಕೆಯಿಂದ ಪ್ರಶಸ್ತಿ ಘೋಷಣೆಯಲ್ಲಿ ವಿಳಂಬವಾಯಿತು. ಅಂತ್ಯಕ್ರಿಯೆ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿದ ಬಳಿಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ನಿಧನ- ಶೀಘ್ರವೇ ಜಿಮ್, ಫಿಟ್‌ನೆಸ್‌ ಸೆಂಟರ್‌ಗಳಿಗೆ ಗೈಡ್ ಲೈನ್ಸ್

ಸೇವಾ ಸಿಂಧು ಮೂಲಕ ಸಾರ್ವಜನಿಕರು ಮಾಡಿದ ಶಿಫಾರಸನ್ನು ಪರಿಗಣಿಸಿ ಹಾಗೂ ಎಲೆ ಮರದ ಕಾಯಿಯಂತೆ ಸೇವೆ ಸಲ್ಲಿಸಿದ ಮಹನೀಯರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಪ್ರತಿ ವರ್ಷ ನೀಡಲಾಗುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ವರ್ಷ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ 66 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಈ ವರ್ಷ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅದರ ಸ್ಮರಣೆಗಾಗಿ ರಾಜ್ಯದ 10 ಸಂಘ ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿದೆ. ಇದನ್ನೂ ಓದಿ: ಬಿಜೆಪಿಯವರು ಇಂದಿರಾ ಕ್ಯಾಂಟೀನ್ ಹೆಸ್ರನ್ನೇ ಬದಲಾಯಿಸೋಕೆ ಹೊರಟ್ರು ಹೆದರಿ ಸುಮ್ಮನಾದ್ರು: ಡಿಕೆಶಿ

ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ
ಶ್ರೀ ವಿರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಶಾಲೆ ಗದಗ, ಕರ್ನಾಟಕ ಹಿಮೋ ಫೀಲಿಯಾ ಸೊಸೈಟಿ ದಾವಣಗೆರೆ,  ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಕಲಬುರಗಿ, ಶ್ರೀ ರಾಮಕೃಷ್ಣಾಶ್ರಮ, ಮಂಗಳೂರು ದಕ್ಷಿಣ ಕನ್ನಡ, ಆಲ್ ಇಂಡಿಯಾ ಜೈನ್ ಯೂತ್ ಫೆಡರೇಷನ್ ಹುಬ್ಬಳ್ಳಿ,  ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ, ಉತ್ಸವ ರಾಕ್ ಗಾರ್ಡನ್ ಹಾವೇರಿ,  ಅದಮ್ಯ ಚೇತನ ಬೆಂಗಳೂರು,  ಸ್ಟೆಪ್ ಒನ್ ಬೆಂಗಳೂರು,  ಬನಶಂಕರಿ ಮಹಿಳಾ ಸಮಾಜ ಬೆಂಗಳೂರು.

ಸಾಹಿತ್ಯ
ಮಹಾದೇಔ ಶಂಕನಪುರ(ಚಾಮರಾಜನಗರ), ಡಿ.ಟಿ ರಂಗನಾಥ(ಚಿತ್ರದುರ್ಗ), ವಿಜಯಲಕ್ಷೀ ಮಂಗಳಮೂರ್ತಿ(ರಾಯಚೂರು), ಅಜ್ಜಂಪುರ ಮಂಜುನಾಥ್(ಚಿಕ್ಕಮಗಳೂರು), ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ(ವಿಜಯಪುರ) ಸಿದ್ದಪ್ಪ ಬಿದರಿ(ಬಾಗಲಕೋಟೆ).

ರಂಗಭೂಮಿ
ಫಕೀರಪ್ಪ ರಾಮಪ್ಪ ಕೊಡಾಯಿ(ಹಾವೇರಿ), ಪ್ರಕಾಶ್ ಬೆಳವಾಡಿ(ಚಿಕ್ಕಮಗಳೂರು), ರಮೇಶ್ ಗೌಡ ಪಾಟೀಲ(ಬಳ್ಳಾರಿ) ಮಲ್ಲೇಶಯ್ಯ ಎನ್(ರಾಮನಗರ) ಸಾವಿತ್ರಿ ಗೌಡರ್(ಗದಗ).

prakash belavadi

ಜಾನಪದ
ಆರ್‌.ಬಿ.ನಾಯಕ (ವಿಜಯಪುರ), ಗೌರಮ್ಮ ಹುಚ್ಚಪ್ಪ ಮಾಸ್ತರ್‌ (ಶಿವಮೊಗ್ಗ), ದುರ್ಗಪ್ಪ ಚೆನ್ನದಾಸರ (ಬಳ್ಳಾರಿ), ಬನ್ನಂಜೆ ಬಾಬು ಅಮೀನ್‌ (ಉಡುಪಿ), ಮಲ್ಲಿಕಾರ್ಜುನ ರಾಚಪ್ಪ ಮುದಕವಿ (ಬಾಗಲಕೋಟೆ, ವೆಂಕಪ್ಪ ಗೋವಿಂದಪ್ಪ ಭಜಂತ್ರಿ (ಧಾರವಾಡ), ಮಹಾರುದ್ರಪ್ಪ ವೀರಪ್ಪ ಇಟಗಿ (ಹಾವೇರಿ)

ಸಂಗೀತ:
ತ್ಯಾಗರಾಜು.ಸಿ(ನಾದಸ್ವರ) (ಕೋಲಾರ), ಹೆರಾಲ್ಡ್ ಸಿರಿಲ್ ಡಿಸೋಜಾ (ದಕ್ಷಿಣ ಕನ್ನಡ),

ಶಿಲ್ಪ ಕಲೆ:
ಡಾ.ಜಿ.ಜ್ಞಾನಾನಂದ (ಚಿಕ್ಕಬಳ್ಳಾಪುರ), ವೆಂಕಣ್ಣ ಚಿತ್ರಗಾರ (ಕೊಪ್ಪಳ)

ಸಮಾಜ ಸೇವೆ:
ಸೂಲಗಿತ್ತಿ ಯಮುನವ್ವ(ಸಾಲಮಂಟಪಿ) (ಬಾಗಲಕೋಟೆ), ಮದಲಿ ಮಾದಯ್ಯ (ಮೈಸೂರು), ಮುನಿಯಪ್ಪ ದೊಮ್ಮಲೂರು (ಬೆಂಗಳೂರು ನಗರ), ಬಿ.ಎಲ್.ಪಾಟೀಲ್ ಅಥಣಿ (ಬೆಳಗಾವಿ), ಡಾ.ಜೆ.ಎನ್.ರಾಮಕೃಷ್ಣೇಗೌಡ (ಮಂಡ್ಯ)

ವೈದ್ಯಕೀಯ:
ಡಾ.ಸುಲ್ತಾನ್ ಬಿ ಜಗಳೂರು (ದಾವಣಗೆರೆ), ಡಾ.ವ್ಯಾಸ ದೇಶಪಾಂಡೆ(ವೇದವ್ಯಾಸ) (ಧಾರವಾಡ), ಡಾ.ಎ.ಆರ್.ಪ್ರದೀಪ್(ದಂತ ವೈದ್ಯಕೀಯ) (ಬೆಂಗಳೂರು ನಗರ), ಡಾ.ಸುರೇಶ್ ರಾವ್ (ದಕ್ಷಿಣ ಕನ್ನಡ),  ಡಾ.ಸುದರ್ಶನ್‌ (ಬೆಂಗಳೂರು), ಡಾ.ಶಿವನಗೌಡ ರುದ್ರಗೌಡ ರಾಮನಗೌಡರ್ (ಧಾರವಾಡ)

ಕ್ರೀಡೆ:
ರೋಹನ್‌ ಬೊಪ್ಪಣ್ಣ (ಕೊಡಗು), ಕೆ.ಗೋಪಿನಾಥ್(ವಿಶೇಷ ಚೇತನ) (ಬೆಂಗಳೂರು ನಗರ), ರೋಹಿತ್ ಕುಮಾರ್ ಕಟೀಲ್ (ಉಡುಪಿ), ಎ.ನಾಗರಾಜ್(ಕಬಡ್ಡಿ), (ಬೆಂಗಳೂರು ನಗರ)

ಸಿನಿಮಾ:
ದೇವರಾಜ್ (ಬೆಂಗಳೂರು ನಗರ)

ಶಿಕ್ಷಣ
ಸ್ವಾಮಿ ಲಿಂಗಪ್ಪ (ಮೈಸೂರು), ಶ್ರೀಧರ್‌ ಚಕ್ರವರ್ತಿ (ಧಾರವಾಡ), ಪ್ರೊ. ಪಿ.ವಿ.ಕೃಷ್ಣ ಭಟ್‌ (ಶಿವಮೊಗ್ಗ),

ಸಂಕೀರ್ಣ                                                                                                                                                             ಡಾ. ಬಿ.ಅಂಬಣ್ಣ (ವಿಜಯನಗರ), ಕ್ಯಾಪ್ಟನ್‌ ರಾಜಾರಾಮ್‌ (ಬಳ್ಳಾರಿ), ಗಂಗಾವತಿ ಪ್ರಾಣೇಶ್‌ (ಕೊಪ್ಪಳ)

ವಿಜ್ಞಾನ/ತಂತ್ರಜ್ಞಾನ
ಡಾ. ಹೆಚ್‌.ಎಸ್‌.ಸಾವಿತ್ರಿ (ಬೆಂಗಳೂರು ನಗರ), ಪ್ರೊ.ಜಿ.ಯು.ಕುಲ್ಕರ್ಣಿ (ಬೆಂಗಳೂರು)

ಕೃಷಿ
ಡಾ. ಸಿ.ನಾಗರಾಜ್‌ (ಬೆಂಗಳೂರು ಗ್ರಾಮಾಂತರ), ಗುರುಲಿಂಗಪ್ಪ ಮೇಲ್ದೊಡ್ಡಿ (ಬೀದರ್)‌, ಶಂಕರಪ್ಪ ಅಮ್ಮನಘಟ್ಟ (ತುಮಕೂರು)

ಪರಿಸರ
ಮಹಾದೇವ ವೇಳಿಪಾ (ಉತ್ತರ ಕನ್ನಡ), ಬೈಕಂಪಾಡಿ ರಾಮಚಂದ್ರ (ದಕ್ಷಿಣ ಕನ್ನಡ)

ಪತ್ರಿಕೋದ್ಯಮ
ಪಟ್ನಂ ಅನಂತ ಪದ್ಮನಾಭ (ಮೈಸೂರು), ಯು.ಬಿ.ರಾಜಲಕ್ಷ್ಮಿ (ಉಡುಪಿ)

ನ್ಯಾಯಾಂಗ
ಸಿ.ವಿ.ಕೇಶವ ಮೂರ್ತಿ (ಮೈಸೂರು)

ಆಡಳಿತ
ಹೆಚ್‌.ಆರ್‌.ಕಸ್ತೂರಿ ರಂಗನ್‌ (ಹಾಸನ)

ಸೈನಿಕ
ನವೀನ್‌ ನಾಗಪ್ಪ (ಹಾವೇರಿ)

ಯಕ್ಷಗಾನ
ಗೋಪಾಲಚಾರ್ಯ (ಗೋಪಾಲ ಆಚಾರ್ಯ) (ಶಿವಮೊಗ್ಗ)

ಹೊರನಾಡು ಕನ್ನಡಿಗ
ಸುನಿತಾ ಶೆಟ್ಟಿ (ಮುಂಬೈ), ಚಂದ್ರಶೇಖರ್‌ ಪಾಲ್ತಾಡಿ (ಮುಂಬೈ), ಡಾ. ಸಿದ್ದರಾಮೇಶ್ವರ (ಕಂಟಿಕರ್‌), ಪ್ರವೀಣ್‌ ಶೆಟ್ಟಿ (ದುಬೈ)

ಪೌರ ಕಾರ್ಮಿಕ
ರತ್ನಮ್ಮ ಶಿವಪ್ಪ ಬಬಲಾದ (ಯಾದಗಿರಿ)

ಕರ್ನಾಟಕ ಏಕೀಕರಣ ಹೋರಾಟಗಾರರು
ಮಹದೇವಪ್ಪ ಕಡೆಚೂರು (ಕಲಬುರಗಿ)

ಯೋಗ
ಭ.ಮ.ಶ್ರೀಕಂಠ (ಶಿವಮೊಗ್ಗ), ಡಾ. ರಾಘವೇಂದ್ರ ಶೆಣೈ (ಬೆಂಗಳೂರು)

ಉದ್ಯಮ
ಶ್ಯಾಮರಾಜು (ಬೆಂಗಳೂರು)

Share This Article
Leave a Comment

Leave a Reply

Your email address will not be published. Required fields are marked *