ಶಾರೂಖ್ ಖಾನ್ ಬಿಜೆಪಿ ಸೇರಿದ್ರೆ ಡ್ರಗ್ಸ್ ಸಕ್ಕರೆ ಪುಡಿಯಾಗುತ್ತೆ: ಛಗನ್ ಭುಜ್‍ಬಲ್

Public TV
1 Min Read

ನವದೆಹಲಿ: ಈಗ ಏನಾದರೂ ಶಾರೂಖ್ ಖಾನ್ ಬಿಜೆಪಿಗೆ ಸೇರ್ಪಡೆಯಾದರೆ ಡ್ರಗ್ಸ್ ಎನ್ನುವುದು ಸಕ್ಕರೆಯ ಪುಡಿಯಾಗಿ ಬದಲಾಗಬಹುದು ಎಂದು ಮಹಾರಾಷ್ಟ್ರ ಸಚಿವ, ಎನ್‍ಸಿಪಿ ಮುಖಂಡ ಛಗನ್ ಭುಜ್‍ಬಲ್ ವ್ಯಂಗ್ಯವಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಜರಾತ್‍ನ ಮುಂದ್ರಾ ಬಂದರಿನಲ್ಲಿ ಭಾರೀ ಪ್ರಮಾಣದ ಮಾದಕದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಪದೇಪದೆ ಹೆರಾಯಿನ್‍ಗಳು ಸಿಕ್ಕಿವೆ. ಈ ಪ್ರಕರಣವನ್ನು ವ್ಯಾಪಕವಾಗಿ ತನಿಖೆ ನಡೆಸುವುದು ಬಿಟ್ಟು, ಎನ್‍ಸಿಬಿ ಶಾರುಖ್ ಖಾನ್ ಪುತ್ರನನ್ನು ಹಿಡಿದುಕೊಂಡಿದೆ. ಶಾರುಖ್ ಖಾನ್ ಬಿಜೆಪಿ ಸೇರ್ಪಡೆಯಾದರೆ  ಡ್ರಗ್ಸ್‌ನ್ನು ಸಕ್ಕರೆ ಪೌಡರ್ ಎಂದು ನಿರೂಪಿಸಿ, ಆರ್ಯನ್ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್  ಖಾನ್ ಪುತ್ರ ಆರ್ಯನ್ ಖಾನ್  ಬಂಧಿಸಿ,  ಜಾಮೀನು ಕೂಡ ನೀಡದೆ ನಿರಂತರವಾಗಿ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಕುಮಾರಸ್ವಾಮಿ ಬ್ರದರ್, ಬ್ರದರ್‌ ಅಂತ ಕತ್ತು ಕೊಯ್ಯೋದು: ಜಮೀರ್ ಅಹ್ಮದ್

ಆರ್ಯನ್ ಖಾನ್ ಜೊತೆ ಸ್ನೇಹ ಹೊಂದಿರುವ ಅನನ್ಯಾ ಪಾಂಡೆ ಅವರಿಗೂ ಈಗ ಸಂಕಷ್ಟ ಎದುರಾಗಿದೆ. ಅವರ ಮನೆ ಮೇಲೆ ಎನ್‍ಸಿಬಿ ಅಧಿಕಾರಿಗಳು ಇತ್ತೀಚೆಗೆ ದಾಳಿ ಮಾಡಿದ್ದರು. ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಸದ್ಯ ಅವರ ಮೊಬೈಲ್ ಮತ್ತು ಲ್ಯಾಪ್‍ಟಾಪ್ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿನ ವಾಟ್ಸಪ್ ಚಾಟ್‍ಗಳನ್ನು ಪರಿಶೀಲಿಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *