ಬೆಂಗಳೂರು: ಕೆಪಿಎಸ್‌ಸಿಯನ್ನು ಹಾಳು ಮಾಡಿದ್ದು ಯಾರು? ಇದೇ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು. ಬಿಡಿಎಯಲ್ಲಿ ತಿಂದು ತೇಗಿದವರನ್ನು ಕೆಪಿಎಸ್‌ಸಿಗೆ ತಂದು ಕೂರಿಸಿದ್ದು ಯಾರೆಂಬುದು ಗೊತ್ತಿಲ್ಲವೆ? ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ ಎನ್ನುವ ಹಾಗಿದೆ ಬಿಜೆಪಿ ವರಸೆ ಎಂದು ಪ್ರತಿಕ್ರಿಯಿಸುವ ಮೂಲಕ ಜೆಡಿಎಸ್ ತಿರುಗೇಟು ನೀಡಿದೆ.
ಆರ್‌ಎಸ್‌ಎಸ್ ವಿಚಾರವನ್ನು ಕುಮಾರಸ್ವಾಮಿ ಪ್ರಸ್ತಾಪಿಸಿದ್ದಕ್ಕೆ ಬಿಜೆಪಿ ಕೆಪಿಎಸ್‌ಸಿ ವಿಚಾರವನ್ನು ಕೆದಕಿ ಎಚ್‌ಡಿಕೆ ವಿರುದ್ಧ ಆರೋಪ ಮಾಡಿತ್ತು. ಕೆಪಿಎಸ್‌ಸಿಯನ್ನು ದುರ್ಬಳಕೆ ಮಾಡಿಕೊಂಡ ಕುಮಾರಸ್ವಾಮಿ ಅವರು ತಮಗೆ ಬೇಕಾದ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಅಕ್ರಮವಾಗಿ ಸರ್ಕಾರಿ ನೌಕರಿ ಒದಗಿಸಿದ್ದರು. ಮಾನ್ಯ ಕುಮಾರಸ್ವಾಮಿ ಅವರೇ, ಇವರಿಗೆಲ್ಲ ನೀವು ತರಬೇತಿ ನೀಡಿದ್ದೆಲ್ಲಿ? ಪದ್ಮನಾಭ ನಗರದಲ್ಲೋ, ಕೇತಗಾನ ಹಳ್ಳಿಯ ತೋಟದ ಮನೆಯಲ್ಲೋ ಎಂದು ಪ್ರಶ್ನಿಸಿ ಸರಣಿ ಆರೋಪ ಮಾಡಿತ್ತು. ಈ ಆರೋಪಗಳಿಗೆ ಜೆಡಿಎಸ್ ಪ್ರತಿಕ್ರಿಯಿಸಿದೆ.
ಟ್ವೀಟ್‌ನಲ್ಲಿ ಏನಿದೆ?
ಸ್ವಯಂ ಘೋಷಿತ ಸೇವಾ ಸಂಸ್ಥೆ ಅರ್‌ಎಸ್‌ಎಸ್ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರ ಹೇಳುವ ಬದಲು ಸತ್ಯವ್ನನು ದಾಟಿಸುವ ಹುನ್ನಾರದೊಂದಿಗೆ ಬಿಜೆಪಿಯು ದಾಸರ ಪದಗಳನ್ನು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದೆ.
ಸಮಾಜದ ಉದ್ಧಾರಕ್ಕಾಗಿ ದಾಸಶ್ರೇಷ್ಠರು ಬರೆದ ಕೃತಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹೀನ ಕೆಲಸವನ್ನು ಬಿಜೆಪಿ ಮಾಡುತ್ತಿದೆ. “ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ” ಎನ್ನುವುದು ಬಿಜೆಪಿಯ ಎಲುಬಿಲ್ಲದ ನಾಲಿಗೆಯ ಸಂಸ್ಕಾರವನ್ನು ಸಾರುತ್ತಿದೆ.
ಸಮಾಜದ ಉದ್ಧಾರಕ್ಕಾಗಿ ದಾಸಶ್ರೇಷ್ಠರು ಬರೆದ ಕೃತಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹೀನ ಕೆಲಸವನ್ನು ಬಿಜೆಪಿ ಮಾಡುತ್ತಿದೆ. "ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ" ಎನ್ನುವುದು ಬಿಜೆಪಿಯ ಎಲುಬಿಲ್ಲದ ನಾಲಿಗೆಯ ಸಂಸ್ಕಾರವನ್ನು ಸಾರುತ್ತಿದೆ. 2/7
— Janata Dal Secular (@JanataDal_S) October 19, 2021
ಹೇಳುವುದು ಆಚಾರ, ಮಾಡುವುದು ಅನಾಚಾರ. ಜನರಿಗೆ ಗೊತ್ತಿದೆ ನಿಮ್ಮ ಸದಾನಂದ ಪರಿವಾರ. ರಾಜ್ಯದಲ್ಲಿ ಭ್ರಷ್ಟಾಚಾರ ಎಸಗಿ ಜೈಲಿಗೆ ಹೋಗಿ ಇತಿಹಾಸ ಸೃಷ್ಠಿಸಿದ ಮುಖ್ಯಮಂತ್ರಿ ಯಾವ ಪಕ್ಷದವರು? ಅವರ ಹಿಂದೆಯೇ ಹಿಂಡು ಹಿಂಡಾಗಿ ಜೈಲು ಕಂಬಿ ಎಣಿಸಿದ ಸಚಿವ ಶಿಖಾಮಣಿಗಳು ಯಾವ ಪಕ್ಷದವರು?
ಕುಮಾರಸ್ವಾಮಿ ಅವರು ಆರ್ ಎಸ್ ಎಸ್ ತರಬೇತಿ ನೀಡಿದ ಅಧಿಕಾರಿಗಳ ಬಗ್ಗೆ ಹೇಳಿದ್ದರೆ, ನೀವು ಯು.ಪಿ.ಎಸ್.ಸಿ ಗೆ ಸಮೀಕರಣ ಮಾಡಿ ಕೆ.ಪಿ.ಎಸ್.ಸಿ ಬಗ್ಗೆ ಎಗ್ಗಿಲ್ಲದೆ ಸುಳ್ಳು ಹೇಳುತ್ತಿದ್ದೀರಿ. ಸಾಂವಿಧಾನಿಕ ಸಂಸ್ಥೆಗಳನ್ನು ಗುಲಾಮರಂತೆ ಮಾಡಿಕೊಂಡಿರುವ ನಿಮಗೆ ಕೆ.ಪಿ.ಎಸ್.ಸಿ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? 5/7
— Janata Dal Secular (@JanataDal_S) October 19, 2021
ಸಂಘ ಸಂಸ್ಕಾರ ಪಡೆದು ಸದನದಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡಿದವರು ಯಾವ ಪಕ್ಷದವರು? ಸಿಡಿ ಸುಳಿಯಲ್ಲಿ ಸಿಕ್ಕಿ ರಾಜೀನಾಮೆ ಕೊಟ್ಟ ಶೀಲವಂತರು ಯಾವ ಪಕ್ಷದವರು? ನಿಮ್ಮ ನಾಯಕರ ಲೀಲೆಗಳು ಜನರಿಗೆ ಗೊತ್ತಿಲ್ಲ ಎನ್ನುವ ದರ್ಪವೇ? ಅನಾಚಾರವೆಂಬುದು ಬಿಜೆಪಿ ಕಾಯಕ, ಅಭ್ಯಾಸ, ನಿತ್ಯದ ದಿನಚರಿ ಮತ್ತು ಚಾಳಿ.
ಕೆ.ಪಿ.ಎಸ್.ಸಿ ಯನ್ನು ಹಾಳು ಮಾಡಿದ್ದು ಯಾರು? ಇದೇ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳು. ಬಿಡಿಎಯಲ್ಲಿ ತಿಂದು ತೇಗಿದವರನ್ನು ಕೆ.ಪಿ.ಎಸ್.ಸಿ ಗೆ ತಂದು ಕೂರಿಸಿದ್ದು ಯಾರೆಂಬುದು ಗೊತ್ತಿಲ್ಲವೆ? ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ ಎನ್ನುವ ಹಾಗಿದೆ ಬಿಜೆಪಿ ವರಸೆ. 7/7
— Janata Dal Secular (@JanataDal_S) October 19, 2021
ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ತರಬೇತಿ ನೀಡಿದ ಅಧಿಕಾರಿಗಳ ಬಗ್ಗೆ ಹೇಳಿದ್ದರೆ, ನೀವು ಯುಪಿಎಸ್‌ಗೆ ಸಮೀಕರಣ ಮಾಡಿ ಕೆಪಿಎಸ್‌ಸಿ ಬಗ್ಗೆ ಎಗ್ಗಿಲ್ಲದೆ ಸುಳ್ಳು ಹೇಳುತ್ತಿದ್ದೀರಿ. ಸಾಂವಿಧಾನಿಕ ಸಂಸ್ಥೆಗಳನ್ನು ಗುಲಾಮರಂತೆ ಮಾಡಿಕೊಂಡಿರುವ ನಿಮಗೆ ಕೆಪಿಎಸ್‌ಸಿ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಇದನ್ನೂ ಓದಿ: ಕೆಪಿಎಸ್‌ಸಿ ಕರ್ಮಕಾಂಡದ ರೂವಾರಿ, ಬೇಕಾದವರಿಗೆ ಸರ್ಕಾರಿ ಹುದ್ದೆ – ಬಿಜೆಪಿ ಕಿಡಿ
ಕುಮಾರಸ್ವಾಮಿ ಅವರೆಂದೂ ಕೆಪಿಎಸ್‌ಸಿಯನ್ನು ದುರುಪಯೋಗ ಮಾಡಿಕೊಂಡಿಲ್ಲ. 2011ರಲ್ಲಿ ಪಾಸಾಗಿ ಅನ್ಯಾಯಕ್ಕೆ ಒಳಗಾದ ಹಳ್ಳಿ ರೈತರ ಮಕ್ಕಳ ಪರ ಹೋರಾಟ ನಡೆಸಿದ್ದಾರೆ. ನಿಮ್ಮ ಹಾಗೆ ಗರ್ಭಗುಡಿ ಸಂಸ್ಕೃತಿ ಅವರದಲ್ಲ. ಮನೆ ಬಾಗಿಲಿಗೆ ಬಂದು ಸಹಾಯ ಕೇಳುವ ಯಾರನ್ನೂ ಸೊಕ್ಕಿನಿಂದ ಆಚೆಗಟ್ಟಿದವರಲ್ಲ. ನಿಮಗೆ ಆ ಮಾನವೀಯತೆ ಹೇಗೆ ಗೊತ್ತಾಗಬೇಕು?
ಕೆಪಿಎಸ್‌ಸಿಯನ್ನು ಹಾಳು ಮಾಡಿದ್ದು ಯಾರು? ಇದೇ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು. ಬಿಡಿಎಯಲ್ಲಿ ತಿಂದು ತೇಗಿದವರನ್ನು ಕೆಪಿಎಸ್‌ಸಿಗೆ ತಂದು ಕೂರಿಸಿದ್ದು ಯಾರೆಂಬುದು ಗೊತ್ತಿಲ್ಲವೆ? ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ ಎನ್ನುವ ಹಾಗಿದೆ ಬಿಜೆಪಿ ವರಸೆ.