ಮಾಜಿ ಶಾಸಕ ಡಾ.ಎಂ.ಪಿ ಕರ್ಕಿ ವಿಧಿವಶ

Public TV
1 Min Read

ಕಾರವಾರ: ಮಾಜಿ ಶಾಸಕ ಡಾ.ಎಂ.ಪಿ ಕರ್ಕಿ(87) ವಯೋಸಹಜತೆಯಿಂದ ಹೊನ್ನಾವರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಇದನ್ನೂ ಓದಿ:   ಅವಿವಾಹಿತೆಯರಿಗೆ ಮಾತ್ರ- ಲವ್ ಮಾಡಲು ತಿಂಗಳಿಗೊಂದು ರಜೆ!

ಕುಮಟಾ ಹೊನ್ನಾವರ ಕ್ಷೇತ್ರದ ಡಾ.ಎಂ.ಪಿ ಕರ್ಕಿ ಅವರು ವೈದ್ಯರಾಗಿ ವೃತ್ತಿ ಆರಂಭಿಸಿದ ಕರ್ಕಿಯವರು ಜನಸಂಘ ದಿಂದ ಬಿಜೆಪಿ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. ಜಿಲ್ಲಾಧ್ಯಕ್ಷರಾಗಿ ರಾಜಕೀಯ ಸೇವೆ ಮಾಡಿದ ಇವರು 1983 ಮತ್ತು 1994ರಲ್ಲಿ ಎರಡುಬಾರಿ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಒಂದು ಬಾರಿ ಲೋಕಸಭೆಗೆ ಕೂಡ ಸ್ಪರ್ಧೆ ಮಾಡಿದ್ದರು.ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ ಇವರು ಹೊನ್ನಾವರದ ಎಂ.ಪಿ.ಇ ಸೊಸೈಟಿ ಅಧ್ಯಕ್ಷರಾಗಿದ್ದರು. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು!

ಖಾಯಿಲೆಯಿಂದ ಬಳಲುತಿದ್ದ ಇವರಿಗೆ ಕೆಲವು ತಿಂಗಳ ಹಿಂದೆ ಮಣಿಪಾಲ್ ಹಾಗೂ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಎಂ.ಪಿ ಕರ್ಕಿ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *