ಮುಂದಿನ ಐಪಿಎಲ್‍ನಲ್ಲಿ ಕನ್ನಡಿಗ ರಾಹುಲ್ ಆರ್​ಸಿಬಿ ಕ್ಯಾಪ್ಟನ್?

By
1 Min Read

ಬೆಂಗಳೂರು: 2022 ಆವೃತ್ತಿಯ ಐಪಿಎಲ್‍ಗೂ ಮುನ್ನವೇ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ನಾಯಕತ್ವಕ್ಕೆ ಗುಡ್‍ಬೈ ಹೇಳಿದ್ದಾರೆ. ಇದೀಗ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಮುಂದಿನ ಹರಾಜಿನಲ್ಲಿ ಖರೀದಿಸಿ ಆರ್​ಸಿಬಿ ತಂಡದ ನಾಯಕತ್ವದ ಜವಬ್ದಾರಿ ಕೊಡುವ ನಿಟ್ಟಿನಲ್ಲಿ ಫ್ರಾಂಚೈಸ್ ತಯಾರಿ ಮಾಡಿಕೊಂಡಿದೆ ಎಂದು ವರದಿಯಾಗಿದೆ.

14ನೇ ಆವೃತ್ತಿಯ ಐಪಿಎಲ್‍ನಲ್ಲಿ ಪಂಜಾಬ್ ತಂಡದ ನಾಯಕನಾಗಿ ಯಶಸ್ವಿ ಕಾಣದಿದ್ದರೂ ಕೂಡ ಬ್ಯಾಟ್ಸ್‌ಮ್ಯಾನ್‌ ಆಗಿ 13 ಪಂದ್ಯಗಳಲ್ಲಿ ರಾಹುಲ್ 626 ರನ್ ಹೊಡೆದಿದ್ದಾರೆ. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಹಿನ್ನೆಲೆಯಲ್ಲಿ ಬೆಂಗಳೂರು ತಂಡ ರಾಹುಲ್ ಮೇಲೆ ಕಣ್ಣಿಟ್ಟಿದೆ. ಇದನ್ನೂ ಓದಿ: ನ್ಯೂಜಿಲೆಂಡ್ ಸರಣಿಗೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್?

ಮುಂದಿನ ಐಪಿಎಲ್ ಆವೃತ್ತಿಗೆ 2 ಹೊಸ ತಂಡಗಳು ಸೇರ್ಪಡೆಗೊಳ್ಳುವುದರಿಂದಾಗಿ ಹಲವು ಬದಲಾವಣೆಗಳು ಸಂಭವಿಸಲಿದ್ದು, ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ. ಈ ಹರಾಜಿನಲ್ಲಿ ಈ ಬಾರಿ ರಾಹುಲ್‍ನ್ನು ಖರೀದಿಸಿ ತಂಡವನ್ನು ಹೊಸದಾಗಿ ಕಟ್ಟುವ ಇರಾದೆಯಲ್ಲಿ ಆರ್​ಸಿಬಿ ತಂಡವಿದೆ. ಈ ನಡುವೆ ರಾಹುಲ್ ಕೂಡ ಆರ್​ಸಿಬಿ ತಂಡವನ್ನು ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕೆಲದಿನಗಳ ಹಿಂದೆ ಪಂಜಾಬ್ ತಂಡ ತೊರೆಯುವ ಬಗ್ಗೆ ರಾಹುಲ್ ಭಾವನಾತ್ಮಕ ಸಂದೇಶವೊಂದನ್ನು ಬರೆದುಕೊಂಡಿದ್ದರು. ಇದು ಇದೀಗ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಟಿ20 ವಿಶ್ವಕಪ್‍ಗಾಗಿ ಟೀಂ ಇಂಡಿಯಾ ಸೇರ್ಪಡೆಗೊಂಡ ಐಪಿಎಲ್ ಸ್ಟಾರ್ಸ್

ರಾಹುಲ್‍ರನ್ನು ಆರ್​ಸಿಬಿ ತಂಡ ಕರೆತರುವ ಪ್ರಯತ್ನದಲ್ಲಿದ್ದರೆ, ರಾಹುಲ್ ಪಂಜಾಬ್ ತಂಡವನ್ನು ಬಿಟ್ಟು ಹೊರ ಬರಲಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ಆದರೂ ಕೂಡ ರಾಹುಲ್‍ರನ್ನು ಆರ್​ಸಿಬಿ ತಂಡ ಸೆಳೆಯಲು ಪ್ರಯತ್ನ ಪಡುತ್ತಿದೆ ಎಂದು ವರದಿಯಾಗಿದ್ದು, ಈ ಮೂಲಕ ಕನ್ನಡದ ತಂಡಕ್ಕೆ ಕನ್ನಡಿಗನನ್ನು ಕರೆತಂದು ಅಭಿಮಾನಿಗಳ ಆಸೆ ಪೂರೈಸಲು ಫ್ರಾಂಚೈಸ್ ಸಿದ್ಧತೆ ಮಾಡಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *