ಯೋಗಾಸನ ಪಾಠ ಮಾಡಿದ ಸ್ಯಾಂಡಲ್‍ವುಡ್ ಮೋಹಕ ತಾರೆ

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಮ್ಯಾ ಅಭಿಮಾನಿಗಳಿಗೆ ಯೋಗಾಸನದ ಪಾಠ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಇದು ಏನು ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ? ಇದು ಸೂರ್ಯ ನಮಸ್ಕಾರದ ಕುರಿತಾಗಿ ನನ್ನ ವಿವರಣೆಯಾಗಿದೆ. ನಾನು ಬೆಳಿಗ್ಗೆ ಯೋಗಾಸನವನ್ನು ಮಾಡುತ್ತಿದ್ದಾಗ ಈ ಆಸನಗಳು ಜೀವನಕ್ಕೆ ಹೋಲುತ್ತವೆ ಎಂದು ನಾನು ಅರಿತುಕೊಂಡೆ. ಹೀಗಾಗಿ ನನ್ನ ಆಲೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಚಿತ್ರವನ್ನು ನಾನು ಬಿಡಿಸಿದ್ದೇನೆ. ನನಗೆ ಚಿತ್ರ ಬಿಡಿಸಲು ಬರುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:   ತಾಯಿ ಆಗಲು ಸಮಂತಾ ಬಯಸಿದ್ರು-ನಿರ್ದೇಶಕರ ಪುತ್ರಿ ಬಿಚ್ಚಿಟ್ಟರು ವಿಚ್ಛೇದನದ ಗುಟ್ಟು

 

View this post on Instagram

 

A post shared by Ramya/Divya Spandana (@divyaspandana)

ಈ ಆಸನದಂತೆಯೇ ಜೀವನವು ಏರಿಳಿತಗಳನ್ನು ಹೊಂದಿದೆ. ಜೀವನವು ನಿರಂತರ ಬದಲಾವಣೆಯ ಚಲನೆಯಾಗಿದೆ. ಯೋಗಾಸನವು ಜೀವನವನ್ನು ಪೂರ್ಣವಾಗಿ ಬದುಕಲು, ಸಮತೋಲನ, ಸಮಚಿತ್ತತೆಯನ್ನು ಕಂಡುಕೊಳ್ಳಲು ನೆರವಾಗುತ್ತದೆ. ನಾನು ಯೋಗಾಸನವನ್ನು ಕೆಲವೇ ತಿಂಗಳುಗಳಿಂದ ಮಾಡುತ್ತಿದ್ದೇನೆ. ಆದರೆ ನಾನು ಅದನ್ನು ಪ್ರೀತಿಸುತ್ತೇನೆ. ನನ್ನ ಬಗ್ಗೆ ಚೆನ್ನಾಗಿ ಯೋಚಿಸಲು, ಗಮನಿಸಲು ಮತ್ತು ಅರ್ಥಮಾಡಿಕೊಳ್ಳಲು ಇದು ನನಗೆ ಹೆಚ್ಚಿನ ಶಕ್ತಿ ನೀಡಿದೆ. ನಾನು ನನ್ನ ಶಿಕ್ಷಕರಿಗೆ ತುಂಬಾ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡು ಅಭಿಮಾನಿಗಳಿಗೆ ಯೋಗದ ಕುರಿತಾಗಿ ಪಾಠ ಮಾಡಿದ್ದಾರೆ. ಸೂರ್ಯ ನಮಸ್ಕಾರದ ಕೆಲವು ರೇಖಾ ಚಿತ್ರಗಳನ್ನು ತಾವೇ ಬಿಡಿಸಿ ಇನ್‍ಸ್ಟಾಗ್ರಾಮ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಸುದೀಪ್ ನಿಮಗೆ ವಯಸ್ಸು ಆಗೋದೇ ಇಲ್ವಾ: ರಮ್ಯಾ

ಸ್ಯಾಂಡಲ್‍ವುಡ್‍ನ ಮೋಹಕ ತಾರೆ ರಮ್ಯಾ ಅವರು ಸಿನಿಮಾದಿಂದ ದೂರವಾಗಿರಬಹುದು. ಆದರೆ ಅವರು ಸೋಶಿಯಲ್ ಮೀಡಿಯಾ ಮೂಲಕವಾಗಿ ಅಭಿಮಾನಿಗಳೊಂದಿಗೆ ನಿರಂತರ ಸಂರ್ಪದಲ್ಲಿದ್ದಾರೆ. ಇದೀಗ ಯೋಗಾಸನ ಪಾಠ ಮಾಡಿದ್ದಾರೆ. ಅಭಿಮಾನಿಗಳು ರಮ್ಯಾ ಅವರಿಗೆ ಯೋಗಾಸನದ ಕುರಿತಾಗಿ ಇರುವ ಪ್ರೀತಿಯನ್ನು ಕಂಡು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *