ವಿಜಯೇಂದ್ರ ಮಾಡಿದ ಭ್ರಷ್ಟಾಚಾರಕ್ಕೆ ಈ ದಾಳಿ ಸಾಕ್ಷಿ: ಎಚ್. ವಿಶ್ವನಾಥ್

Public TV
2 Min Read

– ಇದು ವಿಜಯೇಂದ್ರನ ಮೇಲೆ ಆದ ಐಟಿ ದಾಳಿ
– ದಾಳಿಗೆ ಒಳಗಾದವರೆಲ್ಲಾ ವಿಜಯೇಂದ್ರ ಕಂಪನಿಯವರು
– ಇದರ ಟಾರ್ಗೆಟ್ ಬಿಎಸ್‍ವೈ ಅಲ್ಲ, ಕರಪ್ಷನ್ ಟಾರ್ಗೆಟ್

ಮೈಸೂರು: ಇದು ಟಾರ್ಗೆಟ್ ಯಡಿಯೂರಪ್ಪ ಅಲ್ಲ. ಇದು ಟಾರ್ಗೆಟ್ ಕರಪ್ಷನ್. ನಾನು ಹಿಂದೆ ಮಾಡಿದ ಆರೋಪಗಳು ಈ ದಾಳಿ ಮೂಲಕ ಸತ್ಯವಾಗಿದೆ. ವಿಜಯೇಂದ್ರ ಮಾಡಿದ ಮಹಾ ಭ್ರಷ್ಟಾಚಾರಕ್ಕೆ ಈ ದಾಳಿ ಇನ್ನೊಂದು ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿದಿದ್ದು ವಯಸ್ಸಿನ ಕಾರಣಕ್ಕೆ ಅಲ್ಲ. ಮಗ ಮಾಡಿದ ಭ್ರಷ್ಟಾಚಾರದ ಕಾರಣಕ್ಕೆ ಅವರು ಅಧಿಕಾರದಿಂದ ಕೆಳಗೆ ಇಳಿದರು. ಈ ದಾಳಿ ಪರೋಕ್ಷವಾಗಿ ವಿಜಯೇಂದ್ರ ಮೇಲೆ ಆದ ದಾಳಿ. ತಂದೆಯ ಪೆನ್, ನಾಲಗೆ ಎಲ್ಲವನ್ನೂ ಕಿತ್ತುಕೊಂಡು ತಂದೆಯ ಮರ್ಯಾದೆಯನ್ನು ಕಳೆದು ಪಕ್ಷದ ಮರ್ಯಾದೆಯನ್ನೂ ಕಳೆದರು ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಆಪ್ತನ ಮನೆ ಮೇಲೆ ಐಟಿ ರೇಡ್

ಇಂದು ಬೆಳಗ್ಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದ ಉಮೇಶ್ ಸಹಿತ 30ಕ್ಕೂ ಹೆಚ್ಚು ಕಾಂಟ್ರ್ಯಾಕ್ಟರ್ ಗಳ ಮನೆ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಎಂಟಿಸಿ ಕಂಡೆಕ್ಟರ್ ಆಗಿದ್ದ ಉಮೇಶ್ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರ ಆಪ್ತ ಸಹಾಯಕನಾಗಿ ಕಾರ್ಯನಿರ್ವಹಿಸಿದರು. ಬಳಿಕ ವಿಜಯೇಂದ್ರ ಹಾಗೂ ಬಿಎಸ್‍ವೈ ಇಬ್ಬರ ವ್ಯವಹಾರಗಳನ್ನು ಉಮೇಶ್ ನೋಡಿಕೊಳ್ಳುತ್ತಿದ್ದರು. ಇದನ್ನೂ ಓದಿ: ನಿಮ್ಮ ಪಕ್ಷದ ಫ್ಯಾಮಿಲಿ ಬ್ಯುಸಿನೆಸ್‍ಗೆ ಸಂಘದಲ್ಲಿಯೇ ತರಬೇತಿ ನೀಡಲಾಗ್ತಿದೆಯೇ: ಕಟೀಲ್‍ಗೆ ಹೆಚ್.ಕೆ.ಕುಮಾರಸ್ವಾಮಿ ಪ್ರಶ್ನೆ

ಮೂಲತಃ ಶಿವಮೊಗ್ಗ ಜಿಲ್ಲೆ ಆಯನೂರಿನವರಾಗಿರುವ ಉಮೇಶ್, ಬಿಎಸ್‍ವೈ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. 2008ರಲ್ಲಿ ಬಿಎಸ್‍ವೈ ಸಿಎಂ ಆಗಿದ್ದಾಗ ಸಿಎಂ ಆಪ್ತ ಶಾಖೆಯಲ್ಲಿ ಕೆಲಸ ಮಾಡಿದ್ದ ಬಳಿಕ ಅಧಿಕಾರ ಕಳೆದುಕೊಂಡರೂ ಬಿಎಸ್‍ವೈ ನಂಟು ಬಿಟ್ಟೇ ಇರಲಿಲ್ಲ. ಬಿಎಸ್‍ವೈ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಆಪ್ತ ಸಹಾಯಕನಾಗಿ ಕೆಲಸ ಮಾಡಿದ್ದರು. ಬಿಎಸ್‍ವೈ ಎಲ್ಲಾ ಆಪ್ತ ಖಾಸಗಿ ಕೆಲಸಗಳನ್ನು ನಿರ್ವಹಿಸುತ್ತಿದ್ದ ಉಮೇಶ್ ಇದೀಗ ಬಿಎಸ್‍ವೈ ರಾಜೀನಾಮೆ ಬಳಿಕ ಹಾಲಿ ಸಿಎಂ ಕಚೇರಿಯಲ್ಲಿ ಸಹಾಯಕನಾಗಿ ಸೇರ್ಪಡೆಗೊಂಡಿದ್ದರು. ಇದನ್ನೂ ಓದಿ: ಬಿಎಸ್‍ವೈ ಆಪ್ತನ ಮೇಲೆ ಐಟಿ ರೇಡ್- ಬಿಜೆಪಿಯ ಆಂತರಿಕ ಕಿತ್ತಾಟ ಇದಕ್ಕೆ ಕಾರಣ: ಎಚ್‍ಡಿಕೆ

ಸಿಎಂ ಆಪ್ತ ಸಹಾಯಕನಾದ್ರೂ ಬಿಎಸ್‍ವೈ ಮನೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದು, ಯಡಿಯೂರಪ್ಪ ವಿಧಾನಸಭೆ ವಿಪಕ್ಷ ನಾಯಕರಾದಾಗಿಂದಲೂ ಜೊತೆಗೆ ಇರುವ ಉಮೇಶ್ ಶಿವಮೊಗ್ಗ, ಬೆಂಗಳೂರಿನಲ್ಲಿ ನೂರಾರು ಕೋಟಿ ಆಸ್ತಿ ಮಾಡಿರುವ ಆರೋಪ ಕೇಳಿ ಬಂದಿದ್ದು, ವಿಜಯನಗರದಲ್ಲಿ ಒಂದು ಭವ್ಯ ಮನೆಯ ನಿರ್ಮಾಣ ಮಾಡುತ್ತಿರುವ ಉಮೇಶ್ ಅವರ ಮೇಲೆ ಐಟಿ ರೇಡ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *