ದೇಶ ಸುರಕ್ಷಿತ ಅಲ್ಲ ಎಂದ ಖಾನ್‍ಗಳು ಅಫ್ಘಾನಿಸ್ತಾನಕ್ಕೆ ಹೋಗಲಿ: ಯತ್ನಾಳ್

Public TV
1 Min Read

– ಡ್ರಗ್ಸ್ ಕೇಸ್‍ನಲ್ಲಿ ಕೈ ಹಾಗೂ ಬಿಜೆಪಿ ಶಾಸಕರು ಇದ್ದಾರೆ

ವಿಜಯಪುರ: ದೇಶ ಸುರಕ್ಷಿತ ಅಲ್ಲ ಎಂದ ಖಾನ್‍ಗಳು ದೇಶ ಬಿಡಲಿ. ಅವ್ರೆಲ್ಲಾ ನೇರವಾಗಿ ಅಫ್ಘಾನಿಸ್ತಾನಕ್ಕೆ ಹೋಗಲಿ. ದೇಶದಲ್ಲಿನ ಹಿಂದೂಗಳು ಸಿನಿಮಾ ನೋಡುತ್ತಾರೆ. ಖಾನ್‍ಗಳು ಸಾವಿರಾರು ಕೋಟಿ ಗಳಿಸುತ್ತಾರೆ. ಅವರ ಮಕ್ಕಳೆಲ್ಲಾ ಹೀಗೆ ಮಜಾ ಮಾಡ್ಕೊಂಡು ದೇಶದ ವ್ಯವಸ್ಥೆಯನ್ನೇ ಕೆಡಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ಅವರ ತಂದೆ ಶಾರೂಖ್ ಖಾನ್‍ರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ಡ್ರಗ್ಸ್ ಮಾಫಿಯಾ ಭಯೋತ್ಪಾದನೆಯ ಒಂದು ಭಾಗ. ಸಿನಿಮಾ ನಟರು ಡ್ರಗ್ಸ್ ಮಾಫಿಯಾದ ಒಂದು ಭಾಗವಾಗಿದ್ದಾರೆ. ಡ್ರಗ್ಸ್ ಮೂಲಕ ಹಿಂದೂ ಯುವಕರನ್ನು ಟಾರ್ಗೆಟ್ ಮಾಡಲಾಗಿದೆ. ಯೌವನ ಹಾಳು ಮಾಡಲಾಗುತ್ತಿದೆ. ನಪುಂಸಕತ್ವ ಉಂಟು ಮಾಡಿ, ಹಿಂದೂಗಳ ಜನಸಂಖ್ಯೆ ಕಡಿಮೆ ಮಾಡಬೇಕು ಎನ್ನುವ ದುರುದ್ದೇಶ ಇದರ ಹಿಂದಿದೆ. ರಾಜ್ಯದಲ್ಲಿ ಡ್ರಗ್ಸ್ ಕೇಸನ್ನು ಮುಚ್ಚಿ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಕ್ಟೋಬರ್ 7 ರವರೆಗೆ ಆರ್ಯನ್ ಖಾನ್ ಎನ್‍ಸಿಬಿ ವಶಕ್ಕೆ- ಕೋರ್ಟ್‍ನಲ್ಲಿ ವಾದ- ಪ್ರತಿವಾದ ಹೇಗಿತ್ತು?

ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ ಆದರೂ ಏನು ಮಾಡಲು ಆಗುತ್ತಿಲ್ಲ. ಎಬಿವಿಪಿ ಸಾಕಷ್ಟು ಹೋರಾಟ ಮಾಡುತ್ತಿದೆ. ನಮ್ಮ ಗೃಹ ಸಚಿವರು ದೇಶ ಭಕ್ತರಾಗಿದ್ದು, ಡ್ರಗ್ಸ್ ಮಾಫಿಯಾವನ್ನು ಸುಮ್ಮನೆ ಬಿಡಬಾರದು. ಬೆಂಗಳೂರು ಡ್ರಗ್ಸ್ ಪ್ರಕರಣದಲ್ಲೂ ಪ್ರಭಾವಿಗಳ ಮಕ್ಕಳು, ಸಿನಿಮಾ ನಟರು ಇದ್ದಾರೆ. ಡ್ರಗ್ಸ್ ಕೇಸ್‍ನಲ್ಲಿ ಸೀಮಿತ ತನಿಖೆ ನಡೆದಿದೆ. ತಮಗೆಷ್ಟು ಬೇಕೋ ಅಷ್ಟೇ ತನಿಖೆ ನಡೆಸಿದ್ದಾರೆ. ಆಳವಾಗಿ ತನಿಖೆ ನಡೆದಿದ್ದರೆ ಕೈ ಹಾಗೂ ಬಿಜೆಪಿ ಶಾಸಕರು ಇದರಲ್ಲಿ ಇದ್ದರು. ಡ್ರಗ್ಸ್ ಕೇಸ್‍ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲ ಶಾಸಕರ ಮಕ್ಕಳ ಹೆಸರು ಕೇಳಿ ಬಂದಿತ್ತು ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಬಂಧನದ ಬಳಿಕ ಪುತ್ರನ ಜೊತೆ 2 ನಿಮಿಷ ಮಾತಾಡಿದ ನಟ ಶಾರೂಖ್!

Share This Article
Leave a Comment

Leave a Reply

Your email address will not be published. Required fields are marked *