ಮದುವೆ ಊಟಕ್ಕೆ ಕರೆದಿಲ್ಲವೆಂದು ಫೋಟೋಗಳನ್ನೇ ಡಿಲೀಟ್ ಮಾಡಿದ ಫೋಟೋಗ್ರಾಫರ್!

Public TV
1 Min Read

ನವದೆಹಲಿ: ಮದುವೆಗೆ ಬರುವ ಅತಿಥಿಗಳಿಗೆ ಊಟ ಮಾಡಿಕೊಂಡು ಹೋಗಿ ಎಂದು ಹೇಳುತ್ತಾರೆ. ಆದರೆ ಮದುವೆಗೆ ಬರುವ ಫೋಟೋಗ್ರಾಫರ್ ಅಥವಾ ಇನ್ನಿತರ ಕೆಲಸಗಾರರನ್ನು ಕಡೆಗಣಿಸಲಾಗುತ್ತದೆ. ಊಟ, ತಿಂಡಿ ವೇಳೆಯಾದರೂ ಫೋಟೋ ತೆಗೆದುಕೊಳ್ಳುವಲ್ಲಿ ಬಿಜಿಯಾಗಿರುವ ಮದುಮಕ್ಕಳು, ಕುಟುಂಬಸ್ಥರು ಅವರಿಗೆ ಊಟ ಮಾಡಿದ್ರಾ ಎಂದು ಕೇಳುವುದು ಕಡಿಮೆ. ಇದಕ್ಕೆ ಊದಾಹರಣೆ ಎನ್ನುವಂತಹ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ.

ಊಟ, ತಿಂಡಿ, ನೀರನ್ನೂ ಕೊಡದೆ ದಿನಪೂರ್ತಿ ದುಡಿಸಿಕೊಂಡ ಕಾರಣ ಫೋಟೋಗ್ರಾಫರ್ ಒಬ್ಬ ಸಿಟ್ಟಿನಿಂದ ಸಂಜೆ ಮದುವೆ ಸಮಾರಂಭ ಸಂಪೂರ್ಣ ಫೋಟೋಗಳನ್ನು ವಧು, ವರನ ಎದುರಿಗೆ ಡಿಲೀಟ್ ಮಾಡಿ ಮದುವೆ ಮನೆಯಿಂದ ಹೊರನಡೆದಿದ್ದಾನೆ. ಇದನ್ನೂ ಓದಿ:  ನವಜೋತ್ ಸಿಂಗ್ ಸಿಧುನಂತೆ ಕನ್ಹಯ್ಯ ಕುಮಾರ್ ಕಾಂಗ್ರೆಸ್ಸನ್ನು ನಾಶ ಮಾಡುತ್ತಾರೆ: ಆರ್​​ಜೆಡಿ

ಹಣವನ್ನು ಊಳಿಸುವುದಕ್ಕಾಗಿ ಮುಮಗ ತನ್ನ ಸ್ನೇಹಿತನಿಗೆ ಫೋಟೋಗ್ರಾಫರ್ ಆಗಿ ಬರಲು ಹೇಳಿದ್ದಾನೆ. ನಾಯಿಯ ಫೋಟೋ ತೆಗೆದು ಸಾಮಾಜಿ ಜಾಲತಾಣದಲ್ಲಿ ಅವುಗಳನ್ನು ಶೇರ್ ಮಾಡುವುದರಲ್ಲಿ ಪಳಗಿರುವ ಸ್ನೇಹಿತ ತಾನು ಮದುವೆ ಫೋಟೋಗ್ರಾಫಿಗೆ ಬರುವುದಿಲ್ಲ ಎಂದರೂ ಕೇಳದೇ ಮದುಮಗ ಒತ್ತಾಯ ಮಾಡಿದ್ದಾನೆ. ಕೊನೆಗೆ ಇಂತಿಷ್ಟು ದುಡ್ಡು ಎಂದು ಮಾತುಕತೆ ನಡೆಸಿ ಸ್ನೇಹಿತ ಒಪ್ಪಿಕೊಂಡಿದ್ದಾನೆ.

ಬೆಳಗಿನ ಜಾವದಿಂದ ಸಂಜೆಯವರೆಗೂ ಮದುವೆ ಕಾರ್ಯಕ್ರಮ ನಡೆದಿದೆ. ಆದರೆ ಒಂದೇ ಒಂದು ಸಲವು ಯಾರೂ ಫೋಟೋಗ್ರಾಫರ್‍ನನ್ನು ಮಾತನಾಡಿಸಿಲ್ಲ. ಊಟ, ತಿಂಡಿಗೂ ಕೇಳಿಲ್ಲ. ಈತ ಅಲ್ಲಿರುವವರ ಬಳಿ ಬಾಯಿಬಿಟ್ಟು ಹೇಳಿದರು ಇದೊಂದು ಫೋಟೋ ಎನ್ನುತ್ತಲೇ ಕಾಲ ಕಳೇದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಫೋಟೋಗ್ರಾಫರ್ ಮದುವೆ ಕಾರ್ಯಕ್ರಮ ಮುಗಿಯುವವರೆಗೆ ಕಾದು ನಂತರ ಸಂಪೂರ್ಣ ಫೋಟೋ ಡಿಲೀಟ್ ಮಾಡಿ ಸೇಡು ತೀರಿಸಿಕೊಂಡಿದ್ದಾನೆ.
ಸಂಜೆಯವರೆಗೂ ಊಟ, ತಿಂಡಿ ನೀಡಿಲ್ಲ. ಸಿಕ್ಕಾಪಟ್ಟೆ ಶಕೆ ಇದೆ. ಯಾರು ಒಂದು ಲೋಟ ನೀರನ್ನು ಕೊಟ್ಟಿಲ್ಲ. ಆದ್ದರಿಂದ ಹೀಗೆ ಮಾಡಿದೆ ಎಂದು ತನಗಾಗಿರುವ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಇದಕ್ಕೆ ನೂರಾರು ಕಾಮೆಂಟ್‍ಗಳು ಬಂದಿದೆ.
Share This Article
Leave a Comment

Leave a Reply

Your email address will not be published. Required fields are marked *