ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ – ಶಿವನ ಭಕ್ತನಾಗಿದ್ದ ಗಾಂಜಾ ಆರೋಪಿ

Public TV
3 Min Read

– ಇರಾನಿಗೆ ಮರಳಿದ್ರೆ ನನ್ನನ್ನು ಹತ್ಯೆ ಮಾಡ್ತಾರೆ
– ಭಾರತದಲ್ಲಿ ಗಾಂಜಾದ ಬಗ್ಗೆ ವಿಪರೀತ ಅಧ್ಯಯನ
– ತಂತ್ರಜ್ಞಾನದ ಸಹಾಯದಿಂದ ಮನೆಯಲ್ಲೇ ಗಾಂಜಾ ಬೆಳೆ

ಬೆಂಗಳೂರು: ಈಗಲ್ಟನ್ ವಿಲ್ಲಾದಲ್ಲಿ ಗಾಂಜಾ ಬೆಳೆದು ಬಂಧನಕ್ಕೆ ಒಳಗಾದ ಪ್ರಮುಖ ಆರೋಪಿ ಜಾವೀದ್ ಶಿವನ ಪೂಜೆ ಮಾಡುವುದರ ಜೊತೆಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ರಾಮನಗರ ಸಮೀಪದ ಈಗಲ್ಟನ್ ರೆಸಾರ್ಟ್ ಆವರಣದಲ್ಲಿ ಹೈಡ್ರೋ ಗಾಂಜಾ ಬೆಳೆದಿದ್ದ ಈತನ ವಿಚಾರಣೆ ವೇಳೆ ಪೊಲೀಸರೇ ದಂಗಾಗಿದ್ದಾರೆ. ಜಾವೀದ್ ಇರಾನ್ ಮೂಲದ ಯುವಕನಾಗಿದ್ದ ಈತ ಹಿಂದೂ ಧರ್ಮದ ಮೇಲೆ ಬಲವಾದ ನಂಬಿಕೆ ಹೊಂದಿದ್ದ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಈಗಲ್ಟನ್ ವಿಲೇಜ್ ಮೇಲೆ ಸಿಸಿಬಿ ದಾಳಿ- ಇಬ್ಬರು ಇರಾನಿಗಳು ಸೇರಿ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳು ಅರೆಸ್ಟ್

ಜಾವದ್ ಇರಾನ್ ಮೂಲದ ಇಸ್ಲಾಂ ಯುವಕ ಆದರೆ ಆತ ನಂಬಿಕೆ ಇಟ್ಟಿದ್ದು ಮಾತ್ರ ಹಿಂದೂ ಧರ್ಮದ ಮೇಲೆ. ಮನೆಯಲ್ಲಿ ಶಿವನ ಪೂಜೆ, ಧ್ಯಾನ ಮಾಡುತ್ತಿದ್ದ ಆರೋಪಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ಎಂದು ತನಿಖೆಯಲ್ಲಿ ತಿಳಿದಿದುಬಂದಿದೆ. ಜಾವೀದ್ ರೋಸ್ಟಂಪೌರ್ ಎಂಬಿಎ ಪದವೀಧರನಾಗಿದ್ದು, 2010ರಲ್ಲಿ ಭಾರತಕ್ಕೆ ಬಂದಿದ್ದ ಈತ ಬಾಣಸವಾಡಿಯ ಖಾಸಗಿ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾನೆ. ಭಾರತಕ್ಕೆ ಬಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರೂ ಈತ ಹೆಸರನ್ನು ಮಾತ್ರ ಬದಲಾಯಿಸಿರಲಿಲ್ಲ. ಭಯೋತ್ಪಾದನೆಯಿಂದ ಬೇಸತ್ತು ಇಸ್ಲಾಂ ಧರ್ಮವನ್ನು ನಾನು ತೊರೆದು ಹಿಂದೂ ಧರ್ಮ ಸ್ವೀಕರಿಸಿದ್ದೇನೆ ಎಂದು ತನಿಖೆಯ ವೇಳೆ ಹೇಳಿದ್ದಾನೆ.

ಪೋಷಕರು ಇರಾನ್ ದೇಶದಲ್ಲಿದ್ದರೂ ಯಾಕೆ ಹೋಗಿಲ್ಲ ಎಂದು ಪ್ರಶ್ನಿಸಿದ್ದಕ್ಕೆ, ತಂದೆ, ತಾಯಿಗೆ ಇಷ್ಟವಿಲ್ಲದಿದ್ದರೂ ಹಿಂದೂ ಧರ್ಮಕ್ಕೆ ಮತಾಂತರವಾದೆ. ಮತಾಂತರವಾದ ಬಳಿಕ ಇರಾನಿಗೆ ಹೋದರೆ ಕೊಲ್ಲುತ್ತಾರೆಂಬ ಭಯದಿಂದಾಗಿ ಇಲ್ಲೇ ಉಳಿದುಕೊಂಡಿದ್ದೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಸುಳ್ಯದಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನ- ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಗಾಂಜಾ ಬೆಳೆದಿದ್ದು ಯಾಕೆ?
ಸಿಜರ್ ಡಿಸಿಸ್ ಖಾಯಿಲೆ(ಮಾನಸಿಕ ಖಿನ್ನತೆ)ಯಿಂದ ಬಳಲುತ್ತಿದ್ದೇನೆ. ಇದಕ್ಕೆ ಔಷಧಿಗಾಗಿ ಆನ್‍ಲೈನ್‍ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಗಾಂಜಾದಿಂದ ಇದಕ್ಕೆ ಪರಿಣಾಮಕಾರಿ ಔಷಧಿ ಎನ್ನುವುದು ಗೊತ್ತಾಯಿತು. ಬಳಿಕ ಅದಕ್ಕೆ ಗಾಂಜಾ ಸೇವನೆ ಆರಂಭಿಸಿದೆ ಎಂದು ಪೊಲೀಸರೊಂದಿಗೆ ತಿಳಿಸಿದ್ದಾನೆ.

ನಾನು ಗಾಂಜಾ ಬಗ್ಗೆ ತಿಳಿದುಕೊಂಡ ಬಳಿಕ ಅಂದಿನಿಂದ ಗಾಂಜಾ ಬೆಳೆಯಲು ಮತ್ತು ಸೇವಿಸಲು ಆರಂಭ ಮಾಡಿದೆ. ಗಾಂಜಾ ಸೊಪ್ಪನ್ನು ಕೇವಲ ಸೇದುತ್ತಿರಲಿಲ್ಲ. ಅದನ್ನು ಬೇಯಿಸಿ ತಿನ್ನುತ್ತಿದ್ದೆ ಅದರಿಂದ ಮನಸ್ಸಿಗೆ ನೆಮ್ಮದಿ ಸಿಗತ್ತೆ ಎಂದು ಸಿಸಿಬಿ ಎದುರು ಹೇಳಿಕೆ ನೀಡಿದ್ದಾನೆ.

ಈ ಹೈಡ್ರೋ ಗಾಂಜಾ ಉತ್ತಮ ಗುಣಮಟ್ಟದ್ದಾಗಿದ್ದು, ಹೀಗಾಗಿ ಇದು ತಿನ್ನಲು ಯೋಗ್ಯವಾಗಿದೆ ಎಂದಿದ್ದಾನೆ. ವಿದ್ಯಾವಂತನಾಗಿರುವ ಜಾವೀದ್ ಸಾಕ ಗಾಂಜಾ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾನೆ. ಭಾರತದಲ್ಲಿ ಗಾಂಜಾಗೆ 11 ಸಾವಿರ ವರ್ಷದ ಇತಿಹಾಸವಿದೆ. ಇದು ಹಲವು ರೋಗಕ್ಕೆ ಔಷಧಿ ಎಂದು ಪೊಲೀಸರ ಮುಂದೆ ತನ್ನ ಅಧ್ಯಯನದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.

ಗ್ರೋ ವಿಥ್ ಈಸಿ ವೆಬ್ ಸೈಟ್ ಮೂಲಕ ಅಧ್ಯಯನ ಮಾಡಿ, ಅಮೆಜಾನ್ ಮೂಲಕ ಮಾರಿಜುವಾನ ಪುಸ್ತಕ ಖರೀದಿಸಿ ಗಾಂಜಾ ಬೆಳೆಯೋದರ ಬಗ್ಗೆ ಅಧ್ಯಯನ ಮಾಡಿದ್ದ. ಡೈನಾಸೆನ್ ವೆನ್ ಸೈಟ್ ಮೂಲಕ ಯುರೋಪ್ ನಿಂದ ಗಾಂಜಾ ಬೀಜ ಖರೀದಿಸಿ ಅದನ್ನು ಫಿಶ್ ಟ್ಯಾಂಕ್ ನಲ್ಲಿಟ್ಟು ಬೆಳೆಯಲು ಪ್ರಾರಂಭ ಮಾಡಿದ್ದ.  ದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ಒಂದೇ ಮನೆಯ ಮೂವರು ಹೆಣ್ಣುಮಕ್ಕಳ ಕೊಲೆ

ತನ್ನ ಪ್ರಯೋಗ ಯಶಸ್ವಿಯಾದ ಬಳಿಕ ನಂತರ ದೊಡ್ಡ ಮಟ್ಟದಲ್ಲಿ ಗಾಂಜಾ ಬೆಳೆಯಲು ಪ್ಲ್ಯಾನ್ ಮಾಡಿ, ಮೊದಲು ಕಮ್ಮನಹಳ್ಳಿಯ ಅಪಾರ್ಟ್‍ಮೆಂಟ್ ನಲ್ಲಿ ವಾಸವಾಗಿದ್ದು ಬೆಳೆಸುತ್ತಿದ್ದ. ನಂತರ ಸಾಕಷ್ಟು ಸದ್ದು ಮಾಡಿದ್ದ ಸೆಲೆಬ್ರಿಟಿ ಡ್ರಗ್ಸ್ ಕೇಸ್ ಕಂಡು ಹೆದರಿದ್ದ ಜಾವೀದ್ ಜನ ಹೆಚ್ಚಿರುವ ಪ್ರದೇಶದಲ್ಲಿ ಬೆಳೆಯುವುದು ಕಷ್ಟ ಎಂದು ನಂತರ ಅಪಾರ್ಟ್ ಮೆಂಟ್ ನಿಂದ ಜಾಗ ಬದಲಾವಣೆ ಮಾಡಿ ಬಿಡದಿಯ ಈಗಲ್ಟನ್ ರೆಸಾರ್ಟ್ ವಿಲ್ಲಾದಲ್ಲಿ ವಾಸ್ತವ್ಯ ಹೂಡಿದ್ದ.

ಆರ್ಮಿ ಆಫಿಸರ್ ಓರ್ವರಿಂದ ವಿಲ್ಲಾ ಬಾಡಿಗೆಗೆ ಪಡೆದಿದ್ದ ಜಾವೀದ್ ಪ್ರತಿ ತಿಂಗಳು 36 ಸಾವಿರ ಬಾಡಿಗೆ ನೀಡುತ್ತಿದ್ದ. ವಿಲ್ಲಾಗೆ ಯಾರು ಬರೋದಿಲ್ಲ ಎಂದುಕೊಂಡು ವಿಲ್ಲಾದಲ್ಲಿ ಹೈಡ್ರೋ ಗಾಂಜಾ ಬೆಳೆಯಲು ಪ್ರಾರಂಭ ಮಾಡಿದ್ದ. ಈತ ಬೆಳೆಯುತ್ತಿದ್ದ ಗಾಂಜಾ ದಲ್ಲಿ ಸಿಬಿಡಿ ಕೆಮಿಕಲ್ ಇರುತ್ತಿತ್ತು. ಸಿಬಿಡಿ ಕೆಮಿಕಲ್ ಸೇವಿಸಿದರೆ ಮತ್ತು ಬರುವ ಭಾವನೆ ನೀಡುತ್ತದೆ. ಮೆದುಳಿನ ಕಾರ್ಯ ಬದಲಿಸುವ ಕ್ಷಮತೆ ಈ ರಾಸಾಯನಿಕ ಹೊಂದಿದ್ದು, ಈ ರಾಸಾಯನಿಕ ಮೆದುಳಿಗೆ ತಲುಪಿದಾಗ ಮನಃಸ್ಥಿತಿ, ಅರಿವು, ನಡವಳಿಕೆ ಮತ್ತು ವಾಸ್ತವದ ಗ್ರಹಿಕೆಗಳಲ್ಲಿ ತಾತ್ಕಾಲಿಕ ಬದಲಾವಣೆ ಆಗಲಿದೆ ಎಂಬುದು ತಿಳಿದುಬಂದಿದೆ.

ಹೈಡ್ರೋ ಗಾಂಜಾ ಬೆಳೆಯಲು ಹೆಚ್ಚು ಉಷ್ಣಾಂಶ ಮತ್ತು ಹೆಚ್ಚು ತಂಪು ವಾತಾವರಣ ಕೂಡ ಇರಬಾರದು ಅದೆಲ್ಲವನ್ನು ಅಧ್ಯಯನ ಮೂಲಕ ತಿಳಿದುಕೊಂಡಿದ್ದ. ಮನೆಯಲ್ಲಿ ಯುವಿ ಲೈಟ್ಸ್, ಎಲ್‍ಇಡಿ, ಲ್ಯಾಂಪ್ ಟೆಂಪರೇಚರ್, ರೆಗ್ಯೂಲೇಟರ್ ಬಳಸಿ ಮನೆಯಲ್ಲಿಯೇ ಹೈಡ್ರೋ ಗಾಂಜಾ ಉತ್ಪಾದನೆ ಮಾಡುತ್ತಿದ್ದ. ಇದನ್ನೂ ಓದಿ: ರೌಡಿಗಳಿಗೆ ಕಾನೂನಿನ ಭಯವಿಲ್ಲದೆ ಅಟ್ಟಹಾಸ ತೋರಿಸುತ್ತಿದ್ದಾರೆ: ಯು.ಟಿ.ಖಾದರ್

Share This Article
Leave a Comment

Leave a Reply

Your email address will not be published. Required fields are marked *