ಪಬ್ಲಿಕ್ ಮ್ಯೂಸಿಕ್‍ಗೆ 7ರ ಸಂಭ್ರಮ – 7 ಮಂದಿ ಸಾಧಕರಿಗೆ ಗೌರವ

By
2 Min Read

ಬೆಂಗಳೂರು: ಕನ್ನಡಿಗರ ನೆಚ್ಚಿನ ಮ್ಯೂಸಿಕ್ ಚಾನೆಲ್, ನಿಮ್ಮ ಪಬ್ಲಿಕ್ ಮ್ಯೂಸಿಕ್ ಇಂದಿಗೆ ಏಳು ವರ್ಷದ ಸಂಭ್ರಮ. ಕಳೆದ ಎರಡು ವರ್ಷಗಳ ಕೊರೊನಾ ಸಂಕಷ್ಟದ ಸಮಯದಲ್ಲಿ ಮಿಡಿದವರಿಗೆ ನಾವು 7ನೇ ವರ್ಷದ ವಿಶೇಷ ‘ಸಪ್ತಸ್ವರ’ ಕಾರ್ಯಕ್ರಮವನ್ನು ಅರ್ಪಣೆ ಮಾಡಿದ್ದೇವೆ.

Public Music

ಪಬ್ಲಿಕ್ ಟಿವಿ ಕಚೇರಿಯಲ್ಲಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್. ರಂಗನಾಥ್, ರೈಟ್ ಮ್ಯಾನ್ ಸಂಸ್ಥೆಯ ನಿರ್ದೇಶಕ, ಲಹರಿ ಕಂಪನಿಯ ಮುಖ್ಯಸ್ಥ ಮನೋಹರ್ ನಾಯ್ಡ್, ಅಶ್ವಿನಿ ಆಡಿಯೋ ಕಂಪನಿಯ ಮಾಲೀಕ ರಾಮ್ ಪ್ರಸಾದ್, ರೈಟ್ ಮ್ಯಾನ್ ಮೀಡಿಯಾ ಸಿಒಒ ಮತ್ತು ಮಾರ್ಕೆಟಿಂಗ್ ಹೆಡ್ ಹರೀಶ್ ಕುಮಾರ್ ದೀಪ ಬೆಳಗಿಸಿ ಶುಭ ಕೋರಿದರು. ಇದನ್ನೂ ಓದಿ: ಸಂತೋಷ್ ಆನಂದ್ ರಾಮ್ ಕಚೇರಿಗೆ ಪುನೀತ್, ಜಗ್ಗೇಶ್ ಭೇಟಿ

Public Music

ಸಪ್ತಸ್ವರ ಕಾರ್ಯಕ್ರಮ:
ಕಳೆದೆರೆಡು ವರ್ಷಗಳಿಂದ, ಕೊರೊನಾ ವೈರಸ್‍ನಿಂದ, ಹಸಿವಿನಿಂದ ಪರದಾಡಿದ ಒಡಲುಳೆಷ್ಟೋ? ಹನಿ ಆಕ್ಸಿಜನ್‍ಗಾಗಿ ಅಂಗಲಾಚಿದ ಸ್ವರಗಳೆಷ್ಟೋ? ಕೊನೆಗೆ ಮಣ್ಣು ಸೇರಲು ಜಾಗ ತಡಕಿದ ಹೃದಯಗಳೆಷ್ಟೋ? 2ವರ್ಷಗಳಲ್ಲಿ ಅತೀ ಹೆಚ್ಚು ಕಿವಿ ಕೇಳಿದ ಸ್ವರ, ಸಂಕಟ. ಈ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ನಾವಿದ್ದೇವೆ ಎಂದು ಸಹಾಯಾಸ್ತ ಚಾಚಿದವರಿಗೆ 7ನೇ ವರ್ಷದ ಸಪ್ತಸ್ವರ ಕಾರ್ಯಕ್ರಮವನ್ನು ಅರ್ಪಣೆ ಮಾಡಿದ್ದೇವೆ. ಇದನ್ನೂ ಓದಿ: ಬಟರ್ ಚಿಕನ್ ಗೋಲ್ ಗಪ್ಪ ಫೋಟೋ ವೈರಲ್ – ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ?

Public Music

ಸಂಗೀತಕ್ಕೆ ಹೇಗೆ ಏಳು ಸ್ವರ ಮುಖ್ಯವೋ ಹಾಗೆ ಕೊರೊನಾ ಸಮಯದಲ್ಲಿ ನೆರವಾದ ಏಳು ಸ್ವರಗಳು ಈ ಜಗತ್ತಿಗೆ ಅಷ್ಟೆ ಮುಖ್ಯವಾಗಿದೆ. ಸಪ್ತಸ್ವರ ಕಾರ್ಯಕ್ರಮದಲ್ಲಿ ಹೆಚ್.ಆರ್ ರಂಗನಾಥ್ ಅವರು ಕೊರೊನಾ ಸಮಯದಲ್ಲಿ ನೆರವಾದ ಏಳು ವಿಭಾಗದ ಗಣ್ಯರ ಜೊತೆ ಮಾತನಾಡಿ ಅವರನ್ನು ಅಭಿನಂದಿಸಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

75 ಸಾವಿರ ಜನರ ಹೊಟ್ಟೆ ತುಂಬಿಸಿದ ಬುಹುಭಾಷಾ ನಟಿ ಪ್ರಣಿತಾ, ರಾಜಕೀಯ ವಿಭಾಗದಿಂದ ಆರೋಗ್ಯ ಸಚಿವ ಸುಧಾಕರ್, ಆರೋಗ್ಯ ಇಲಾಖೆಯಿಂದ ನಾರಾಯಣ ನೇತ್ರಾಲಯ ಚೇರ್‍ಮ್ಯಾನ್ ಅಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಕೆ.ಭುಜಂಗ ಶೆಟ್ಟಿ, ಶಿಕ್ಷಣ ವಿಭಾಗದಿಂದ ರೇವಾ ಯೂನಿವರ್ಸಿಟಿಯ ಕುಲಪತಿಗಳಾದ ಡಾ. ಪಿ ಶ್ಯಾಮರಾಜು, ಹಾಗೂ ಎನ್‍ಜಿಓ ವಿಭಾಗದಿಂದ ಚಿಂತಕ ಯುವ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ, ಪೊಲೀಸ್ ಇಲಾಖೆಯಿಂದ ನಗರ ಶಸಸ್ತ್ರ ಮೀಸಲು ಪಡೆ ಮುಖ್ಯಪೇದೆ ಎಸ್.ಕುಮಾರಸ್ವಾಮಿ ಹಾಗೂ ಕೊನೆಯ ಸ್ವರವಾಗಿ ಡಿ.ಎಸ್ ಮ್ಯಾಕ್ಸ್ ಪ್ರಾಪಟ್ರೀಸ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎಸ್.ಪಿ ದಯಾನಂದ್‍ರಂತಹ ಸಾಧಕರನ್ನು ಗೌರವಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *