ಭೋಜನ ಕೂಟದಲ್ಲೂ ಆಪರೇಷನ್ ಹಸ್ತದ ಬಗ್ಗೆ ಎಚ್ಚರಿಕೆ ನೀಡಿದ ಬಿಎಸ್‍ವೈ

Public TV
2 Min Read

-ಮುಂದಿನ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲುವ ಗುರಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ರೇಸ್ ವೀವ್ ಕಾಟೇಜ್ ನಿವಾಸದಲ್ಲಿ ನಿನ್ನೆ ರಾತ್ರಿ ಭೋಜನ ಕೂಟ ಏರ್ಪಡಿಸಲಾಗಿತ್ತು. ಈ ವೇಳೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಕಾಂಗ್ರೆಸ್ ನಮ್ಮ ಶಾಸಕರನ್ನು ಸೆಳೆಯಲು ಗಾಳ ಹಾಕಿದೆ ಎಚ್ಚರದಿಂದಿರಿ. ಯಾರೂ ಕಾಂಗ್ರೆಸ್ ಪ್ರಲೋಭನೆಗೆ ಒಳಗಾಗುವುದು ಬೇಡ ಎಂದು ಕಿವಿಮಾತು ನೀಡಿದ್ದಾರೆ.

ಶಾಸಕರೊಂದಿಗೆ ಚರ್ಚಿಸಿದ ಬಿಎಸ್‍ವೈ, ಯಾರಾದರೂ ಕಾಂಗ್ರೆಸ್ ನಾಯಕರು ನಮ್ಮ ಶಾಸಕರ ಸಂಪರ್ಕಿಸಿದರೆ ನಾಯಕರ ಗಮನಕ್ಕೆ ತನ್ನಿ. ಶಾಸಕರ ಬೇಕು ಬೇಡಗಳನ್ನು ಈಡೇರಿಸಲು ನಮ್ಮ ಪಕ್ಷದಲ್ಲಿ ಕ್ರಮ ಕೈಗೊಳ್ಳಲಾಗುವುದು. ಅನುದಾನಗಳ ಬಿಡುಗಡೆ ತ್ವರಿತಗತಿಯಲ್ಲಿ ನಡೆಸಲಾಗುತ್ತದೆ. ಬಿಜೆಪಿಯಂಥ ಪಕ್ಷದ ವಾತಾವರಣ, ಬೆಳೆಯಲು ಇರುವ ಅವಕಾಶ ಬೇರೆ ಪಕ್ಷಗಳಲ್ಲಿಲ್ಲ. ಪಕ್ಷದ, ವರಿಷ್ಠರ ಬಗ್ಗೆ ಶಾಸಕರು ಅರ್ಥ ಮಾಡಿಕೊಳ್ಳಿ. ನಮಗೆ ಸಿಕ್ಕಿರುವಂತಹ ವರಿಷ್ಠರು ಕಾಂಗ್ರೆಸ್ ನವರಿಗೆ ಸಿಕ್ಕಿಲ್ಲ. ಬೊಮ್ಮಾಯಿಯವರಿಗೆ ಎಲ್ಲರ ಸಹಕಾರ ಅಗತ್ಯ ಇದೆ. ಸರ್ಕಾರ ಉತ್ತಮವಾಗಿ ನಡೆದುಕೊಂಡು ಹೋಗುತ್ತಿದೆ ಉತ್ತಮ ಕೆಲಸಗಳನ್ನು ಸರ್ಕಾರ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲುವುದು ನಮ್ಮ ಗುರಿಯಾಗಿದ್ದು, ಅದಕ್ಕಾಗಿ ಎಲ್ಲರೂ ಪಕ್ಷ ಸಂಘಟನೆ ಮಾಡಿ ಚುನಾವಣೆ ಗೆಲ್ಲೋಣ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡೋಣ ಎಂದರು. ಇದನ್ನೂ ಓದಿ: ಚೆನ್ನೈ ಸ್ಟಾರ್ಟ್‌ಅಪ್‌ನಿಂದ ಏಷ್ಯಾದಲ್ಲಿಯೇ ಮೊದಲ ಫ್ಲೈಯಿಂಗ್ ಕಾರು ಅನಾವರಣ

ಶಾಸಕರಿಗೆ ವಿವಿಧ ಬಗೆಯ ಅಡುಗೆ ಮಾಡಿಸಿದ್ದ ಸಿಎಂ, ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ವಿಧದ ಊಟದ ವ್ಯವಸ್ಥೆ ಮಾಡಿದ್ದರು. ಊಟದ ಜತೆಗೆ ಫ್ರೂಟ್ ಸಲಾಡ್, ಐಸ್ ಕ್ರೀಂ, ಪಾನ್ ಬೀಡಾಗಳ ವ್ಯವಸ್ಥೆ ಮಾಡಲಾಗಿತ್ತು. ಶಾಸಕರ ಟೇಬಲ್‍ಗಳಿಗೆ ಬೊಮ್ಮಾಯಿಯವರು ಖುದ್ದು ಹೋಗಿ ಆತ್ಮೀಯವಾಗಿ ಮಾತನಾಡಿಸಿದರು. ಔತಣ ಕೂಟಕ್ಕೆ ಬಹುತೇಕ ಶಾಸಕರು ಆಗಮಿಸಿದ್ದರು. ಬೆಳಗಾವಿ ಬ್ರದರ್ಸ್, ಎಮ್‍ಎಲ್‍ಸಿ ಸಿ.ಪಿ ಯೋಗೇಶ್ವರ್ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಕೆಲ ಶಾಸಕರು ಗೈರಾಗಿದ್ದರು. ಶಾಸಕರಲ್ಲಿ ಉತ್ತಮ ಅಭಿಪ್ರಾಯ ಮೂಡಿಸಲು ಸಿಎಂ ಬೊಮ್ಮಾಯಿ ಕಸರತ್ತು ನಡೆಸುತ್ತಿದ್ದು, ಮೈತ್ರಿ ಸರ್ಕಾರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವಧಿಯಲ್ಲಾಗಿರುವ ಲೋಪಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಯುವತಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಕ್ಯಾಬ್ ಡ್ರೈವರ್ – ಎಚ್ಚರಗೊಂಡು ಕಿರುಚಿದಾಗ ಕ್ಷಮೆ

 

Share This Article
Leave a Comment

Leave a Reply

Your email address will not be published. Required fields are marked *