ಭೋಜ್‍ಪುರಿ ಸಿನಿಮಾದಲ್ಲಿ ಕನ್ನಡತಿ ಮೇಘಶ್ರೀ ಮಿಂಚು

Public TV
2 Min Read

ಬೆಂಗಳೂರು: ಕಿರುತೆರೆ ಬೆಡಗಿ, ಸ್ಯಾಂಡಲ್‍ವುಡ್ ಚೆಂದದ ನಟಿ, ಕೃಷ್ಣ ತುಳಸಿ ಸಿನಿಮಾದಲ್ಲಿ ಸಂಚಾರಿ ವಿಜಯ್ ಜೊತೆ ನಟಿಸಿ ಗಮನ ಸೆಳೆದ ಮಲೆನಾಡಿನ ಹುಡುಗಿ ಮೇಘಶ್ರೀ, ಸ್ಯಾಂಡಲ್‍ವುಡ್, ಟಾಲಿವುಡ್, ಕಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಈಕೆ ಇದೀಗ ಭೋಜ್‍ಪುರಿ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ.

ಭೋಜ್‍ಪುರಿಯ ಖ್ಯಾತ ನಟನ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿರುವ ಸಂಭ್ರಮದಲ್ಲಿರುವ ಮೇಘಶ್ರೀ ಈ ಮೂಲಕ ಕನ್ನಡದ ಕಂಪು ಪಸರಿಸುತ್ತಿದ್ದಾರೆ. ಭೋಜ್‍ಪುರಿ ಚಿತ್ರರಂಗದ ಖ್ಯಾತ ನಟ ಕೇಸರಿಲಾಲ್ ಯಾದವ್ ಅಭಿನಯದ “ಅಪರಾಧಿ” ಸಿನಿಮಾದಲ್ಲಿ ಮೇಘಶ್ರೀ ನಟಿಸುತ್ತಿದ್ದಾರೆ. ಕೇಸರಿಲಾಲ್ ಯಾದವ್ ಜೊತೆ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಿರುವ ಸಂತಸದಲ್ಲಿರುವ ಮೇಘಶ್ರೀ ತಮ್ಮ ಪಾತ್ರದ ಬಗ್ಗೆಯೂ ಸಖತ್ ಥ್ರಿಲ್ ಆಗಿದ್ದಾರೆ. ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಈ ಚಿತ್ರದ ಶೂಟಿಂಗ್ ಉತ್ತರಪ್ರದೇಶದ ಗೋರಖ್‍ಪುರ್ ನಲ್ಲಿ ಭರದಿಂದ ಸಾಗುತ್ತಿದೆ. “ಅಪರಾಧಿ” ಚಿತ್ರಕ್ಕೆ ಶೇಖರ್ ಶರ್ಮಾ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ: ಎಲ್ಲಾ ಅಡೆತಡೆಗಳಿಗೂ ‘ಗ್ರೂಫಿ’ ಸಕ್ಸಸ್ ಉತ್ತರ – 25 ದಿನದ ಸಂಭ್ರಮದಲ್ಲಿ ಚಿತ್ರತಂಡ

ಇದಕ್ಕೂ ಮುನ್ನ ಕೇಸರಿಲಾಲ್ ಯಾದವ್ ಜೊತೆ “ರೈಟ್” ಸಿನಿಮಾದಲ್ಲಿ ನಟಿಸಿರುವ ಮೇಘಶ್ರೀಗೆ “ಅಪರಾಧಿ” ಎರಡನೇ ಭೋಜ್‍ಪುರಿ ಸಿನಿಮಾ. “ರೈಟ್” ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಚಿತ್ರರಂಗದ ವಾತಾವರಣ, ಚಿತ್ರತಂಡದ ಸಹಕಾರ ಹಾಗೂ ಭೋಜ್ ಪುರಿ ಸಂಸ್ಕೃತಿ ವೇಷ ಭೂಷಣ ತುಂಬಾ ಖುಷಿ ಕೊಟ್ಟಿದೆ. ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ ಮೇಘಶ್ರೀ.

ಕಿರುತೆರೆ, ಹಿರಿತೆರೆ ಎರಡರಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಮೇಘಶ್ರೀ ಮೂಲತಃ ಮಲೆನಾಡಿನವರು. ಕಿರುತೆರೆ ಮೂಲಕ ಪ್ರೇಕ್ಷಕರ ಮನಗೆದ್ದ ನಟಿಗೆ ಸಾಲು ಸಾಲು ಸಿನಿಮಾ ಆಫರ್‍ ಗಳು ಒಲಿದು ಬಂತು. ಕೃಷ್ಣ ತುಳಸಿ, ಕದ್ದುಮುಚ್ಚಿ, ಮಾರ್ಚ್ 22, ದಶರಥ, ರಾಜಾಮಾತಾರ್ಂಡ ಚಿತ್ರದಲ್ಲಿ ನಟಿಸಿರುವ ಮೇಘಶ್ರೀ ಕೈಯಲ್ಲಿ ಹಲವು ಕನ್ನಡ ಸಿನಿಮಾಗಳಿವೆ. ಇದರ ಜೊತೆಗೆ ತಮಿಳು ಚಿತ್ರರಂಗದಲ್ಲೂ ಬ್ಯುಸಿಯಾಗಿದ್ದಾರೆ. ತಮಿಳು ಸಿನಿಮಾವೊಂದರಲ್ಲಿ ಲೀಡ್ ರೋಲ್ ನಲ್ಲಿ ಬಣ್ಣಹಚ್ಚಿದ್ದಾರೆ. ತಮಿಳಿನ ಖ್ಯಾತ ಧಾರಾವಾಹಿಯೊಂದರಲ್ಲೂ ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ನಾನಿನ್ನೂ ಬದುಕುವುದಿಲ್ಲ: ನಟಿ ವಿಜಯಲಕ್ಷ್ಮೀ ಅತಂಕ

Share This Article
Leave a Comment

Leave a Reply

Your email address will not be published. Required fields are marked *