ಮನೆಯನ್ನು ಕೆಡವಿದ್ದಾರೆ ನ್ಯಾಯ ನೀಡಿ- ದೇವರ ಫೋಟೋ ಹಿಡಿದು ಕಣ್ಣೀರಿಟ್ಟ ವೃದ್ಧ

Public TV
1 Min Read

ನೆಲಮಂಗಲ: ನಾನು ವಾಸವಿರುವ ಬಾಡಿಗೆ ಮನೆಯನ್ನು ಕೆಡವಿ ಸಾಮಾಗ್ರಿಗಳನ್ನು ಹೊರಗೆ ಬಿಸಾಡಿದ್ದಾರೆ. ನನಗೆ ನ್ಯಾಯ ನೀಡಿ ಎಂದು ಮನೆಯ ಎದುರು ದೇವರ ಫೋಟೋ ಹಿಡಿದು ವೃದ್ಧ ಕಣ್ಣೀರಿಟ್ಟ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಜಕ್ಕಸಂದ್ರ ಗ್ರಾಮದಲ್ಲಿ ನಡೆದಿದೆ.

ಚಿಕ್ಕ ಕೊಠಡಿಯಲ್ಲಿ ವಾಸವಾಗಿದ್ದ ವೃದ್ಧ ನಾಗಣ್ಣ ಮನೆಯ ಎದುರು ಕುಳಿತು ನ್ಯಾಯಕ್ಕಾಗಿ ಕಣ್ಣೀರಿಡುತಿದ್ದಾರೆ. ನಗರದ ಜಕ್ಕಸಂದ್ರದಲ್ಲಿನ ನಿವೇಶನದ ಜಾಗದಲ್ಲಿ ಸಿಮೆಂಟ್ ಇಟ್ಟಿಗೆಯಿಂದ ನಿರ್ಮಾಣವಾದ ಸಣ್ಣದೊಂದು ಬಾಡಿಗೆ ಮನೆಯಲ್ಲಿ ನಾಗಣ್ಣ ವಾಸವಿದ್ದರು. ನಿವೇಶನದ ಮಾಲೀಕ ಸಿದ್ದರಾಜು ಮನೆ ನಿರ್ಮಾಣ ಮಾಡಿದ್ದು, 2 ತಿಂಗಳ ಹಿಂದೆ 5,000 ಮುಂಗಡ ಹಣ ನೀಡಿ ಬಾಡಿಗೆ ಪಡೆದುಕೊಂಡಿದ್ದರು. ಇದನ್ನೂ ಓದಿ: ಫ್ಲೈಓವರ್ ಮೇಲಿಂದ ಬಿದ್ದು ಅಪಘಾತವಾದ ಸ್ಥಳದಲ್ಲೇ ಮತ್ತೊಂದು ಅಪಘಾತ

ಕೆಲವು ವ್ಯಕ್ತಿಗಳು ನಿವೇಶನ ನನ್ನದು ನನ್ನ ಜಾಗದಲ್ಲಿ ನೀನು ವಾಸವಿರಲು ಸಾಧ್ಯವಿಲ್ಲ ಎಂದು ಮನೆಯನ್ನು ಅರ್ಧದಷ್ಟು ಕೆಡವಿ ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಹೊರಗೆ ಎಸೆದು ಹೋಗಿದ್ದಾರೆ. ಇದರಿಂದ ಮನನೊಂದ ನಾಗಣ್ಣ ಪೊಲೀಸರಿಗೆ ಮಾಹಿತಿ ನೀಡಿದ್ದು, ದೇವರ ಫೋಟೋ ಹಿಡಿದು, ನ್ಯಾಯಕ್ಕಾಗಿ ಬಾಡಿಗೆ ಮನೆಯ ಎದುರು ಪ್ರತಿಭಟನೆ ಮಾಡಿದ್ದಾರೆ. ಇದನ್ನೂ ಓದಿ:  ಎಲೆಕ್ಟ್ರಾನಿಕ್ಸ್ ಸಿಟಿ ಪ್ಲೈ ಓವರ್ ಮೇಲೆ ಭೀಕರ ಅಪಘಾತ

ಕೂಲಿನಾಲಿ ಮಾಡಿ 10 ಸಾವಿರ ಹಣವನ್ನು ಕಪಾಟಿನಲ್ಲಿ ಇಟ್ಟುಕೊಂಡಿದೆ. ಅವರು ನಾನು ಇಲ್ಲದ ಸಮಯದಲ್ಲಿ ಮನೆಯನ್ನು ಕೆಡವಿ ಮನೆ ಸಾಮಾಗ್ರಿಯನ್ನು ಹೊರಗೆ ಹಾಕಿದ್ದು, ಹಣವೂ ಇಲ್ಲದಂತಾಗಿದೆ. ದುಡಿದು ಬದುಕುವ ನಮ್ಮ ಮೇಲೆ ಆ ವ್ಯಕ್ತಿಗಳು ಮನೆ ಕೆಡವಿ ಸಮಸ್ಯೆ ಮಾಡಿದ್ದು, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ನಾಗಣ್ಣ ಆರೋಪಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ- ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ

ಪೊಲೀಸರು ಸ್ಥಳಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *