ಆನೆಕಾಡಿನಲ್ಲಿ ಸರಣಿ ಅಪಘಾತ – ಪ್ರಾಣಾಪಾಯದಿಂದ ಕಾರು ಚಾಲಕ ಪಾರು

Public TV
1 Min Read

ಮಡಿಕೇರಿ: ಇಂದು ಮಧ್ಯಾಹ್ನ 2.30ರ ಸಮಯದಲ್ಲಿ ಆನೆಕಾಡು ಬಳಿ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರು ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಮಡಿಕೇರಿಯಿಂದ ಕುಶಾಲನಗರದತ್ತ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಆನೆಕಾಡಿನಲ್ಲಿ ಪ್ರಯಾಣಿಕರನ್ನು ಇಳಿಸಲೆಂದು ನಿಂತಿದೆ. ಇದೇ ಸಮಯದಲ್ಲಿ ಕುಶಾಲನಗರದತ್ತ ತೆರಳುತ್ತಿದ್ದ ಸುಂಟಿಕೊಪ್ಪದ ಅದ್ದೂಸ್ ಅವರ ಕಾರು ಬಸ್ಸಿನ ಹಿಂಬದಿಯಲ್ಲಿ ಬರುತ್ತಿತ್ತು. ಇತ್ತ ಇದೇ ವೇಳೆ ವಿರುದ್ಧ ದಿಕ್ಕಿನಲ್ಲಿ ವಾಹನವೊಂದು ಬರುತ್ತಿದ್ದರಿಂದ ನಿಲ್ಲಿಸಿದ್ದ ಬಸ್ ಅನ್ನು ಓವರ್ ಟೇಕ್ ಮಾಡದೇ ಕಾರನ್ನು ಅದರ ಹಿಂಬದಿಯಲ್ಲಿ ನಿಲ್ಲಿಸಲು ಚಾಲಕ ಮುಂದಾಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ವೇಗವಾಗಿ ಧಾವಿಸಿ ಬಂದ ಗರಗಂದೂರಿನ ಟವೇರಾ, ಅದ್ದುಸ್ ರವರ ಕಾರಿನ ಹಿಂಬದಿಗೆ ಅಪ್ಪಳಿಸಿದೆ. ಇದನ್ನೂ ಓದಿ:  ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಗಣ್ಯರ ಸಂತಾಪ

ಕಾರು ಮುಂದಕ್ಕೆ ಚಲಿಸಿದ್ದರಿಂದ ಬಸ್ಸಿನ ಹಿಂಬದಿಗೆ ಗುದ್ದಿದೆ. ಅದೃಷ್ಟವಶಾತ್ ಕಾರು ಚಾಲಕ ಅದ್ದೂಸ್ ಹಾಗೂ ಅದರಲ್ಲಿದ್ದ ಇನ್ನಿಬ್ಬರು ಸಣ್ಣಪುಟ್ಟ ಗಾಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *