ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಕಳ್ಳ ಅಂದರ್

Public TV
1 Min Read

ಗದಗ: ದೇವಸ್ಥಾನಗಳಿಗೆ ಕನ್ನ ಹಾಕಿ ದೇವರುಗಳ ಮೂರ್ತಿ ಹಾಗೂ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮನನ್ನು ಜಿಲ್ಲೆಯ ರೋಣ ಪೊಲೀಸರು ಬಂಧಿಸಿದ್ದಾರೆ.

ಕಳೆದ ಆಗಸ್ಟ್ 5 ಮತ್ತು 6 ರಂದು ಜಿಲ್ಲೆ ರೋಣ ಪಟ್ಟಣದ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನ ಹಾಗೂ ಬೆಳವಣಿಕಿ ಗ್ರಾಮದೇವತೆ ಕನ್ನಿಕಾ ಪರಮೇಶ್ವರಿ ದೇವಸ್ಥಾನಗಳಲ್ಲಿ ಸರಣಿ ಕಳ್ಳತನವಾಗಿತ್ತು. ಈ ಎರಡೂ ಕಳ್ಳತನವನ್ನು ಆರೋಪಿ ಸುಭಾಷ್ ಹರಣಶಿಕಾರಿ ಮಾಡಿದ್ದ ಎನ್ನಲಾಗುತ್ತಿದೆ. ಇದನ್ನೂ ಓದಿ: ಪೊಲೀಸ್ ಠಾಣೆ ಮುಂದೆಯೇ ಯುವಕನ ಮೇಲೆ ಹಲ್ಲೆ – 6 ಜನರ ಬಂಧನ

ಖದೀಮ ಸುಭಾಷ್ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ನಿವಾಸಿ ಎನ್ನಲಾಗುತ್ತಿದೆ. ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಅದೂ ದೊಡ್ಡ ದೇವಸ್ಥಾನಗಳಿಗೆ ಕನ್ನ ಹಾಕುತ್ತಿದ್ದ ಎನ್ನಲಾಗುತ್ತಿದೆ. ಹೀಗಾಗಿಯೇ ರೋಣ ವೀರಭದ್ರೇಶ್ವರನ ಬೆಳ್ಳಿ ಕೀರಿಟ, ಮೂರ್ತಿ, 4 ಅಡಿ 2 ಬೆತ್ತ ಹಾಗೂ ಕನ್ನಿಕಾ ಪರಮೇಶ್ವರಿಯ ಚಿನ್ನದ ಆಭರಣಗಳು, ಪೂಜೆಯ ಹಿತ್ತಾಳೆ, ತಾಮ್ರದ ಸಾಮಗ್ರಿಗಳು ಸೇರಿದಂತೆ ಸುಮಾರು 2 ಲಕ್ಷ ಮೌಲ್ಯದ ವಸ್ತುಗಳನ್ನು ಹೊತ್ತೊಯ್ದಿದ್ದ.

ಈ ಬಗ್ಗೆ ರೋಣ ಸಿ.ಪಿ.ಐ ನೇತೃತ್ವದ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ಸದ್ಯ ಆರೋಪಿಯನ್ನು ರೋಣ ಪೊಲೀಸರು ಬಂಧಿಸಿದ್ದಾರೆ. ಆದರೆ ಇವನ ಹಿಂದೆ ಇನ್ನಷ್ಟು ಜನ ಇರುವ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತೀಶ್.ಎನ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *