ಸೋಶಿಯಲ್ ಮೀಡಿಯಾಕ್ಕೆ ಶಿಲ್ಪಾ ಶೆಟ್ಟಿ ಕಮ್ ಬ್ಯಾಕ್-ಟೀಕಾಕಾರರಿಗೆ ಖಡಕ್ ಉತ್ತರ

Public TV
2 Min Read

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣಕ್ಕೆ ಕಮ್‍ಬ್ಯಾಕ್ ಮಾಡಿದ್ದು, ಮಾತ್ರವಲ್ಲದೆ ವಿರೋಧಿಗಳ ಬಾಯ್ಮುಚ್ಚಿಸುವ ಪೋಸ್ಟ್ ಒಂದನ್ನು ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ ಫೋಟೋ ಶೂಟ್ ಮಾಡಿಸಿಕೊಂಡ ಚಿತ್ರಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಸೀರೆಯುಟ್ಟು ಮಿಂಚುತ್ತಿದ್ದಾರೆ. ಇದಕ್ಕೆ ಸುಂದರ ಕ್ಯಾಪ್ಶನ್ ನೀಡಿರುವ ಶಿಲ್ಪಾ, ಅಡೆತಡೆಗಳನ್ನು ಎದುರಿಸಿ ಎತ್ತರಕ್ಕೇರಲು ನಿರ್ಧರಿಸುವ ಮಹಿಳೆಗಿಂತ ಶಕ್ತಿಶಾಲಿಯಾದದ್ದು ಮತ್ತೊಂದಿಲ್ಲ ಎಂದು ಬರೆದುಕೊಂಡಿದ್ದಾರೆ. ಪತಿಯ ಬಂಧನದ ಘಟನೆಯಿಂದ ಹೊರಬರಲು ನಿರ್ಧರಿಸಿದ ಅವರು ರಿಯಾಲಿಟಿ ಶೋ ಜಡ್ಜ್ ಆಗಿ ಮುಂದುವರೆಯಲು ಒಪ್ಪಿಕೊಂಡು ಮತ್ತೆ ತೆರೆ ಮೇಲೆ ಬಂದಿದ್ದಾರೆ.

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನದ ನಂತರ ಮೊದಲ ಬಾರಿಗೆ ತಮ್ಮ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಶ್ಲೀಲ ಚಿತ್ರ ತಯಾರಿಕೆ ಹಾಗೂ ಹಂಚಿಕೆಯ ಆರೋಪದ ಮೇಲೆ ರಾಜ್ ಕುಂದ್ರಾರನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪತಿಯ ಬಂಧನದಿಂದ ಆಘಾತಗೊಂಡಿದ್ದ ಶಿಲ್ಪಾ ಶೆಟ್ಟಿ, ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದರು. ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶುಭಾಶಯಗಳನ್ನಷ್ಟೇ ಹಂಚಿಕೊಂಡಿದ್ದರು. ಪ್ರಕರಣಕ್ಕೂ ಮೊದಲು ಜಾಲತಾಣಗಳಲ್ಲಿ ಸಾಕಷ್ಟು ಆಕ್ಟೀವ್ ಇರುತ್ತಿದ್ದ ಅವರು, ಇದ್ದಕ್ಕಿದ್ದಂತೆ ಮೌನವಾಗಿದ್ದರು. ಈಗ ಶಿಲ್ಪಾ ಕಮ್‍ಬ್ಯಾಕ್ ಮಾಡಿದ್ದು, ಆತ್ಮವಿಶ್ವಾಸದ ನುಡಿಗಳ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಮೊದಲೇ ಕಿಚ್ಚನಿಗೆ ಸರ್ಪ್ರೈಸ್ ನೀಡಿದ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ

ಮೂರ್ನಾಲ್ಕು ವಾರಗಳ ಕಾಲ ಗ್ಯಾಪ್ ತೆಗೆದುಕೊಂಡಿದ್ದ ಶಿಲ್ಪಾ ಶೆಟ್ಟಿ ಇದೀಗ ತಾವು ಜಡ್ಜ್ ಆಗಿದ್ದ ಕಾರ್ಯಕ್ರಮವೊಂದಕ್ಕೆ ವಾಪಸ್ ಬಂದಿದ್ದಾರೆ. ಮತ್ತೆ ತೀರ್ಪುಗಾರರ ಕುರ್ಚಿಯಲ್ಲಿ ಶಿಲ್ಪಾ ಶೆಟ್ಟಿ ಆಸೀನರಾಗಿದ್ದಾರೆ. ಸೆಟ್‍ಗೆ ಮರಳುತ್ತಿದ್ದಂತೆಯೇ ತಮಗೆ ಸಿಕ್ಕ ಸ್ವಾಗತ ಕಂಡು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ತೂಕ ಕಳೆದುಕೊಂಡ ರಣಧೀರ ನಟಿ

ಕಾರ್ಯಕ್ರಮಕ್ಕೆ ಶಿಲ್ಪಾ ಶೆಟ್ಟಿ ಬಾರದೇ ಇದ್ದಾಗ ಸೆಟ್‍ನಲ್ಲಿ ನಾವು ಶಿಲ್ಪಾ ಶೆಟ್ಟಿಯನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೀವಿ. ನಮ್ಮೆಲ್ಲರ ನಡುವೆ ಉತ್ತಮ ಒಡನಾಟ ಇದೆ. ಸೆಟ್‍ನಲ್ಲಿ ನಾವೆಲ್ಲರೂ ಒಂದು ಕುಟುಂಬ ಇದ್ದ ಹಾಗೆ. ಯಾರೇ ಬರಲಿಲ್ಲ ಅಂದರೂ ಕಷ್ಟವಾಗುತ್ತದೆ. ಶಿಲ್ಪಾ ಶೆಟ್ಟಿ ನಮಗೆಲ್ಲ ಆತ್ಮೀಯರು ಎಂದು ಈ ಹಿಂದೆ ಅನುರಾಗ್ ಬಸು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *