ಇನ್ಮುಂದೆ ಆಗಸ್ಟ್ 14ರಂದು ವಿಭಜನೆಯ ಕರಾಳ ನೆನಪಿನ ದಿನವನ್ನಾಗಿ ಆಚರಣೆ: ಮೋದಿ

Public TV
1 Min Read

ನವದೆಹಲಿ: ಆಗಸ್ಟ್ 14 ರಂದು ದೇಶ ವಿಭಜನೆಯ ಕರಾಳ ನೆನಪಿನ ದಿನವ( (Partition Horrors Remembrance Day)ನ್ನಾಗಿ ಆಚರಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?

ಅಂದಿನ ವಿಭಜನೆಯ ನೋವನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ತಿಳಿಗೇಡಿಗಳ ದ್ವೇಷ, ಹಿಂಸಾಚಾರದ ಪರಿಣಾಮವಾಗಿ ನಮ್ಮ ಲಕ್ಷಾಂತರ ಸಹೋದರ, ಸಹೋದರಿಯರು ಸ್ಥಳಾಂತರಗೊಳ್ಳುವಂತಾಯಿತ್ತು. ಈ ಸಂದರ್ಭದಲ್ಲಿ ಅನೇಕರು ಜೀವಗಳು ಹೋದವು. ಅಂದಿನ ಹೋರಾಟದ ಕಹಿ ನೆನೆಪು ಮತ್ತು ನಮ್ಮವರ ತ್ಯಾಗಕ್ಕೆ ಗೌರವ ಕೊಡುವ ಹಿನ್ನೆಲೆಯಲ್ಲಿ ಇನ್ಮುಂದೆ ಪ್ರತಿವರ್ಷವೂ ಆಗಸ್ಟ್ 14ರಂದು ದೇಶ ವಿಭಜನೆಯ ಕರಾಳ ನೆನೆಪಿನ ದಿನವನ್ನಾಗಿ ಆಚರಿಸಲಾಗುವು ಎಂದಿದ್ದಾರೆ.

ಸಮಾಜ, ದೇಶಗಳ ವಿಭಜನೆಯಿಂದ, ಸಾಮರಸ್ಯವಿಲ್ಲದಿದ್ದರೆ ಆಗುವ ಅಪಾಯಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಒಗ್ಗಟ್ಟು, ಸಾಮಾಜಿಕ ಸಾಮರಸ್ಯ, ಮಾನವ ಸಬಲೀಕರಣದ ಬಗ್ಗೆ ನಮ್ಮಲ್ಲಿ ಅರಿವು ಮೂಡಬೇಕು. ಇವೆಲ್ಲಕ್ಕೆ ಈ ದೇಶ ವಿಭಜನೆಯ ದುರಂತ ನೆನಪಿನ ದಿನ ಸಾಕ್ಷಿಯಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *