ಟೊಮೆಟೊ ರಸಂ ಮಾಡಿ ಒಂದು ತುತ್ತು ಜಾಸ್ತಿ ಊಟ ಮಾಡಿ

Public TV
2 Min Read

ಬೆಳಗ್ಗೆ, ಮದ್ಯಾಹ್ನ, ಸಂಜೆ ಹೊತ್ತಿಗೆ ಸರಿಯಾಗಿ ಹೊಟ್ಟೆ ತುಂಬುವಷ್ಟು ಊಟ ಮಾಡಿದ್ರೆ ದಿನವೀಡಿ ಚೆನ್ನಾಗಿ ಕೆಲಸ ಮಾಡಿಕೊಂಡು ಇರಬಹುದು. ಊಟದಲ್ಲಿ ತೃಪ್ತಿ ಇಲ್ಲವೆಂದರೆ ಮನಸ್ಸಿಗೆ ನೆಮ್ಮದಿ ಎನ್ನಿಸುವುದಿಲ್ಲ. ನಾವು ಸೇವಿಸುವ ಆಹಾರ ರುಚಿಯಾಗಿ, ಆರೋಗ್ಯಕರವಾಗಿ ಇರಬೇಕು ಎಂದು ನಾವೆಲ್ಲ ಅಂದುಕೊಳ್ಳುತ್ತೇವೆ. ಆದರೆ ಎಷ್ಟೋ ಜನರು ಬಿಡುವಿಲ್ಲದ ಜೀವನದಲ್ಲಿ ಹೋಟೆಲ್‍ಗಳಲ್ಲಿ ಹೆಚ್ಚಾಗಿ ಊಟವನ್ನು ಮಾಡುತ್ತಾರೆ. ಯಾಕೆಂದರೆ ಮನೆಯಲ್ಲಿ ಆಹಾರವನ್ನು ತಯಾರಿಸಿಕೊಳ್ಳುವಷ್ಟು ಸಮಯ ಇರುವುದಿಲ್ಲ.

ಸಮಯಕ್ಕೆ ಸರಿಯಾಗಿ ಆಫೀಸ್‍ಗೆ ಹೋಗಬೇಕು. ಟ್ರಾಫಿಕ್ ದಾಟಿ ಬಸ್ಸ್‌ನಲ್ಲಿ ಹೋಗುವುದೇ ತಡವಾಗುತ್ತದೆ. ಹೋಟೆಲ್‍ನಲ್ಲಿ ಆಹಾರ ಸೇವಿಸಿದರೆ ಆಯಿತ್ತು ಎಂದು ನಾವು ಯೋಚಿಸುತ್ತೇವೆ. ನಿಮ್ಮ ಆರೋಗ್ಯ ಕಾಪಾಡುವುದು ಮತ್ತು ಹಣವನ್ನು ಸ್ವಲ್ಪಮಟ್ಟಿ ಉಳಿಸಲು ನಾವು ಇಂದು ಮನೆಯಲ್ಲಿ ಸುಲಭವಾಗಿ ಮತ್ತು ಪಟಾ ಪಟ್ ಎಂದು ಮಾಡುವ ಟೊಮೆಟೊ ರಸಂ ಮಾಡುವ ವಿಧಾನವನ್ನು ಹೇಳುತ್ತಿದ್ದೇವೆ ಇದನ್ನೂ ಓದಿ:  ದೆಹಲಿಯಲ್ಲಿ ದಿ.ಸುರೇಶ್ ಅಂಗಡಿ ಮೂರ್ತಿ ಪ್ರತಿಷ್ಠಾಪನೆ – ಕುಟುಂಬಸ್ಥರಿಂದ ನಮನ

ಬೇಕಾಗುವ ಸಾಮಗ್ರಿಗಳು:
* ಟೊಮೆಟೊ – 1
* ತೆಂಗಿನತುರಿ (ಬೇಕಿದ್ದರೆ) – 1 ಟೀ ಸ್ಪೂನ್
* ಹೆಸರುಬೇಳೆ – ಅರ್ಧ ಕಪ್
* ರಸಂ ಪುಡಿ ಅಥವಾ ಸಾರಿನ ಪುಡಿ – ಒಂದೂವರೆ ಚಮಚ (ಖಾರಕ್ಕೆ ತಕ್ಕಂತೆ)
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಕರಿಬೇವಿನ ಎಲೆಗಳು – ಸ್ವಲ್ಪ
* ಹುಣಸೆ ಹಣ್ಣಿನ ರಸ – ಸ್ವಲ್ಪ
* ಸಕ್ಕರೆ ಅಥವಾ ಬೆಲ್ಲ – ಅರ್ಧ ಟೀ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಒಣಮೆಣಸು – 1
* ಎಣ್ಣೆ – ಅರ್ಧ ಸ್ಪೂನ್
* ಜೀರಿಗೆ – ಅರ್ಧ ಟೀ ಸ್ಪೂನ್
* ಸಾಸಿವೆ – ಅರ್ಧ ಟೀ ಸ್ಪೂನ್,
* ಅರಿಶಿನ – ಚಿಟಿಕೆ
* ಇಂಗು – ಸ್ವಲ್ಪ

ಮಾಡುವ ವಿಧಾನ:
* ಟೊಮೇಟೊವನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ.

* ಹೆಸರುಬೇಳೆ, ನೀರು, ಚಿಟಿಕೆ ಅರಿಶಿನ, ಒಂದೆರಡು ಹನಿ ಎಣ್ಣೆ ಹಾಕಿ ಕುಕ್ಕರ್‍ನಲ್ಲಿ ಒಂದು ವಿಷಲ್ ಆಗುವವರೆಗೆ ಬೇಯಿಸಿಕೊಳ್ಳಿ.
* ಹೆಸರುಬೇಳೆ ತಣ್ಣಗಾದನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.

* ಬಾಣಲಿಯಲ್ಲಿ ಒಗ್ಗರಣೆಗಿಟ್ಟು, ಎಣ್ಣೆ ಕಾದನಂತರ ಒಣಮೆಣಸು, ಸಾಸಿವೆ, ಜೀರಿಗೆ, ಇಂಗು, ಅರಿಶಿನ ಎಲ್ಲವನ್ನೂ ಹಾಕಿ, ಚಟಗುಟ್ಟಿದ ನಂತರ ಟೊಮೇಟೊ ಸೇರಿಸಿ ಸ್ವಲ್ಪ ಬೇಯಿಸಿಕೊಳ್ಳಿ.


* ಇದಕ್ಕೆ ಸಾಂಬಾರ್ ಪುಡಿ ಅಥವಾ ರಸಂ ಪುಡಿ ಸೇರಿಸಿ ಚೆನ್ನಾಗಿ ಬೇಯಿಸಿ ನಂತರ ರುಬ್ಬಿದ ಮಿಶ್ರಣವನ್ನು ಸೇರಿಸಿ. ಇದಕ್ಕೆ ಹುಣಸೆ ರಸ, ಉಪ್ಪು, ಸಕ್ಕರೆ ಹಾಕಿ, ಮಿಶ್ರಣ ತೆಳ್ಳಗಾಗುವಷ್ಟು ನೀರು, ಕೊತ್ತಂಬರಿ ಸೊಪ್ಪು, ಕರಿಬೇವಿನ ಎಲೆಗಳನ್ನು ಸೇರಿಸಿ, 5 ನಿಮಿಷ ಕುದಿಸಿ ಇಳಿಸಿ. ಕುದಿಸುವಾಗ ಸ್ವಲ್ಪ ಪುಡಿ ಇಂಗನ್ನು ಸೇರಿಸಿದರೆ ರುಚಿಯಾದ ಟೊಮೆಟೊ ರಸಂ ಮದ್ಯಾಹ್ನದ ಊಟಕ್ಕೆ ಸವಿಯಲು ಸಿದ್ಧವಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *