ಹೊಸ ಬಾಂಬ್ ಸಿಡಿಸಿದ ಯತ್ನಾಳ್

Public TV
1 Min Read

ವಿಜಯಪುರ: ಈ ಬಾರಿ ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ನೀಡಲೇಬೇಕು. ಈಗಾಗಲೇ ಎ ಎಸ್ ಪಾಟೀಲ್ ನಡಹಳ್ಳಿ ನಿಗಮ ಮಂಡಳಿ ಅಧ್ಯಕ್ಷರಿದ್ದಾರೆ. ಅವರು ಈಗ ಕ್ಲೇಮ್ ಆಗುವುದಿಲ್ಲ. ಈಗ ಆಗಬೇಕಿರುವುದು ಶಾಸಕ ಸೋಮನಗೌಡ ಪಾಟೀಲ್ ಅವರದ್ದು, ನನ್ನದು ಎಂದು ವಿಜಯಪುರದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಗೌರವಿತವಾಗಿ ಜಿಲ್ಲೆಗೆ ಸಚಿವ ಸ್ಥಾನ ಕೊಡದೆ ಇದ್ದರೆ, ಜಿಲ್ಲೆಯನ್ನ ಕಡೆಗಣಿಸಿದರೆ ಈ ಸಂಪುಟ ರಚನೆ ಮುಗಿದ ನಂತರ ಬಹಳ ದೊಡ್ಡ ಶಾಕ್ ವಿಜಯಪುರ ಜಿಲ್ಲೆಯಿಂದ ಕೊಡಬೇಕಾಗತ್ತೆ ಎಂದು ಎಚ್ವರಿಕೆ ನೀಡಿದರು. ಅಲ್ಲದೆ ಒಂದೆ ವೇಳೆ ಈ ಸಿಎಂ ಯಡಿಯೂರಪ್ಪ ಅವರ ನೆರಳಿನಂತೆ ಮುಂದುವರಿದ್ರೆ. ಕರ್ನಾಟಕದಲ್ಲಿ ಆ ನೆರಳನ್ನು ನಾಶ ಮಾಡುವ ಕೆಲಸ ನಾನು ಮಾಡುತ್ತೇನೆ ಎಂದರು.

ಜಗದೀಶ್ ಶೆಟ್ಟರ್ ಅಸಮಾಧಾನ ವಿಚಾರವಾಗಿ ಮಾತನಾಡಿ, ಈ ಸ್ವಾಭಿಮಾನ, ನೈತಿಕತೆ ಅಂದರೆ ಏನು ನನಗೆ ಗೊತ್ತಿಲ್ಲ. ಸ್ವಾಭಿಮಾನ, ನೈತಿಕತೆ, ಪ್ರಾಮಾಣಿಕತೆ ರಾಜಕಾರಣದಲ್ಲಿ ಉಳಿದಿದೆಯಾ. ನೈತಿಕತೆ, ಭ್ರಷ್ಟಾಚಾರ, ಸ್ವಾಭಿಮಾನವನ್ನ ಡಿಕ್ಷನರಿಯಲ್ಲಿ ಹುಡಕಬೇಕಾಯ್ತು ಎಂದು ಶೆಟ್ಟರ್ ಅಸಮಾಧಾನಕ್ಕೆ ವ್ಯಂಗ್ಯವಾಡಿದರು.

ಐಪಿಎಸ್ ಅಧಿಕಾರಿ 27, 28 ವಯ್ಯಸ್ಸಿನವರು ಇರುತ್ತಾರೆ. ಪಿಎಸ್‍ಐ 50 ವರ್ಷದವರು ಇರುತ್ತಾರೆ. ಹುದ್ದೆಗೆ ಇರೋದು ಮಹತ್ವ, ವಯಸ್ಸಿಗಲ್ಲ. ಇಂತಹ ಕಾರಣಗಳನ್ನ ಹೇಳಬಾರದು. ಮುಖ್ಯಮಂತ್ರಿ, ಮುಖ್ಯಮಂತ್ರಿ ನೇ. 25 ವರ್ಷದವನಾದ್ರು ಮುಖ್ಯಮಂತ್ರಿನೇ, 105 ವರ್ಷ ಅದವನು ಮುಖ್ಯಮಂತ್ರಿನೇ, 25 ವರ್ಷದವರು ಮುಖ್ಯಮಂತ್ರಿ ಆಗಿದ್ದಾರೆ ಅನ್ನೋದಕ್ಕೆ 50 ವರ್ಷದ ಮಂತ್ರಿ ಆಗೋದಿಲ್ಲ ಅನ್ನೋದು ಎಲ್ಲೂ ಇಲ್ಲ ಎಂದು ಶೆಟ್ಟರ್ ಕಾಲೆಳದರು.

ಒಂದು ದೊಡ್ಡ ಹುದ್ದೆಗೆ ಹೋದ ಮೇಲೆ ಕೆಳಗಿನ ಹುದ್ದೆಗೆ ಬರಬಾರ್ದು. ಪ್ರಿನ್ಸಿಪಾಲ್ ಸೆಕ್ರೆಟರಿ ಆಫ್ ಕರ್ನಾಟಕ ಸರ್ಕಾರಿ ಆಗಿ, ವಿಜಯಪುರದ ತಹಶೀಲ್ದಾರ್ ಆಗ್ತೇನೆ ಎಂದ್ರೆ ಹೇಗೆ ವ್ಯಂಗ್ಯವಾಡಿದರು.

Share This Article
Leave a Comment

Leave a Reply

Your email address will not be published. Required fields are marked *