-ನಾಯಕತ್ವ ಬದಲಾವಣೆ ಕಾಂಗ್ರೆಸ್‍ಗೆ ಹೇಳಿದವರು ಯಾರು?
ಬೆಂಗಳೂರು: ನಾಯಕತ್ವ ಬದಲಾವಣೆ ಉಸಾಬರಿ ಕಾಂಗ್ರೆಸ್‍ಗೆ ಯಾಕೆ? ಅವರ ಪಕ್ಷದ ಸಮಸ್ಯೆ ಮೊದಲು ಬಗೆಹರಿಸಿಕೊಳ್ಳಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವೀರೋಧ ಪಕ್ಷದ ವಿರುದ್ಧವಾಗಿ ವಾಗ್ಧಾಳಿ ನಡೆಸಿದ್ದಾರೆ.
ಪಬ್ಲಿಕ್ ಟವಿ ಜೊತೆಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಚರ್ಚೆ ನಮ್ಮಲ್ಲಿ ಆಗಿರುವುದು ನಿಜವಾಗಿದೆ. ನಮ್ಮ ಪಕ್ಷದ ಕೆಲ ನಾಯಕರಿಗೆ ವರಿಷ್ಠರಿಗೆ ಬದಲಾವಣೆಗೆ ಕೇಳಿರುವುದು ನಿಜ. ಆದರೆ ಈ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ನಾಯಕತ್ವ ಬದಲಾವಣೆ ಕಾಂಗ್ರೆಸ್‍ಗೆ ಹೇಳಿದವರು ಯಾರು? ನಮ್ಮ ಆಂತರಿಕ ವಿಚಾರ, ನಾವು ನೋಡಿಕೊಳ್ಳುತ್ತೆವೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಜುಲೈ 26ಕ್ಕೆ ಬಿಎಸ್‍ವೈ ಮಹಾ ಭಾಷಣ? – ಸಿಎಂ ಬೆಂಬಲಿಗರು ಸೈಲೆಂಟ್
ರಾಜ್ಯದಲ್ಲಿ ಸಿಎಂ ಬದಲಾವಣೆಯ ಸುದ್ದಿ ಹಲವಾರು ದಿನಗಳಿಂದ ಹರಿದಾಡುತ್ತಿತ್ತು. ಈ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಬಿಜೆಪಿಯವರ ಆಡಿಯೋ ವಿಚಾರ ಮಾತನಾಡಲು ಹೋದರೆ ನಮ್ಮ ಬಾಯಿ ಹೊಲಸಾಗುತ್ತದೆ. ಆಡಿಯೋಗೂ ನಮಗೂ ಸಂಬಂಧ ಇಲ್ಲ. ಅದು ಅವರ ಆಂತರಿಕ ವಿಚಾರ. ಸಿಎಂ ಬದಲಾವಣೆ ಅವರ ಆಂತರಿಕ ವಿಚಾರ ಏನೋ ಅವರು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದರು.
ಸಿಎಂ ಬದಲಾವಣೆ ನನಗೆ ಗೊತ್ತಿಲ್ಲ. ಸಿಎಂ ಬದಲಾವಣೆ ಮಾಡ್ತಾರೆ ಅಂತ ಮೊದಲು ಹೇಳಿದ್ದೆ ನಾನು. ಅವಾಗ ನೀವ್ಯಾರು ನಂಬಲಿಲ್ಲ. ಈಗ ಅದು ಸನ್ನಿಹಿತವಾಗಿದೆ. ಇದು ಭ್ರಷ್ಟ ಸರ್ಕಾರ. ಯಡಿಯೂರಪ್ಪ, ಯಡಿಯೂರಪ್ಪನ ಮಕ್ಕಳು ಭ್ರಷ್ಟರಾಗಿದ್ದಾರೆ. ಭ್ರಷ್ಟ ಸರ್ಕಾರ ತೊಲಗಿದರೆ ಒಳ್ಳೆಯದು. ಯಡಿಯೂರಪ್ಪ ಹೋದರೆ ಕಾಂಗ್ರೆಸ್ಸಿಗೆ ಪ್ಲಸ್ ಮೈನಸ್ ಇಲ್ಲಾ. ಒಬ್ಬ ಕರಪ್ಟ್ ಸಿಎಂ ಹೋದ ಹಾಗಾಗುತ್ತೆ. ಕಾಂಗ್ರೆಸ್ ಚುನಾವಣೆ ಎದುರಿಸಲು ಸಿದ್ಧ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯವರ ಆಡಿಯೋ ಬಗ್ಗೆ ಮಾತನಾಡಿದರೆ ನಮ್ಮ ಬಾಯಿ ಹೊಲಸಾಗುತ್ತೆ: ಡಿಕೆಶಿ
ನಡೆದಿದ್ದೇನು?
ಆಡಿಯೋದಲ್ಲಿ, ಯಾರಿಗೂ ಹೇಳಬೇಡ ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರ ಟೀಮ್‍ನ್ನು ತೆಗೆಯುತ್ತೇವೆ. ಹೊಸ ತಂಡವನ್ನು ಕಟ್ಟುತ್ತೇವೆ. ಈಗ ಸದ್ಯಕ್ಕೆ ಯಾರಿಗೂ ಹೇಳಬೇಡ. ದೆಹಲಿಯಿಂದನೇ ಮಾಡುತ್ತಾರೆ. ಏನೂ ಸಮಸ್ಯೆ ಇಲ್ಲ, ಭಯಪಡಬೇಡ, ನಾವಿದ್ದೇವೆ. ಯಾರೇ ಆದ್ರೂ ಎಲ್ಲ ನಮ್ಮ ಕೈಯಲ್ಲೇ ಇರುತ್ತೆ. ಮೂರು ಹೆಸರು ಇದೆ, ಇದರಲ್ಲಿ ಯಾರಾದರೂ ಆಗುವ ಚಾನ್ಸ್ ಇದೆ ಎಂದು ಹೇಳಲಾಗಿದೆ. ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ ಎನ್ನಲಾದ ಆಡಿಯೋ ಇದು ಎಂದು ವೈರಲ್ ಆಗುತ್ತಿದ್ದು, ಆದರೆ ಇದು ನಕಲಿ ಆಡಿಯೋ ಎಂದು ಕಟೀಲ್ ಸ್ಪಷ್ಟಪಡಿಸಿದ್ದರು. ಅಲ್ಲದೆ ಈ ಬಗ್ಗೆ ತನಿಖೆಗೆ ಕೂಡ ಆಗ್ರಹಿಸಿದ್ದರು.