ಹಾಲ್ ಟಿಕೆಟ್‍ಗಾಗಿ ಶಾಲೆಯ ಮುಂದೆ ಧರಣಿ ಕುಳಿತ SSLC ವಿದ್ಯಾರ್ಥಿ

Public TV
2 Min Read

ಬಾಗಲಕೋಟೆ: ಎಸ್‍ಎಸ್‍ಎಲ್‍ಸಿ ಹಾಲ್ ಟಿಕೆಟ್‍ಗಾಗಿ ವಿದ್ಯಾರ್ಥಿ ಹಾಗೂ ಕುಟುಂಬಸ್ಥರು ಶಾಲೆಯ ಆವರಣದಲ್ಲಿಯೇ ಧರಣಿ ಕುಳಿತಿದ್ದಾರೆ. ಈ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.

ಮೂಸಾ ಅಕ್ರೂಟ ಹಾಗೂ ಮೋಸಿನ ಮೋಮಿನ ಎಂಬ ಇಬ್ಬರು ವಿದ್ಯಾರ್ಥಿಗಳು ಹಾಲ್ ಟಿಕೆಟ್‍ಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳು ತಮ್ಮ ಕುಟುಂಬಸ್ಥರೊಂದಿಗೆ ಹಾಲ್ ಟಿಕೆಟ್‍ಗಾಗಿ ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಿಲ್ಲ. ಆದರೆ ಈ ವಿದ್ಯಾರ್ಥಿಗಳು ಫೋಟೋ ಕೊಟ್ಟಿಲ್ಲ, ಈ ಬಗ್ಗೆ ಪಾಲಕರಿಗೆ ಕೊನೆಗಳಿಗೆವರೆಗೂ ಹೇಳಿದರೂ ಹಾಲ್ ಟಿಕೆಟ್ ತಂದು ಕೊಟ್ಟಿಲ್ಲ ಅಂತ ಶಾಲೆ ಮುಖ್ಯಸ್ಥರು ಹೇಳುತ್ತಿದ್ದಾರೆ. ಇದನ್ನೂ ಓದಿ: ಜುಲೈ 20ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ – ಪಿಯುಸಿ ಬೋರ್ಡ್

ಆ ಮಕ್ಕಳ ಕುಟುಂಬಸ್ಥರಿಗೆ ಪರೀಕ್ಷೆ ಬಗ್ಗೆ ಆಸಕ್ತಿ ಇರಲಿಕ್ಕಿಲ್ಲ ಅಂತ ನಾವು ಸುಮ್ಮನಾದೇವು. ಅಲ್ಲದೇ ಉಳಿದ ಎಲ್ಲ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಬಂದಿವೆ. ಇದರಲ್ಲಿ ನಮ್ಮ ತಪ್ಪೇನು ಇಲ್ಲ ಎಂದು ಶಾಲಾ ಮುಖ್ಯಶಿಕ್ಷಕ ಡೆಂಗ್ರೆ ಹೇಳಿದ್ದಾರೆ. ಇದನ್ನೂ ಓದಿ: ನಾನು ದಲಿತ ಅಲ್ಲ ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು: ಗಂಗಾಧರ್

ಇತ್ತ ಹೆಡ್ ಮಾಸ್ಟರ್ ಹೇಳಿಕೆ ಅಲ್ಲಗಳೆಯುವ ವಿದ್ಯಾರ್ಥಿಗಳ ಪಾಲಕರು, ಎಲ್ಲವನ್ನು ಕೊಟ್ಟಿದ್ದೇವೆ, ಶಾಲೆಯ ಸಿಬ್ಬಂದಿ ತಪ್ಪಿನಿಂದ ಹಾಲ್ ಟಿಕೆಟ್ ಬಂದಿಲ್ಲ. ಇದಕ್ಕೆ ಶಾಲೆಯ ಮುಖ್ಯಸ್ಥರೇ ಹೊಣೆ. ನಮ್ಮ ಮಕ್ಕಳಿಗೆ ನ್ಯಾಯ ಸಿಗೋವರೆಗೂ ಇಲ್ಲಿಂದ ಹೋಗಲ್ಲ ಎಂದು ಪಟ್ಟುಹಿಡಿದು ಧರಣಿ ಕೂತಿದ್ದಾರೆ. ಪರೀಕ್ಷೆಯಲ್ಲಿ ಫೇಲಾದ್ರೂ ಚಿಂತೆ ಇಲ್ಲ, ಪರೀಕ್ಷೆಗೆ ಕೂಡಲು ಅವಕಾಶ ಕೊಡಲೇಬೇಕು, ಇಲ್ಲವಾದಲ್ಲಿ ನಾವು ಪ್ರತಿಭಟನೆ ಬಿಡಲ್ಲ ಎಂದು ಪಾಲಕರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ ಸ್ಟಾರ್ ನಟನ ಮಗಳು

ಶಾಲಾ ಆಡಳಿತ ಮಂಡಳಿ ಹಾಗೂ ಹಾಗೂ ಪೇಷಕರ ವಿಭಿನ್ನ ಹೇಳಿಕೆಗಳಿಂದ ಪರೀಕ್ಷಾ ವಿದ್ಯಾರ್ಥಿಗಳ ಭವಿಷ್ಯ ಗೊಂದಲದಲ್ಲಿದೆ. ಕಳೆದ ನಾಲ್ಕು ದಿನಗಳಿಂದ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿ ಹಾಗೂ ಅವರ ಕುಟುಂಬ ಧರಣಿ ಕೂತಿದೆ. ಇಬ್ಬರು ವಿದ್ಯಾರ್ಥಿಗಳ ಜೊತೆ ಅಜ್ಜಿ, ಮಾವ ಪ್ರತಿಭಟನೆಗೆ ಕೂತಿದ್ದಾರೆ. ಪರೀಕ್ಷೆಗೆ ಎರಡು ದಿನ ಬಾಕಿ ಇರುವಾಗಲೇ ಇಂತಹ ಘಟನೆ ನಡೆದಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಲೆಯಲ್ಲಿ ಸಧ್ಯ 150 ವಿದ್ಯಾರ್ಥಿಗಳು ಇದ್ದು, ಇಬ್ಬರಿಗೆ ಹಾಲ್ ಟಿಕೆಟ್ ಇಲ್ಲವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *