ಯುಕೆ ಲಂಡನ್ ಕೆಸಿಎಫ್ 2021-22 ಸಾಲಿನ ನವ ಸಾರಥಿಗಳ ಘೋಷಣೆ

Public TV
1 Min Read

ರ್ನಾಟಕ ಕಲ್ಚರಲ್ ಫೌಂಡೇಶನ್, ಮಧ್ಯಪ್ರಾಚ್ಯ, ಮಲೇಷ್ಯಾ, ಯುರೋಪ್ ಮತ್ತು ಬ್ರಿಟನ್‍ನ ಕನ್ನಡಿಗರ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ಮತ್ತು ವಿವಿಧ ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಪ್ರತಿಭಾವಂತ ಮತ್ತು ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾರ್ಥಿವೇತನ, ಅಗತ್ಯವಿರುವವರಿಗೆ ವೈದ್ಯಕೀಯ ನೆರವು, ಸಾರ್ವಜನಿಕ ಆಂಬುಲೆನ್ಸ್ ಸೇವೆ, ಆಹಾರ ಕಿಟ್, ವಸತಿ ಯೋಜನೆ, ಬಡ ಹೆಣ್ಣು ಮಕ್ಕಳ ಕಲ್ಯಾಣ ಯೋಜನೆ ಮುಂತಾದ ಸಾಮಾಜಿಕ ಶೈಕ್ಷಣಿಕ ಸೇವೆಗಳ ಮೂಲಕ ಕೆಸಿಎಫ್ ಗುರುತಿಸಿಕೊಂಡಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಸಂಕಷ್ಟಕ್ಕೊಳಗಾದ ಗರ್ಭಿಣಿಯರನ್ನು, ಸಂದರ್ಶನ ವೀಸಾವಧಿ ಮುಗಿದ ಪ್ರವಾಸಿಗರನ್ನು, ಚಿಕಿತ್ಸೆ ಅನಿವಾರ್ಯವಿರುವ ರೋಗಿಗಳನ್ನು ಹಾಗೂ ವಿದ್ಯಾರ್ಥಿಗಳನ್ನು ಸೇರಿ ಎರಡು ಸಾವಿರದಷ್ಟು ಕನ್ನಡಿಗರನ್ನು ಚಾರ್ಟರ್ ವಿಮಾನಗಳ ಮೂಲಕ ಜಿಸಿಸಿಯಿಂದ ತಾಯ್ನಾಡಿಗೆ ತಲುಪಿಸಿಕೊಟ್ಟಿದೆ.

ಯುಕೆ ಲಂಡನ್ ಕೆಸಿಎಫ್ 2021-22 ಯುಕೆ ಸಮಿತಿಯ ನವ ಸಾರಥಿಗಳ ಘೋಷಣೆಯಾಗಿದ್ದು ಈ ಕೆಳಗಿನಂತೆ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ರಫೀಕ್ ಹಳೆಯಂಗಡಿ, ಉಪಾಧ್ಯಕ್ಷರಾಗಿ ರಹೀಮ್ ಬೈಕಂಪಾಡಿ ಮತ್ತು ಅಬ್ಬಾಸ್ ಮಕ್ಯಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸದಕತುಲ್ಲಾಹ್ ಮತ್ತು ಜೊತೆ ಕಾರ್ಯದರ್ಶಿಯಾಗಿ ಇರ್ಫಾನ್, ಫೈರೋಜ್, ಕೋಶಾಧಿಕಾರಿಯಾಗಿ ಆಸಿಫ್ ಬಜ್ಪೆಯವರನ್ನು ಆಯ್ಕೆ ಮಾಡಲಾಗಿದೆ.

ಕೆಸಿಎಫ್ ವಿದ್ಯಾರ್ಥಿ ವಿಂಗ್ ರಚನೆ ಮಾಡಿದ್ದು ಅಧ್ಯಕ್ಷರಾಗಿ ಹಫೀಜ್ ಅಹ್ಮದ್, ಉಪಾಧ್ಯಕ್ಷರಾಗಿ ಫೈಝಲ್, ಪ್ರಧಾನ ಕಾರ್ಯದರ್ಶಿಯಾಗಿ ಬದ್ರುದ್ದೀನ್ ಅವರನ್ನು ಆಯ್ಕೆ ಮಾಡಿ ಘೋಷಣೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಅಶ್ರಫ್ ಅಮಾನಿ ಲಂಡನ್, ಅರ್ಶಕ್ ನೂರಾನಿ ಲಂಡನ್ ಮತ್ತು ರಹೀಮ್ ಸಆದಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *