ಸಿಎಂ ಸ್ಥಾನ ಎಂಬ ವೈರಸ್‍ಗೆ ಕೈ ಹೈಕಮಾಂಡ್ ವ್ಯಾಕ್ಸಿನ್ ನೀಡಬೇಕು: ಶ್ರೀರಾಮುಲು

Public TV
2 Min Read

ಚಿತ್ರದುರ್ಗ: ಸಿಎಂ ಸ್ಥಾನ ಎಂಬ ವೈರಸ್‍ಗೆ ಕಾಂಗ್ರೆಸ್ ಹೈಕಮಾಂಡ್ ವ್ಯಾಕ್ಸಿನ್ ನೀಡಬೇಕೆಂದು ಸಚಿವ ಶ್ರೀರಾಮುಲು ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಜಿಲ್ಲೆ ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದಲ್ಲಿ ಕೋಟಿ ವೃಕರಷ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೈ ಪಕ್ಷದ ನಾಯಕರಲ್ಲಿ ನಾನು ಮುಖ್ಯಮಂತ್ರಿ ಆಗಬೇಕೆಂಬ ಆಸೆ ಹೆಚ್ಚಾಗಿದೆ. ಕಾಂಗ್ರೆಸ್ ನಾಯಕರಿಗೆ ಅಂಟಿಕೊಂಡ ಈ ವೈರಸ್‍ಗೆ ತಕ್ಷಣ ಲಸಿಕೆ ಕೊಡಬೇಕಿದೆ. ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್, ಮುನಿಯಪ್ಪ ನಡುವೆ ತೀವ್ರ ಪೈಪೋಟಿ ಶುರು ವಾಗಿದೆ. ಆದರೆ ಅವರು ಏನೇ ಪ್ರಯತ್ನ ಮಾಡಿದರು ಮತ್ತೆ 2023ರಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ವಿಶ್ವಾಸ ನನಗಿದೆ ಎಂದು ನುಡಿದಿದ್ದಾರೆ. ಇದನ್ನೂ ಓದಿ:  ಬೆಂಬಲ ಬೆಲೆಗೆ ಆಗ್ರಹಿಸಿ ರಸ್ತೆಯಲ್ಲಿ ಮಾವು, ಟೊಮ್ಯಾಟೊ ಸುರಿದು ಪ್ರತಿಭಟನೆ

ಕಾಂಗ್ರೆಸ್ ಪಕ್ಷದ ಪ್ರಚಾರ ವಾಹನದ ಮೇಲೆ ಸಿದ್ಧರಾಮಯ್ಯ ಚಿತ್ರ ತೆರವುಗೊಳಿಸಿರುವ ಬಗ್ಗೆ ಭೇಸರ ವ್ಯಕ್ತಪಡಿಸಿದ ಅವರು,ಸಿದ್ದರಾಮಯ್ಯ ಚಿತ್ರ ತೆರವು ಬಗ್ಗೆ ಮಾಧ್ಯಮದ ಮೂಲಕ ತಿಳಿದಿದ್ದೇನೆ. ಸಿದ್ದರಾಮಯ್ಯ ಅಹಿಂದ ಸಮುದಾಯ ಪರ ಕಾಳಜಿಯಿರುವ ದೊಡ್ಡ ನಾಯಕರಾಗಿದ್ದು, ಅಹಿಂದ್ ನಾಯಕ ಸಿದ್ದರಾಮಯ್ಯಗೆ ಅವಮಾನ ಮಾಡುವ ಕೆಲಸ ನಡೆದಿದೆ.ಬಿಜೆಪಿಯಲ್ಲಿ ಕಚ್ಚಾಟ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರು. ಆದರೆ ಇದೀಗ ಕಾಂಗ್ರೆಸ್ ಪಕ್ಷದಲ್ಲೇ ಕಚ್ಚಾಟ, ರಂಪಾಟ ನಡೆದಿದೆ. ಸಿಎಂ ಸ್ಥಾನದ ಪೈಪೋಟಿಯಲ್ಲಿ ಸಿದ್ದರಾಮಯ್ಯ ಭಾವಚಿತ್ರ ತೆರವು ಕೆಲಸನಡೆದಿದೆ. ಅವರಲ್ಲಿ ಪೈಪೋಟಿ ಇಲ್ಲವಾದರೆ ಕೈ ನಾಯಕರಿಗೆ ತಾಕತ್ತಿದ್ದರೆ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಘೋಷಿಸಲಿ ಎಂದು ಸವಾಲು ಹಾಕಿದ್ದಾರೆ.

ಡಿಸಿಎಂ ಹುದ್ದೆಗಾಗಿ ಕಾಯುವುದೇ ದೊಡ್ಡ ಪರೀಕ್ಷೆ :
ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಹಿಂದುಳಿತ ಹಾಗೂ ದಲಿತ ಸಮುದಾಯಕ್ಕೆ ಅವಕಾಶ ನೀಡಲಾಗಿದೆ. ದಲಿತ ಸಮುದಾಯದ ಗೋವಿಂದ ಕಾರಜೋಳ್ ಅವರಿಗೆ ಡಿಸಿಎಂ ಹುದ್ದೆ ನೀಡಲಾಗಿದೆ. ಶ್ರೀರಾಮುಲುಗೆ ಡಿಸಿಎಂ ಮಾಡಲು ಸಮಯಕ್ಕಾಗಿ ಕಾಯುತ್ತಿರಬಹುದು.ರಾಜಕಾರಣದಲ್ಲಿ ಕಾಯುವುದೇ ಒಂದು ದೊಡ್ಡ ಪರೀಕ್ಷೆ ನಮಗೆ ಕೊಟ್ಟ ಮಾತಿನಂತೆ ಪಕ್ಷ ನಡೆದುಕೊಳ್ಳಲಿದೆ. ಅಧಿಕಾರಕ್ಕಾಗಿ ಕಾಯಬೇಕು ಎಂದರು.

ಸಿಡಿಲೇಡಿ ಕೇಸ್‍ಗೆ ಸಂಬಂಧಿಸಿದಂತೆ ಶಾಸಕ ರಮೇಶ ಜಾರಕಿಹೊಳಿ ಕಾನೂನಾತ್ಮಕ ಹೋರಾಟ ನಡೆಯುತ್ತಿದೆ. ಕೋರ್ಟ್‍ನಲ್ಲಿ ಅವರು ಪ್ರಕರಣದಿಂದ ಕ್ಲೀನ್ ಚಿಟ್ ಪಡೆದು ಮರಳಿ ಬರುವ ವಿಶ್ವಾಸವಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *