ವಿಕಲಚೇತನರು ದೇವರ ಮಕ್ಕಳಿದ್ದಂತೆ: ಲಕ್ಷ್ಮೀ ಹೆಬ್ಬಾಳ್ಕರ್

Public TV
1 Min Read

ಬೆಳಗಾವಿ: ಬೆಳಗಾವಿಯ ತಾಲೂಕ ಪಂಚಾಯತ್ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಕಲಚೇತನ ಸ್ನೇಹಿ ಶೌಚಾಲಯ ಮತ್ತು ನೂತನ ಕಟ್ಟಡವನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು. ಇದನ್ನೂ ಓದಿ:  ಎನ್‍ಡಿಪಿಎಸ್ ಕಾಯ್ದೆ ಜಾರಿಗೆ ನಿಯಮ ರೂಪಿಸಲಾಗುವುದು: ಬಸವರಾಜ ಬೊಮ್ಮಾಯಿ

ಮಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ತಾಲೂಕ ಪಂಚಾಯತಿ ಅನುದಾನದಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದು, ಬೆಳಗಾವಿ ಶಹರದಲ್ಲಿ ಇದು ಮೊದಲ ವಿಕಲಚೇತನ ಸ್ನೇಹಿ ಶೌಚಾಲಯ ಹಾಗೂ ಸಭಾಭವನ ಕಟ್ಟಡವಾಗಿದೆ. ಹಲವು ವರ್ಷಗಳಿಂದ ವಿಕಲಚೇತನರು ಶೌಚಾಲಯ ಹಾಗೂ ವಿಶ್ರಾಂತಿ ತೆಗೆದುಕೊಳ್ಳಲು ಸಭಾಭವನದ ಬೇಡಿಕೆ ಇಟ್ಟಿದ್ದರು. ಇದನ್ನು ಮನಗಂಡು, ಅವರ ಬೇಡಿಕೆಯಂತೆ ಶೌಚಾಲಯ ಹಾಗೂ ಸಭಾಭವನ ಕಟ್ಟಡವನ್ನು ಉದ್ಘಾಟಿಸಿ ಅವರ ಬೇಡಿಕೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ:  ನಿರಾಶ್ರಿತ ಮಹಿಳೆಗೆ ಕೋವಿಡ್ ಪಾಸಿಟಿವ್- ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಪೊಲೀಸರು, ವೈದ್ಯರು

ವಿಕಲಚೇತನರು ದೇವರ ಮಕ್ಕಳಿದ್ದಂತೆ, ಅವರನ್ನು ನಾವೆಲ್ಲರೂ ಬೆಳೆಸಿ, ಪೋಷಿಸುವ ಮೂಲಕ ಅವರ ಬೆಳವಣಿಗೆಗೆ ಸಹಕರಿಸೋಣ, ಅಧಿಕಾರಿಗಳು ವಿಕಲಚೇತನರಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಅಧಿಕಾರಿಯಾಗಿ ಮಾತ್ರವಲ್ಲದೆ ಮಾನವೀಯತೆ ದೃಷ್ಟಿಯಿಂದ ಸ್ಪಂದಿಸುವ ಮೂಲಕ ನೇರವಾಗಬೇಕಿದೆ. ಸರ್ಕಾರದಿಂದ ಯಾವುದೇ ಯೋಜನೆಗಳು ಬಂದರೆ ತ್ವರಿತಗತಿಯಲ್ಲಿ ವಿಕಲಚೇತನರಿಗೆ ತಿಳಿಸುವ ಕೆಲಸ ಮಾಡುತ್ತೇನೆ. ಸದಾ ನಿಮ್ಮ ಕಷ್ಟಗಳಲ್ಲಿ ಭಾಗಿಯಾಗಿ ವಿಶೇಷವಾದ ಕಾಳಜಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *